ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದ ತಾಯಿ ಮತ್ತು ಮಗ ಕೊನೆಯುಸಿರೆಳೆದಿದ್ದು, ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಿವಾಸಿಗಳಾದ ರಾಮು ಮತ್ತು ಅವರ ತಾಯಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಲಬುರಗಿ ಮತದಾರರ ಪಟ್ಟಿಯಲ್ಲಿ ಅಕ್ರಮ? ಎಸ್‌ಐಟಿ ಹೆಗಲಿಗೆ ತನಿಖೆ!
ದೀಪಾವಳಿ ಹಬ್ಬ ಮುಗಿಸಿ ತಾಯಿ-ಮಗ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ನ ಬುಕಿಂಗ್ ಕಛೇರಿ ಬೆಂಗಳೂರಿನ ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಇದೆ. ಆದರೆ, ಈ ಕಛೇರಿ ಮೇಲೆ ಕೇವಲ ಬೋರ್ಡ್ ಮಾತ್ರ ಇದ್ದು, ಬೀಗ ಜಡಿದು ಯಾವುದೇ ಸಿಬ್ಬಂದಿ ಇಲ್ಲದೆ ವ್ಯವಹಾರ ನಡೆಸುತ್ತಿತ್ತು.ಇದನ್ನೂ ಓದಿ: ಬಿಹಾರವನ್ನು ಹಿಂದುಳಿದಿಡಲು ಕಾಂಗ್ರೆಸ್ ಷಡ್ಯಂತ್ರ : ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿಯವರ ಗಂಭೀರ ಆರೋಪ..!
ಈ ಟ್ರಾವೆಲ್ಸ್ ಸಂಪೂರ್ಣವಾಗಿ ಆನ್ಲೈನ್ ಇ-ಬುಕ್ಕಿಂಗ್ ಮೂಲಕವೇ ಗ್ರಾಹಕರನ್ನು ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. ಈ ಘಟನೆಯು ಕೇವಲ ಬೋರ್ಡ್ ಗಳನ್ನು ಇಟ್ಟುಕೊಂಡು, ಯಾವುದೇ ಉತ್ತರದಾಯಿತ್ವವಿಲ್ಲದೆ, ಆನ್ಲೈನ್ ಮೂಲಕ ನಡೆಯುತ್ತಿರುವ ಅಕ್ರಮ ಟ್ರಾವೆಲ್ಸ್ ವ್ಯವಹಾರಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece