‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ ಅಶ್ವಿನಿ ಗೌಡ ಅವರ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮ್ಮನ್ನು ಸಜ್ಜನರೆಂದು ಬಿಂಬಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ವಿಫಲವಾಗಿ, ಇದೀಗ ಅವರು ತೀರ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ಅಶ್ವಿನಿ ಅವರೇ ಸ್ಪಷ್ಟನೆ ನೀಡಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.
ಅಶ್ವಿನಿ ಗೌಡ ಅವರಿಗೆ ಸೇಡು ತೀರಿಸಿಕೊಳ್ಳುವುದು ಅತ್ಯಂತ ಪ್ರಿಯವಾದ ವಿಚಾರ. ಕಳೆದ ವಾರ ರಕ್ಷಿತಾ ಶೆಟ್ಟಿ ವಿರುದ್ಧ ಆಪಾದನೆಗಳನ್ನು ಮಾಡಿ, ಅವರನ್ನು ಕೆಟ್ಟವರನ್ನಾಗಿ ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ, ಇದು ಅವರಿಗೆ ಹಿನ್ನಡೆಯಾಯಿತು. ಕಿಚ್ಚ ಸುದೀಪ್ ಅವರಿಂದ ತೀವ್ರ ತರಾಟೆಗೆ ಒಳಗಾಗಿದ್ದರೂ, ಅಶ್ವಿನಿ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.HALDEN FALCON Belts For Men Casual (Adjustable Fits Up to 44 Inch Waist) Ratchet Straps, Unique Magnetic Auto-lock Buckle Formal Leather Belt For Men
ಈ ವಾರವೂ ಅವರು ತಮ್ಮ ಹಳೆಯ ಚಾಳಿಗಳನ್ನು ಮುಂದುವರೆಸಿದ್ದಾರೆ. ತಿಳಿದೂ ನಿಯಮಗಳನ್ನು ಉಲ್ಲಂಘಿಸುವುದು, ಇತರ ಸ್ಪರ್ಧಿಗಳನ್ನು ಏಕವಚನದಲ್ಲಿ ಮಾತನಾಡುವುದು, ಹಾಗೂ ತಮ್ಮನ್ನು ಯಾರಾದರೂ ಏಕವಚನದಲ್ಲಿ ಸಂಬೋಧಿಸಿದರೆ ಕೋಪಗೊಳ್ಳುವುದು ಮುಂತಾದ ಘಟನೆಗಳು ನಡೆದಿವೆ. ಆದರೆ, ಈ ಎಲ್ಲದರ ನಡುವೆ ಅವರು ಮಾಡಿದ ಒಂದು ಕೃತ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಹಿಟ್ & ರನ್ ಮಾಡಿ ಎಸ್ಕೇಪ್? ಗಾಯಗೊಂಡ ಮಹಿಳೆ ಹೇಳಿದ್ದೇನು?
ರಘು ಗೌಡ ಅವರು ಅಶ್ವಿನಿ ಗೌಡ ಅವರಿಗೆ ‘ಕಳಪೆ’ ನೀಡಿದ ನಂತರ, ಅಶ್ವಿನಿ ಸಿಟ್ಟಿಗೆದ್ದರು. ಬಳಿಕ ಪದೇ ಪದೇ ಶೌಚಾಲಯಕ್ಕೆ ಹೋಗುವಂತೆ ಒತ್ತಾಯಿಸಿದರು. ಹೀಗೆ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ, ಅವರು ಇತರ ಸ್ಪರ್ಧಿಗಳ ಹಲ್ಲುಜ್ಜುವ ಬ್ರಷ್‌ಗಳನ್ನು ಸಂಗ್ರಹಿಸಿಕೊಂಡು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆಲವರು ಅಶ್ವಿನಿ ಗೌಡ ಅವರು ಇತರ ಸ್ಪರ್ಧಿಗಳ ಬ್ರಷ್‌ಗಳನ್ನು ಬಳಸಿ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ಆರೋಪಿಸಿದ್ದರೆ, ಇನ್ನೂ ಕೆಲವರು ಆ ಬ್ರಷ್‌ಗಳನ್ನು ಶೌಚಾಲಯದಲ್ಲಿ ಬಚ್ಚಿಟ್ಟಿರಬಹುದು ಎಂದು ಊಹಿಸಿದ್ದಾರೆ. ಈ ಬಗ್ಗೆ ಅಶ್ವಿನಿ ಗೌಡ ಅವರೇ ಅಧಿಕೃತ ಸ್ಪಷ್ಟನೆ ನೀಡಬೇಕಾಗಿದೆ.