Skip to main content
ವಿಡಿಯೋ
1/3
entertainment

ಖ್ಯಾತ ಬಾಲಿವುಡ್‌ ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ವಿರುದ್ಧ ಲೈಂಗಿಕ ಕಿರು**ಕುಳ ಆರೋಪ: ಬಂಧನ - ಬಿಡುಗಡೆ!?

By Shravanthi R
ಖ್ಯಾತ ಬಾಲಿವುಡ್‌ ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ವಿರುದ್ಧ ಲೈಂಗಿಕ ಕಿರು**ಕುಳ ಆರೋಪ: ಬಂಧನ - ಬಿಡುಗಡೆ!?

ಸಚಿನ್-ಜಿಗರ್ ಸಂಗೀತ ಜೋಡಿಯ ಸಂಯೋಜಕ ಹಾಗೂ ಗಾಯಕ ಸಚಿನ್ ಸಾಂಘ್ವಿ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಯಿತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಬಾಲಿವುಡ್‌ನ ಪ್ರಸಿದ್ಧ ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ಅವರ ವಿರುದ್ಧ 29 ವರ್ಷದ ಮಹಿಳೆಯೊರ್ವರ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಗಂಭೀರ ಆರೋಪಗಳಿಂದ ಅವರನ್ನು ಬಂಧಿಸಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿ, ಸಂಗೀತ ಆಲ್ಬಂನಲ್ಲಿ ಅವಕಾಶ ಮತ್ತು ಮದುವೆ ಪ್ರಸ್ತಾಪ ನೀಡಿ, ಸ್ಟುಡಿಯೋದಲ್ಲಿ ಬಹುವಚನದಲ್ಲಿ ದೌರ್ಜನ್ಯ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ ಎನ್ನಲಾಗಿದೆ.

ಬಾಲಿವುಡ್‌ನಲ್ಲಿ ಹಲವಾರು ಗಮನಾರ್ಹ ಚಲನಚಿತ್ರಗೀತೆಗಳನ್ನು ನೀಡಿರುವ ಸಚಿನ್‌-ಜಿಗರ್‌ ಅವರ ವಿರುದ್ದ ಶುಕ್ರವಾರ (ಅಕ್ಟೋಬರ್ 24) ಪ್ರಕರಣದ ಔಪಚಾರಿಕ ದೂರನ್ನು ಸ್ವೀಕರಿಸಿದ ನಂತರ, ಪೊಲೀಸರು ಅವರನ್ನು ಬಂಧಿಸಿದ್ದರೂ, ತಕ್ಷಣ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವು ಬಾಲಿವುಡ್ ಸಂಗೀತ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. Infinix Note 50x 5G+ (Sea Breeze Green, 6GB RAM, 128GB Storage) | MediaTek D7300 Ultimate | 90FPS BGMI Gaming | 5500mAH Battery with 45W FastCharge | 650K+ AnTuTu AI

ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿಯಲ್ಲಿ ಅವರನ್ನು ಬಂಧಿಸಲಾಗಿದೆ. 'ಸ್ತ್ರೀ', 'ಭೇಡಿಯಾ', 'ಪರಮ್ ಸುಂದರಿ', 'ಥಮ್ಮಾ' ಸ್ತ್ರೀ 2' ಹೀಗೆ ಜನಪ್ರಿಯ ಹಾಡುಗಳು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದೆ. ಇದಲ್ಲದೆ, 'ಒಮ್ ಶಾಂತಿ ಒಮ್' ರಿಯಾಲಿಟಿ ಶೋದಲ್ಲಿ ಜಡ್ಜ್ ಆಗಿದ್ದರು. ಅವರ ಮಗಳು ತನಿಷ್ಕಾ ಸಾಂಘ್ವಿ ಹಾಡು 'ಲಾಡ್ಕಿ'ಗೆ ಸಂಗೀತ ನೀಡಿ ವೈರಲ್ ಆಗಿತ್ತು. ಈಗ ಅವರ ಇನ್‌ಸ್ಟಾಗ್ರಾಂ ಅಕೌಂಟ್ ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿ. 8 ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ - ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