Skip to main content
ವಿಡಿಯೋ
1/3
general

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ವಿವಾದ: ತಿಂಗಳಲ್ಲಿ 250 ಕಡೆ ಆರೆಸ್ಸೆಸ್‌ ಪಥ ಸಂಚಲನ ನಡೆದಿದೆ, ಚಿತ್ತಾಪುರದಲ್ಲಿ ಏನು ಸಮಸ್ಯೆ?

By Pavitra Ganapathi Baradavalli
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ವಿವಾದ: ತಿಂಗಳಲ್ಲಿ 250 ಕಡೆ ಆರೆಸ್ಸೆಸ್‌ ಪಥ ಸಂಚಲನ ನಡೆದಿದೆ, ಚಿತ್ತಾಪುರದಲ್ಲಿ ಏನು ಸಮಸ್ಯೆ?

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) 100ರ ಸಂಭ್ರಮಾಚರಣೆಯ ನಿಮಿತ್ತ ರಾಜ್ಯಾದ್ಯಂತ ಕಳೆದ ಒಂದು ತಿಂಗಳಲ್ಲಿ 250ಕ್ಕೂ ಹೆಚ್ಚು ಕಡೆ ಪಥಸಂಚಲನ ನಡೆದಿದೆ. ಆದರೆ, ಎಲ್ಲಿಯೂ ಯಾವುದೇ ಸಮಸ್ಯೆ ಎದುರಾಗದಿದ್ದರೂ ಚಿತ್ತಾಪುರದಲ್ಲಿ ಮಾತ್ರ ಏಕೆ ಸಮಸ್ಯೆ ಉದ್ಭವಿಸಿತು? ಈ ಪ್ರಶ್ನೆ ಕಲಬುರಗಿಯ ರಿಂಗ್ ರಸ್ತೆಯಲ್ಲಿರುವ ಹೈಕೋರ್ಟ್‌ ಪೀಠದಲ್ಲಿ ಪ್ರತಿಧ್ವನಿಸಿತು.

ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್‌) 100ರ ಸಂಭ್ರಮಾಚರಣೆಯ ನಿಮಿತ್ತ ರಾಜ್ಯಾದ್ಯಂತ ಕಳೆದ ಒಂದು ತಿಂಗಳಲ್ಲಿ 250ಕ್ಕೂ ಹೆಚ್ಚು ಕಡೆ ಪಥಸಂಚಲನ ನಡೆದಿದೆ. ಆದರೆ, ಎಲ್ಲಿಯೂ ಯಾವುದೇ ಸಮಸ್ಯೆ ಎದುರಾಗದಿದ್ದರೂ ಚಿತ್ತಾಪುರದಲ್ಲಿ ಮಾತ್ರ ಏಕೆ ಸಮಸ್ಯೆ ಉದ್ಭವಿಸಿತು? ಪ್ರಶ್ನೆ ಕಲಬುರಗಿಯ ರಿಂಗ್ ರಸ್ತೆಯಲ್ಲಿರುವ ಹೈಕೋರ್ಟ್ಪೀಠದಲ್ಲಿ ಪ್ರತಿಧ್ವನಿಸಿತು.ಇದನ್ನೂ ಓದಿ: ವಿರಾಟ “ದರ್ಶನ”ಕ್ಕೆ ಸಜ್ಜಾಗಿದೆ ಸಿಡ್ನಿ; ಬಹುಶಃ ಕೊನೆಯ ಬಾರಿ ಆಗಬಹುದೆ?

ಚಿತ್ತಾಪುರದಲ್ಲಿ .19ರಂದು ಆರ್ಎಸ್ಎಸ್ಪಥಸಂಚಲನಕ್ಕೆ ತಹಸೀಲ್ದಾರ್ಅನುಮತಿ ನಿರಾಕರಿಸಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ಪಾಟೀಲ್ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ಅವರು ಕೋರ್ಟ್ಹಾಲ್‌ 4ರಲ್ಲಿ ನಡೆಸಿದರು. ಸರ್ಕಾರದ ಪರವಾಗಿ ಅಡ್ವೋಕೇಟ್ಜನರಲ್ಶಶಿಕಿರಣ ಶೆಟ್ಟಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಮಯಾವಕಾಶ ಕೋರಿದರು. ಆದರೆ, ಆರ್ಎಸ್ಎಸ್ಪರ ವಕೀಲ ಅರುಣ ಶ್ಯಾಮ್ಅವರು ವಿಡಿಯೋ ಕಾನ್ಫರೆನ್ಸ್ಮೂಲಕ ಭಾಗವಹಿಸಿ ಇದನ್ನು ವಿರೋಧಿಸಿದರು.ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ವಿಶ್ವ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನಾ, ಸಿಕ್ಸರ್‌ಗಳ ದಾಖಲೆ ಛಿದ್ರ!

