Skip to main content
ವಿಡಿಯೋ
1/3
cinema

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ಹಿಟ್‌ & ರನ್‌ ಮಾಡಿ ಎಸ್ಕೇಪ್?‌ ಗಾಯಗೊಂಡ ಮಹಿಳೆ ಹೇಳಿದ್ದೇನು?

By Ram Chethan
ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ಹಿಟ್‌ & ರನ್‌ ಮಾಡಿ ಎಸ್ಕೇಪ್?‌ ಗಾಯಗೊಂಡ ಮಹಿಳೆ ಹೇಳಿದ್ದೇನು?

ಬೆಂಗಳೂರು ಬ್ಯಾಟರಾಯನಪುರದಲ್ಲಿ ಅಕ್ಟೋಬರ್ 4 ರಂದು ಮಧ್ಯರಾತ್ರಿಯಲ್ಲಿ ನಡೆದ ಅಪಘಾತದಲ್ಲಿ ದಿವ್ಯಾ ಸುರೇಶ್ ಅವರ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅನಿತಾ ಗಂಭೀರವಾಗಿ ಗಾಯಗೊಂಡರು. ಘಟನೆದ ತಕ್ಷಣ ನಟಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಅವರ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಅಪಘಾತದ ನಂತರ ನಟಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಅಕ್ಟೋಬರ್ 4ರಂದು ಮಧ್ಯರಾತ್ರಿ 1:30ರ ಸುಮಾರಿಗೆ ಬ್ಯಾಟರಾಯನಪುರದ ಎಂ.ಎಂ. ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ಮಹಿಳೆಯ ಸಂಬಂಧಿ ಕಿರಣ್, ಅಕ್ಟೋಬರ್ 7ರಂದು ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.Lacoste Lacoste.12.12 Quartz Black Round Dial Men's Watch - 2011087

ದೂರಿನ ಪ್ರಕಾರ, ಗಾಯಗೊಂಡ ಅನಿತಾ ಅವರ ಸಂಬಂಧಿ ಅನುಷಾ ಅವರ ಆರೋಗ್ಯ ಸರಿಯಿಲ್ಲದ ಕಾರಣ, ಗಿರಿನಗರ ಆಸ್ಪತ್ರೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಕಿರಣ್ ಬೈಕ್ ಚಲಾಯಿಸುತ್ತಿದ್ದರು, ಅನುಷಾ ಮಧ್ಯೆ ಕುಳಿತಿದ್ದರೆ, ಅನಿತಾ ಹಿಂಬದಿ ಸೀಟಿನಲ್ಲಿದ್ದರು.2026 ಹತ್ತಿರ ಬರ್ತಿದೆ..ಈ 25 ಸ್ಥಳಗಳಿಗೆ ಭೇಟಿ ನೀಡಿ ನಿಮ್ಮ ರಜಾದಿನ ಮಜಾ ಮಾಡಿ! ಇಲ್ಲಿವೆ ನೋಡಿ ಬೆಸ್ಟ್‌ ಪ್ಲೇಸ್‌ಗಳು

ಅಲ್ಲಿ ನಾಯಿ ಬೊಗಳಿದ್ದಕ್ಕೆ ಬೈಕ್‌ ಅನ್ನು ಬಲಕ್ಕೆ ತಿರುಗಿಸಿದಾಗ, ಎದುರಿನಿಂದ ಬಂದ ದಿವ್ಯಾ ಸುರೇಶ್ ಅವರ ಕಾರು ಅನಿತಾ ಅವರ ಕಾಲಿಗೆ ಡಿಕ್ಕಿ ಹೊಡೆದಿದೆ. ಕಾರಿನ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಕೆಳಗೆ ಬಿದ್ದಿದ್ದು, ಅನಿತಾ ಅವರ ಕಾಲಿನ ಮಂಡಿ ಚಿಪ್ಪಿಗೆ ಗಂಭೀರ ಪೆಟ್ಟಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ನಟಿ ದಿವ್ಯಾ ಸುರೇಶ್ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಕಿರಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ, ಅನಿತಾ ಅವರ ಮಂಡಿ ಚಿಪ್ಪು ಮುರಿದಿರುವುದು ದೃಢಪಟ್ಟಿದೆ.

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಕಾರಿನ ಸಂಖ್ಯೆಯನ್ನು ಪತ್ತೆಹಚ್ಚಿದ ಬ್ಯಾಟರಾಯನಪುರ ಸಂಚಾರ ಪೊಲೀಸರು, ದಿವ್ಯಾ ಸುರೇಶ್‌ರನ್ನು ಕರೆಸಿ, ಅವರ ಕಾರನ್ನು ಜಪ್ತಿ ಮಾಡಿದ್ದರು. ಆದರೆ, ಅದೇ ರಾತ್ರಿ ನಟಿ ತಮ್ಮ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅನಿತಾ ಅವರ ಆಪರೇಷನ್‌ಗೆ ಸುಮಾರು ₹2 ಲಕ್ಷ ವೆಚ್ಚವಾಗಿದೆ. ನಾನು ಕ್ಯಾಬ್ ಚಲಾಯಿಸಿ ಜೀವನ ನಡೆಸುತ್ತಿದ್ದೇನೆ. ಇದುವರೆಗೂ ನಟಿ ದಿವ್ಯಾ ಸುರೇಶ್ ನಮ್ಮನ್ನು ಸಂಪರ್ಕಿಸಿಲ್ಲ. ದಯವಿಟ್ಟು ನಮಗೆ ಪರಿಹಾರ ಒದಗಿಸಿಕೊಡಿ ಎಂದು ಕಿರಣ್ ಮನವಿ ಮಾಡಿದ್ದಾರೆ.