Skip to main content
ವಿಡಿಯೋ
1/3
entertainment

ಬಿಗ್ ಬಾಸ್ ಕನ್ನಡ: ದೀಪಾವಳಿ ವಾರದಲ್ಲಿ ಸ್ಪರ್ಧಿಗಳು ಅನುಭವಿಸಿದ ಅಚ್ಚರಿ ಉಡುಗರೆ ಏನ್‌ ಗೊತ್ತಾ?

By Ram Chethan
ಬಿಗ್ ಬಾಸ್ ಕನ್ನಡ: ದೀಪಾವಳಿ ವಾರದಲ್ಲಿ ಸ್ಪರ್ಧಿಗಳು ಅನುಭವಿಸಿದ ಅಚ್ಚರಿ ಉಡುಗರೆ  ಏನ್‌ ಗೊತ್ತಾ?

ಎಲಿಮಿನೇಷನ್‌ ಭಯದ ನಡುವೆಯೂ ಈ ವಾರ ಬಿಗ್ ಬಾಸ್ ಮನೆ ಸದಸ್ಯರಿಗೆ ವಿಶೇಷ ದೀಪಾವಳಿ ಉಡುಗರೆ ದೊರೆತಿದೆ. ಸ್ಪರ್ಧಿಗಳು ನಾಮಿನೇಷನ್ ಕಾರ್ಯವಲ್ಲದೆ ಸುರಕ್ಷಿತರಾಗಿದ್ದು, ಮುಂದಿನ ವಾರ ಎಲಿಮಿನೇಷನ್ ಯಾರು ಎದುರಿಸುತ್ತಾರೆ ಎಂಬ ಕುತೂಹಲ ತೀವ್ರವಾಗಿದೆ.

ದೀಪಾವಳಿ ಹಬ್ಬದ ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಅಚ್ಚರಿಯ ಗಿಫ್ಟ್ ಸಿಕ್ಕಿದೆ. ಈ ವಿಶೇಷ ಉಡುಗೊರೆ ಬಗ್ಗೆ ಅವರಿಗೆ ಇನ್ನೂ ಅರಿವಿಲ್ಲ. ಇದು ನಿಜಕ್ಕೂ ಅವರೆಲ್ಲರಿಗೂ ದೊಡ್ಡ ಸಂತಸ ತಂದಿದೆ.Casio Edifice EFR-539D-1AVUDF Analog Black Dial Men Watch Silver Metal Strap (EX191)

ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ದೊಡ್ಡ ಚಿಂತೆಯಿತ್ತು. ನಾಮಿನೇಷನ್ ಆಗುವುದನ್ನು ತಪ್ಪಿಸಲು ಅವರು ತೀವ್ರವಾಗಿ ಹೋರಾಡಿದ್ದರು ಮತ್ತು ಕಠಿಣ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು. ಈ ವಾರ ಮನೆಯಿಂದ ಹೊರಹೋಗುವ ಭಯ ಅವರನ್ನು ಕಾಡುತ್ತಿತ್ತು.

ಆದರೆ, ಈ ವಾರ ಎಲಿಮಿನೇಷನ್ ಇರುವುದಿಲ್ಲ ಎಂಬುದು ಸ್ಪರ್ಧಿಗಳಿಗೆ ತಿಳಿದಿಲ್ಲ. ನಾಮಿನೇಷನ್ ಕಾರ್ಯದ ನಂತರ, ನಾಮಿನೇಟ್ ಆಗಿದ್ದೇವೆ ಎಂದು ಭಾವಿಸಿ ಹಲವರು ತೀವ್ರ ಒತ್ತಡದಲ್ಲಿದ್ದರು. ವೋಟಿಂಗ್ ಲೈನ್ಸ್ ಕೂಡ ತೆರೆದಿಲ್ಲ.ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಭಾರೀ ಬ್ಲಾಕ್‌ಮೇಲ್ ಆರೋಪ ...ಅಬ್ಬಾ ಎಷ್ಟು ಕೋಟಿಗೆ ಬೇಡಿಕೆ ಗೊತ್ತಾ?

ಮುಂದಿನ ವಾರ ಮಿಡ್-ವೀಕ್ ಎಲಿಮಿನೇಷನ್ ನಡೆಯುತ್ತದೆಯೇ ಅಥವಾ ಎಲಿಮಿನೇಷನ್ ಮುಂದಿನ ವಾರಕ್ಕೆ ಮುಂದುವರೆಯುತ್ತದೆಯೇ ಎಂದು ಕಾದು ನೋಡಬೇಕು. ಸದ್ಯಕ್ಕೆ, ಈ ವಾರ ಸ್ಪರ್ಧಿಗಳು ಸುರಕ್ಷಿತರಾಗಿದ್ದಾರೆ.

ಪ್ರಸ್ತುತ ಸ್ಪಂದನಾ ಸೋಮಣ್ಣ, ಮಾಳು ನಿಪನಾಳ, ಧನುಷ್ ಗೌಡ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್, ಗಿಲ್ಲಿ ನಟ, ಕಾವ್ಯ ಶೈವ, ಜಾಹ್ನವಿ, ರಘು ಮ್ಯೂಟೆಂಟ್, ಸೂರಜ್, ರಾಶಿಕಾ ಶೆಟ್ಟಿ, ರಿಷಾ ಗೌಡ, ಮಲ್ಲಮ್ಮ, ಮತ್ತು ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮುಂದಿನ ವಾರ ಯಾರು ಹೊರಗೆ ಹೋಗುತ್ತಾರೆಂದು ನೋಡಬೇಕಿದೆ.