ಈ ಬಾರಿ ಹೆಚ್ಚು ಚರ್ಚೆಯಲ್ಲಿರುವವರು ಅಶ್ವಿನಿ ಗೌಡ, ಕಾಕ್ರೋಚ್ ಸುಧಿ ಮತ್ತು ರಕ್ಷಿತಾ ಶೆಟ್ಟಿ. ಅಶ್ವಿನಿ ಅವರು ಮನೆಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಾರೆ. ತರಕಾರಿ ಕತ್ತರಿಸದೇ ಆಟ ಆಡುವುದು, ಮನೆಯ ವಸ್ತುಗಳನ್ನು ಅಜಾಗರೂಕವಾಗಿ ಬಳಸುವುದು ಮುಂತಾದವು ಅವರ ವಿರುದ್ಧದ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವಾರ ಸುದೀಪ್ ಅವರು ಎಚ್ಚರಿಸಿದರೂ, ಈ ವಾರವೂ ಅಶ್ವಿನಿ ತಪ್ಪು ಮರುಕಳಿಸಿದ್ದು, ಅವರಿಗೆ ಸುದೀಪ್ ಕಡೆಯಿಂದ ಮತ್ತೆ ಪಾಠ ಸಿಗುವ ಸಾಧ್ಯತೆ ಇದೆ.
ಇನ್ನೊಂದೆಡೆ, ಕಾಕ್ರೋಚ್ ಸುಧಿ ಅವರು ರಕ್ಷಿತಾಗೆ “ಸೆಡೆ” ಎಂಬ ಪದ ಬಳಸಿದ್ದು ವಿವಾದ ಸೃಷ್ಟಿಸಿದೆ. ಮನೆಯವರು ಅದನ್ನು ತಪ್ಪೆಂದು ಹೇಳಿದಾಗ ಸುಧಿ ತಮ್ಮ ಗ್ರಾಮೀಣ ಶೈಲಿಯ ಸಮರ್ಥನೆ ನೀಡಿದರು, ಆದರೆ ಪ್ರೇಕ್ಷಕರು ಇದನ್ನು ಸ್ವೀಕರಿಸಿಲ್ಲ. ಈ ವಿಷಯದಲ್ಲಿ ಸುದೀಪ್ ಖಂಡಿತವಾಗಿ ಸುಧಿಗೆ ತರಾಟೆ ನೀಡುವರು ಎಂಬ ನಿರೀಕ್ಷೆ ಇದೆ.Cole Haan Men's Reagan Lace Up Sneaker
ಅಂತೆಯೇ, ರಕ್ಷಿತಾ ಶೆಟ್ಟಿ ಈ ವಾರ ಮನೆಯಲ್ಲಿಯೇ ಶಾಂತ, ವಿವೇಕದಾಯಕ ಮತ್ತು ಪ್ರಬುದ್ಧ ಧೋರಣೆ ತೋರಿಸಿದ್ದಾರೆ. ಅವರು ಮಾತಿನ ಮೂಲಕ ಮತ್ತು ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ‘ಹೊರಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ’ ಎಂಬ ಅವರ ಮಾತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಬಿಗ್ ಬಾಸ್ ಕನ್ನಡ: ದೀಪಾವಳಿ ವಾರದಲ್ಲಿ ಸ್ಪರ್ಧಿಗಳು ಅನುಭವಿಸಿದ ಅಚ್ಚರಿ ಉಡುಗರೆ ಏನ್ ಗೊತ್ತಾ?
ಹೀಗಾಗಿ, ಈ ವಾರದ ಎಪಿಸೋಡ್‌ನಲ್ಲಿ ರಕ್ಷಿತಾಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕರೂ ಅಚ್ಚರಿ ಏನಿಲ್ಲ. ಮತ್ತೊಂದೆಡೆ ಅಶ್ವಿನಿ ಮತ್ತು ಸುಧಿಗೆ ಸುದೀಪ್ ಕಡೆಯಿಂದ ಕಠಿಣ ಪಾಠ ಇರಬಹುದು ಎಂಬುದು ಈಗ ಎಲ್ಲರ ಊಹೆ.