ಜಾಹೀರಾತು ಲೋಕದ ಲೆಜೆಂಡ್ ಎನಿಸಿದ್ದ, ಪಿಯೂಷ್ ಪಾಂಡೆ ಇಂದು( ಅ. 24 ಶುಕ್ರವಾರ) ನಿಧನರಾಗಿದ್ದಾರೆ. ತಮ್ಮ ವಿಶಿಷ್ಟ ಜಾಹಿರಾತುಗಳ ಮೂಲಕ ಪ್ರತಿಭಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅವರು, ಆರೋಗ್ಯ ಸೋಂಕಿನಿಂದ ಬಳಲುತ್ತಿದ್ದು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ನಾಳೆ ಅಂತ್ಯಕ್ರಿಯೆ ನಡೆಯಲಿದ್ದು, ವಿಧಿ ವಿಧಾನಗಳು ಜರುಗಲಿದೆ ಎಂದು ಮಾಹಿತಿ ದೊರೆತಿದೆ.
ಭಾರತೀಯ ಜಾಹೀರಾತಿನ ಪ್ರಮುಖ ಆಡ್‌ಗಳಲ್ಲಿ, ಫೆವಿಕಾಲ್, ಕ್ಯಾಡ್ಬರಿ ಮತ್ತು ಏಶಿಯನ್ ಪೇಂಟ್ಸ್ ನಂತಹ ಪ್ರಸಿದ್ಧ ಜಾಹೀರಾತುಗಳ ಮೂಲಕ ತಮ್ಮ ಕ್ರಿಯಾಶೀಲ ಪ್ರತಿಭೆಯನ್ನು ತೋರಿದ ಜಾಹೀರಾತು ಧ್ವನಿ ಮರೆಯಾಗಿದೆ. ನಾಲ್ಕು ದಶಕಗಳ ಕಾಲ ಜಾಹೀರಾತು ಉದ್ಯಮದಲ್ಲಿ ಸೇವೆ ಸಲ್ಲಿಸಿ ಕಾರ್ಯನಿರ್ವಹಿಸಿದ ಅವರು 1982 ರಲ್ಲಿ ಓಗಿಲ್ವಿಗೆ ಸೇರಿ ತಮ್ಮ ಮೊದಲ ಜಾಹೀರಾತು ಸನ್‌ಲೈಟ್ ಡಿಟರ್ಜೆಂಟ್‌ಗಾಗಿ ಮೊದಲ ಸ್ಕ್ರಿಪ್ಟ್ ಬರೆದರು ಎನ್ನಲಾಗಿದೆ. ಆರು ವರ್ಷಗಳ ನಂತರ ಸಂಸ್ಥೆಯ ಕ್ರಿಯೇಟಿವ್ ವಿಭಾಗವನ್ನು ಮುನ್ನಡೆಸಿದರು.
ಅವರ ಮಾರ್ಗದರ್ಶನದಲ್ಲಿ ಅನೇಕ ಬ್ರಾಂಡ್ ಗಳಿಗೆ ಕಾಲತೀತ ಜಾಹೀರಾತುಗಳು ಮೂಡಿಬಂದಿದ್ದವು. ಓಗಿಲ್ವಿ ಇಂಡಿಯಾ ದಿ ಎಕನಾಮಿಕ್ ಟೈಮ್ಸ್ ನಡೆಸಿದ ಸ್ವತಂತ್ರ ಸಮೀಕ್ಷೆಯಾದ ಏಜೆನ್ಸಿ ರೆಕನರ್‌ನಲ್ಲಿ ನಿರಂತರ 12 ವರ್ಷಗಳ ಕಾಲ ನಂಬರ್ ಒನ್ ಜಾಹೀರಾತು ಸಂಸ್ಥೆಯಾಗಿ ಆಯ್ಕೆಯಾಯಿತು. ಈ ಕೊಡುಗೆಗಾಗಿ ಅವರಿಗೆ 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. BAYBEE Multipurpose Kids Study Table and Chair Set for Students with Storage, Book Holder, Bottle & Pen Holders | Reading & Writing Table for Kids Aged 2+ Years (Pink)
ಕ್ರಿಯೇಟಿವ್ ಜಾಹೀರಾತುಗಳಲ್ಲದೇ ನಟನೆಯತ್ತ ಭರವಸೆ ಮೂಡಿಸಿ, 2013ರಲ್ಲಿ ಜಾನ್ ಅಬ್ರಾಹಿಂ ಅಭಿನಯದ ಮದ್ರಾಸ್ ಕೆಫೆ ಚಿತ್ರದಲ್ಲಿ ಹಾಗೂ ಐಸಿಐಸಿಐ ಬ್ಯಾಂಕ್ ನ ಮ್ಯಾಜಿಕ್ ಪೆನ್ಸಿಲ್ ಪ್ರಾಜೆಕ್ಟ್ ವಿಡಿಯೋಗಳಲ್ಲಿ ಅಭಿನಯಿಸಿದರು ಎನ್ನಲಾಗಿದೆ. ಈ ಮೂಲಕ ಅಭಿನಯ ಮತ್ತು ಗೀತ ರಚನೆ, ಸಹಕಥೆಗೂ ಅವರು ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ವ್ಯಾಪಾರ, ಜಾಹೀರಾತು ಮತ್ತು ರಾಜಕೀಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತದ ರಕ್ಷಣಾ ವಲಯಕ್ಕೆ ₹79,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರದಿಂದ ಅಂಕಿತ