Skip to main content
ವಿಡಿಯೋ
1/3
metro

ದೀಪಾವಳಿ ಹಬ್ಬ - ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸುಧಾರಣೆ ಯಾಕೆ ಗೊತ್ತಾ!?

By Shravanthi R
ದೀಪಾವಳಿ ಹಬ್ಬ - ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸುಧಾರಣೆ ಯಾಕೆ ಗೊತ್ತಾ!?

2025 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಬೆಂಗಳೂರಿನ ವಾಯು ಗುಣಮಟ್ಟ ಹಿಂದೆದಿಗಿನ ವರ್ಷಗಳಿಗಿಂತ ಈ ಬಾರಿ ಉತ್ತಮವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಪಟಾಕಿಗಳ ಹಾವಳಿಯಿಂದ ನಗರ ಮಾಲಿನ್ಯದ ಪರಿಮಾಣದ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಹಿತಿ ಒದಗಿಸಿದೆ. ಈ ಬಗ್ಗೆ ಗಾಳಿಯ ಗುಣಮಟ್ಟವನ್ನು ಹಿಂದಿನ ವರ್ಷಗಳ ದೀಪಾವಳಿ ಹಬ್ಬ ಸಂದರ್ಭದ ಅಂಕಿ-ಅಂಶಗಳನ್ನು ಸಮೀಕರಿಸಿ ತಾಳೆ ಹಾಕಿದಾಗ ಕಳೆದ ವರ್ಷಗಳಿಗಿಂತ ಈ ವರ್ಷ ಬಾರಿ ಉತ್ತಮವಾಗಿದೆ ಎನ್ನಲಾಗಿದೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಂಕಿಅಂಶಗಳ ಪ್ರಕಾರ, ಮೂರು ಸ್ಥಳಗಳನ್ನು ಹೊರತುಪಡಿಸಿ, 2025 ರ ದೀಪಾವಳಿ ಹಬ್ಬದ ಸಮಯದಲ್ಲಿ ಬೆಂಗಳೂರಿನಾದ್ಯಂತ ಗಾಳಿಯ ಗುಣಮಟ್ಟ ಹಿಂದಿನ ವರ್ಷಗಳಿಗಿಂತ ಉತ್ತಮವಾಗಿ ಉಳಿದಿದೆ ಎಂದು ಮಾಹಿತಿ ತಿಳಿಸಲಾಗಿದೆ. ಈ ಬಾರಿ ವಾಯು ಗುಣಮಟ್ಟ ಸೂಚ್ಯಂಕವು ಬಾರಿ ಉತ್ತಮವಾಗಿದ್ದು, ಅಚ್ಚರಿಯ ಬೆಳವಣಿಗೆ ಕಂಡಿದೆ ಎನ್ನಲಾಗಿದೆ. 

ಸಿಲಿಕಾನ್‌ಸಿಟಿಯಲ್ಲಿ ಈ ರೀತಿಯ ಗಾಳಿಯ ಗುಣಮಟ್ಟವು ದೀಪಾವಳಿಯ ಸಂದರ್ಭದಲ್ಲಿ ಹದಗೆಡುತ್ತಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಕಾರಣವೇನೆಂಬುದರ ಕುರಿತು ಆಲೋಚಿಸುವುದಾದರೆ ಇಲ್ಲಿನ ಬಹುತೇಕರು ಬೇರೆ ಕಡೆಯ ನೆಲೆವಾಸಿಗಳಾಗಿದ್ದಾರೆ ಎನ್ನಬಹುದಾಗಿದೆ. ಇದರಿಂದ ಹಬ್ಬದ ಸಲುವಾಗಿ ತಂತಮ್ಮ ಊರಿಗೆ ತೆರಳಿದರ ಪರಿಣಾಮವಾಗಿ ಬೆಂಗಳೂರು ಖಾಲಿ ಖಾಲಿ ಹೊಡೆದಿತ್ತು ಎನ್ನಲಾಗಿದೆ. ಇದರಿಂದ ನಗರವು ಶಾಂತವಾಗಿದ್ದು, ಅಷ್ಟಾಗಿ ಪಟಾಕಿ ಸಿಡಿಮಿಡಿ ಇಲ್ಲದಾಗಿತ್ತು ಎಂದು ಅಂದಾಜಿಸಲಾಗಿದೆ. Peacock Toys & Games Castle Set | Construction & Building Block | 575-Pieces | Create Forts, Houses & More | Educational Creative Toy & Skill Development | Toy for Kids Ages 6+ Years

ಇದೀಗ ಈ ಬಾರಿ ನಗರದ ವಾಯು ಗುಣಮಟ್ಟ ಸೂಚ್ಯಂಕವು ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ, 98% ರಷ್ಟು ಉತ್ತಮವಾಗಿದೆ ಎಂದು ತಿಳಿಸಿದೆ. ವಾಯುಗುಣಮಟ್ಟ ಸೂಚ್ಯಂಕವು 100 ಕ್ಕಿಂತ ಹೆಚ್ಚು ತಲುಪಿದರೆ, ಅಪಾಯಕಾರಿಯೆಂದು; ಇದರಿಂದ ಶ್ವಾಸಕೋಶ ಹಾಗೂ ಹೃದಯಸಂಬಂಧಿ ಕಾಯಿಲೆಯಿರುವ ವ್ಯಕ್ತಿಗಳು, ವೃದ್ದರು ಹಾಗೂ ಮಕ್ಕಳಿಗೆ ತೊಂದರೆಯೆಂದು ತಜ್ಞರು ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಭರದ ಸಿದ್ಧತೆ...ವಿಜಯೇಂದ್ರ ಟೀಂನಲ್ಲಿ ಯಾರೆಲ್ಲ?