ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಆಡಳಿತ ಕಾಲಾವಧಿಯಲ್ಲಿ ಅಮೆರಿಕಾ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ರ್ತಗಳ ಮೇಲೆ ನಿಯಂತ್ರಣ ಹೊಂದಿತ್ತು ಎಂದು ಮಾಜಿ ಕೇಂದ್ರ ಗುಪ್ತಚರ ಏಜೆಂಟ್( ಸಿಐಎ) ಅಧಿಕಾರಿಯಾದ ಜಾನ್ ಕಿರಿಯಾಕೌ ಅವರು ಆರೋಪಿಸಿದ್ದಾರೆ.
ಸಿಐಎಯಲ್ಲಿ ವಿಷ್ಲೇಶಕರಾಗಿ, ಭಯೋತ್ಪಾದನಾ ನಿಗ್ರಹಾ ದಳದಲ್ಲಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವಿರುವ ಜಾನ್ ಅವರು ಮಾಡಿರುವ, ಈ ಗಂಭೀರ ಆರೋಪವು ಚರ್ಚೆಗೆ ಒಳಗಾಗಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಪಾಕ್ ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದರು ಎಂದು ಹೇಳಲಾದ ಈ ವಿಷಯವು ಅವರ ಆಡಳಿತಾವಧಿಯಲ್ಲಿ ಅಮೆರಿಕಾವು ಹೇಗೆ ಪಾಕಿಸ್ತಾನಕ್ಕೆ ಲಕ್ಷಾಂತರ ರೂಪಾಯಿ ನೆರವು ನೀಡಿತ್ತು ಅನ್ನೋ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. realme 14x 5G Smartphone 6+128GB red, 6.67-inch Screen, 120Hz Display, 6000mAh Battery, 80MP, MediaTek Dimensity 6300, ArmorShell Protection, IP69
ಮುಷರಫ್ ಅವರು ಅಮೆರಿಕದ ಪೆಂಟಗನ್‌ಗೆ ಶಸ್ರ್ತಾಸ್ರ್ತಗಳನ್ನು ಹಸ್ತಾಂತರಿಸಿದರು ಮತ್ತು ವಾಷಿಂಗ್ಟನ್ ಒಂದು ರೀತಿಯಲ್ಲಿ ಅವರನ್ನೂ ಖರೀದಿಸಿತ್ತು ಎಂದು ತಿಳಿಸಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡುವ ಸಂದರ್ಭದಲ್ಲಿ ಅವರು ಹೇಳಿರುವ ಈ ಹೇಳಿಕೆಯು ಇದೀಗ ಸಂಚಲನವನ್ನು ಮೂಡಿಸಿದೆ. ಈ ಕುರಿತು ಭಾರತಕ್ಕೆ ವಿರುದ್ದವಾಗಿ ಭಯೋತ್ಪಾದನೆಯನ್ನು ಮುಂದುವರೆಸಲು ಸಹಕರಿಸಿ ಜೊತೆ ಜೊತೆಗೆ ಅಮೆರಿಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಇಬ್ಬಗೆಯ ನೀತಿಯನ್ನು ಅವರು ಹೊಂದಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಖ್ಯಾತ ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ವಿರುದ್ಧ ಲೈಂಗಿಕ ಕಿರು**ಕುಳ ಆರೋಪ: ಬಂಧನ - ಬಿಡುಗಡೆ!?