ಅಕ್ಟೋಬರ್‌ 17ರಂದು ಸಂಘವು ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ರಾಜ್ಯದಾದ್ಯಂತ 250 ಕಡೆ ಪಥಸಂಚಲನ ನಡೆದರೂ ಎಲ್ಲಿಯೂ ಸಮಸ್ಯೆಯಾಗಿಲ್ಲ. ಆದರೆ ಚಿತ್ತಾಪುರದಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಇದನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ಎರಡು ವಾರಗಳ ಸಮಯ ಬೇಕು ಎಂದು ಸರ್ಕಾರ ಕೋರುತ್ತಿದೆ. ಆದರೆ, ಕಾಲಹರಣ ಸರಿಯಲ್ಲ. ನವೆಂಬರ್‌ 2ಕ್ಕೆ ಪಥಸಂಚಲನಕ್ಕೆ ತಯಾರಿ ನಡೆದಿದೆ. ಸ್ಥಳೀಯ ಭದ್ರತೆ ಒದಗಿಸಲಾಗದಿದ್ದರೆ ಕೇಂದ್ರೀಯ ಭದ್ರತಾ ಪಡೆ ನಿಯೋಜಿಸಿ. ನವೆಂಬರ್‌ 2ಕ್ಕೆ ಅನುಮತಿ ನೀಡಿ, ಇತರರು ಚಿತ್ತಾಪುರದಲ್ಲಿ ವರ್ಷವಿಡೀ ಪ್ರತಿಭಟನೆ, ಪಥಸಂಚಲನ ಮಾಡಲಿ. ಆದರೆ, ಬಂದೋಬಸ್ತ್ಜೊತೆಗೆ ನಮ್ಮ ಸಂಘಟನೆಗೆ ಅನುಮತಿ ನೀಡಿ.ಇದನ್ನೂ ಓದಿ: ಇಂಡಿಯಾ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ, 3ನೇ ಬಾರಿ ಟಾಸ್ ಸೋತ ಗಿಲ್; ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ

ಸರ್ಕಾರದ ಪರವಾಗಿ ಶಶಿಕಿರಣ ಶೆಟ್ಟಿ, ಚಿತ್ತಾಪುರದಲ್ಲಿ ಈಗಾಗಲೇ 8 ಸಂಘಟನೆಗಳು ನವೆಂಬರ್‌ 2ಕ್ಕೆ ಪಥಸಂಚಲನ ಮತ್ತು ಪ್ರತಿಭಟನೆಗೆ ಅನುಮತಿ ಕೋರಿವೆ. ಅಕ್ಟೋಬರ್‌ 19ರಿಂದ ಚಿತ್ತಾಪುರ ಮತ್ತು ಸತ್ತುಮುತ್ತದಲ್ಲಿ ಪರಿಸ್ಥಿತಿ ಸರಿಯಿಲ್ಲ ಎಂದು ಜಿಲ್ಲಾ ಎಸ್ಪಿ ವರದಿ ಮಾಡಿದ್ದಾರೆ. ಆದ್ದರಿಂದ, ಕಾನೂನು-ಸುವ್ಯವಸ್ಥೆ ಕಾಪಾಡಲು ಸಮಯಾವಕಾಶ ನೀಡಿ, ಎಂದು ವಾದಿಸಿದರು.ಇದನ್ನೂ ಓದಿ: ಭಾರತ-ಅಮೆರಿಕ ಸುಂಕ ಯುದ್ಧದ ಅಂತ್ಯದತ್ತ? ಶೀಘ್ರದಲ್ಲೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ?

ಆರ್ಎಸ್ಎಸ್ಪರ ವಕೀಲ ಅರುಣ ಶ್ಯಾಮ್‌, ಪಥಸಂಚಲನ ನಡೆಸುವುದು ಸಂಘದ ಮೂಲಭೂತ ಹಕ್ಕು. ಸಂವಿಧಾನ ನೀಡಿರುವ ಹಕ್ಕನ್ನು ಮೊಟಕುಗೊಳಿಸುವುದು ಸರಿಯೇ? ಶಾಂತಿಯುತವಾಗಿ ಪಥಸಂಚಲನ ನಡೆಸಲು ಅನುಮತಿ ನೀಡಿ, ಎಂದು ಕೋರಿದರು. ವಿಚಾರಣೆಯನ್ನು ನವೆಂಬರ್‌ 30ಕ್ಕೆ ಮುಂದೂಡಲಾಯಿತು.INDO ERA Women's Straight Linen Floral Printed Kurta & Pant with Dupatta Set (IEOUT10562)