Skip to main content
ವಿಡಿಯೋ
1/2
politics

ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು, ಸರ್ಕಾರದ ಗ್ಯಾರಂಟಿಗೆ ಜನರಿಂದ ಮೆಚ್ಚುಗೆ...!!

By Pavitra Ganapathi Baradavalli
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು, ಸರ್ಕಾರದ ಗ್ಯಾರಂಟಿಗೆ ಜನರಿಂದ ಮೆಚ್ಚುಗೆ...!!

ನಗರದಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುವ ಕುರಿತು ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬೆಂಗಳೂರು: ನಗರದಲ್ಲಿ ಬಿ ಖಾತಾ ಆಸ್ತಿಗಳನ್ನು ಖಾತಾಗೆ ಪರಿವರ್ತನೆ ಮಾಡುವ ಕುರಿತು ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ನಲ್ಲಿ ನಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಮಾತನಾಡುವ ವೇಳೆ ಡಿಕೆಶಿ ವಿಷಯವನ್ನು ಎತ್ತಿದರು.ಇದನ್ನೂ ಓದಿ: ಪತಿಯೊಂದಿಗೆ ಜಗಳ ಮಾಡಿ ತವರು ಮನೆಗೆ ಹೋದ ಮಹಿಳೆಯ ಅವಳಿ ಮಕ್ಕಳ ಕತ್ತು ಸೀಳಿ ಕೊಂದ ತಂದೆ..!

ಸಂದರ್ಭದಲ್ಲಿ ಒಬ್ಬ ನಾಗರಿಕರು, ಸರ್ಕಾರವು ಬಿ ಖಾತಾ ಆಸ್ತಿಗಳನ್ನು ಖಾತಾಗೆ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕಾರ್ಯ. ಬದಲಾವಣೆಗಾಗಿ ಹಲವರು ವರ್ಷಗಳಿಂದ ಕಾಯುತ್ತಿದ್ದರು, ಎಂದು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪ್ರಶಂಸಿದರು.ಇದನ್ನೂ ಓದಿ: ಆರ್‌ಎಸ್‌ಎಸ್ ಒಂದು ರಬ್ಬರ್ ಬಾಲ್‌ನಂತೆ: ಹೊಡೆದಷ್ಟು ಇನ್ನಷ್ಟು ಜೋರಾಗಿ ಹೊರಬೀಸುತ್ತದೆ – ಡಾ. ರಾಮ್ ಮಾಧವ್.


ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಖಾತಾ ಎನ್ನುವುದು ನಿಮ್ಮ ಆಸ್ತಿಯ ದಾಖಲೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ್ಮ ಸರ್ಕಾರದ ಆರನೇ ಗ್ಯಾರಂಟಿ. ಇದಕ್ಕಾಗಿ ಕೇವಲ 5% ಅಭಿವೃದ್ಧಿ ಶುಲ್ಕವನ್ನು ಮಾತ್ರ ಪಾವತಿಸುವಂತೆ ಕೇಳಿದ್ದೇವೆ. ನಿಮ್ಮಂತಹ ಪ್ರಜ್ಞಾವಂತ ನಾಗರಿಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದಗಳು, ಎಂದು ನಮನ ಸಲ್ಲಿಸಿದರು.INDO ERA Women's Embroidered Pure Cotton Kurta Pant With Dupatta Set (Kh0Ph6072)