Skip to main content
ವಿಡಿಯೋ
1/3
sports

ಬಾಸ್ಕೆಟ್‌ಬಾಲ್‌ - ಕಾನೂನು ಸೆಣಸಾಟದಲ್ಲಿ NBA, ಜೂಜು ಹಗರಣ ಹಾಗೂ ಅಕ್ರಮ ಬೆಟ್ಟಿಂಗ್ ಶಾಕ್‌!

By Shravanthi R
ಬಾಸ್ಕೆಟ್‌ಬಾಲ್‌ - ಕಾನೂನು ಸೆಣಸಾಟದಲ್ಲಿ NBA, ಜೂಜು ಹಗರಣ ಹಾಗೂ ಅಕ್ರಮ ಬೆಟ್ಟಿಂಗ್ ಶಾಕ್‌!

ಬಾಸ್ಕೆಟ್‌ಬಾಲ್ ಲೋಕವನ್ನು ನಡುಗಿಸಿರುವ ಅಕ್ರಮ ಜೂಜು ಪ್ರಕರಣದಲ್ಲಿ ಕೋಚ್‌ಗಳು, ಆಟಗಾರರು ಮತ್ತು ಕ್ಲಬ್‌ಗಳ ವಿರುದ್ಧ FBI ತನಿಖೆ ಆರಂಭಿಸಿದೆ.

ಅಕ್ರಮ ಬೆಟ್ಟಿಂಗ್‌ ಹಾಗೂ ಜೂಜು ಹಗರಣಕ್ಕೆ ಸಂಬಂಧಿಸಿದಂತೆ, National Basketball Association (NBA) ಗಂಭೀರ ಕಾನೂನು ಘರ್ಷಣೆಗೆ ಒಳಪಟ್ಟಿದೆ. ಕ್ರೀಡಾ ಜೂಜಾಟದ ಅಕ್ರಮದಲ್ಲಿ ನಾಲ್ಕು ಕ್ಲಬ್‌ಗಳು, ಆಟಗಾರರು ಹಾಗೂ ತರಬೇತುದಾರರನ್ನು ಒಳಗೊಂಡಂತೆ, 30 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. FBI ತನಿಖೆ ನಡೆಸುತ್ತಿರುವ ಈ ಜಾಲದಲ್ಲಿ ಹಲವರ ಅಕ್ರಮ ಕೈವಾಡವಿದೆ ಎನ್ನಲಾಗಿದೆ. 

ಗುರುವಾರ ಸ್ಪೋಟಗೊಂಡಿರುವ ಬಾಸ್ಕೆಟ್‌ಬಾಲ್‌ ಅಕ್ರಮ ಬೆಟ್ಟಿಂಗ್‌ ಹಾಗೂ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, NBA ಆಯುಕ್ತ ಆಡಮ್‌ ಸಿಲ್ವರ್‌ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಈ ಸುದ್ದಿಯು ನನಗೆ ತೀವ್ರ ಬೇಸರ ಹಾಗೂ ಗಲಿಬಿಲಿಗೆ ಎಡೆಮಾಡಿದೆ” ಎಂದು ಉತ್ತರಿಸಿದ್ದಾರೆ. Vivo T4 Lite 5G Titanium Gold_128GB+6GB

FBI ನಡೆಸಿದ ತನಿಖೆಯಿಂದ ಬಯಲಾಗಿರುವ ಜೂಜಾಟದ ಅಕ್ರಮದಲ್ಲಿ ನಾಲ್ಕು NBA ಕ್ಲಬ್ ಗಳು ಸೇರಿದಂತೆ,  ಪೋರ್ಟ್ ಲ್ಯಾಂಡ್ ಟ್ರೇಲ್ ಬ್ಲೇಜರ್ಸ್ ಕೋಚ್ ಚಾನ್ಸಿ ಬಿಲ್ಲಿಪ್ಸ್, ಮಿಯಾಮಿ ಹೀಟ್ ಫಾರ್ವರ್ಡ್ ಟೆರ್ರಿ ರೋಜಿಯರ್ ಮತ್ತು ಹಲವರ ಮೇಲೆ ಫೆಡರಲ್ ಆರೋಪಗಳನ್ನು ಹೊತ್ತಿದ್ದು, ವಿಚಾರಣೆಯನ್ನು ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ 2025 - ಪ್ರಚಾರಕ್ಕಾಗಿ AI ಬಳಕೆಗೆ ಚುನಾವಣಾ ಆಯೋಗದ ಸಲಹೆ ಸೂಚನೆ