ಬಿಹಾರದಲ್ಲಿ ಚುನಾವಣಾ ಯುದ್ಧ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಪ್ರಚಾರವನ್ನು ಮಾಡಿದ್ದಾರೆ.
ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ನಿತೀಶ್ ಕುಮಾರ್ ಸರ್ಕಾರವನ್ನು ದೃಷ್ಟಿಹೀನ, ಭ್ರಷ್ಟಾಚಾರ ಎಂದು ಕಟುವಾಗಿ ಟೀಕಿಸಿದ ಅವರು, ಬಿಹಾರದ ಜನರು ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.Beats Studio Buds - Wireless Bluetooth Noise Cancelling Earbuds - Up to 8H Battery Life, Up to 24H w Charging Case, IPX4 Rating, Sweat Resistant, Apple & Android Compatible, Built-in Mic - White
ಭ್ರಷ್ಟಾಚಾರ ಮತ್ತು ಅಪರಾಧಗಳು ಉತ್ತುಂಗಕ್ಕೇರಿವೆ. ಬಿಜೆಪಿ-ಜೆಡಿಯು ಮೈತ್ರಿಯ ಬಜೆಟ್‌ನಲ್ಲೂ ಬಿಹಾರದ ಹಣವನ್ನು ಗುಜರಾತ್‌ನಲ್ಲಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು. ಈ ಹೇಳಿಕೆಗಳು ಚುನಾವಣಾ ವಾತಾವರಣವನ್ನು ಬಿಸಿಮಾಡಿವೆ.
ಪ್ರಚಾರದಲ್ಲಿ ಎಲ್ಲ ಜಾತಿ-ಧರ್ಮದ ಜನರ ಬೆಂಬಲ ಸಿಗುತ್ತಿದೆ ಎಂದು ತೇಜಸ್ವಿ ಹೇಳಿದರು. ಬಿಹಾರದ ಜನರು ಬಿಜೆಪಿಗೆ 20 ವರ್ಷ ನೀಡಿದ್ದಾರೆ ನಾವು ಕೇವಲ 20 ತಿಂಗಳು ಕೇಳುತ್ತಿದ್ದೇವೆ. ಈ ಬಾರಿ ಬದಲಾವಣೆ ನಿಶ್ಚಿತ ಎಂದು ನಂಬಿಕೆ ವ್ಯಕ್ತಪಡಿಸಿದರು. ಇದನ್ನು ಓದಿ: ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಚುನಾವಣೆಗೂ ಮುನ್ನ11 ನಾಯಕರ ಉಚ್ಚಾಟನೆ..!
ಮಹಾಘಟಬಂಧನ್ ಹೊಸ ಬಿಹಾರ ನಿರ್ಮಾಣಕ್ಕೆ ಬದ್ಧ ಎಂದು ಸೇರಿಸಿದರು. ಸಣ್ಣ ಕಾರ್ಮಿಕರ ಮೇಲೆ ಕೇಂದ್ರೀಕರಿಸಿ, ದೊಡ್ಡ ಘೋಷಣೆ ಮಾಡಿದರು. ತಮ್ಮ ಸರ್ಕಾರ ಬಂದರೆ, ಬಡಗಿಗಳು, ಕಮ್ಮಾರರು, ಕ್ಷೌರಿಕರು ಸೇರಿದಂತೆ ಸಣ್ಣ-ಸಣ್ಣ ಕೆಲಸಗಾರರಿಗೆ ಸ್ವಯಂ ಉದ್ಯೋಗಕ್ಕೆ ₹5 ಲಕ್ಷ ನೀಡಲಾಗುವುದು ಎಂದರು. ಇದು ಗ್ರಾಮೀಣ ಮತ್ತು ಸಣ್ಣ ನಗರಗಳ ಕುಶಲಕರ್ಮಿಗಳನ್ನು ಆಕರ್ಷಿಸುವ ತಂತ್ರವಾಗಿ ಕಾಣುತ್ತದೆ.
ಹಿಂದಿನ ಮೈ ಬೆಹನ್ ಮಾನ್ ಯೋಜನೆ ಹರ್ ಘರ್ ನೌಕರಿ ಯಂತಹ ಯೋಜನೆಗಳನ್ನು ಮುಂದುವರಿಸಿ, ಜೀವಿಕಾ ಮತ್ತು ಗುತ್ತಿಗೆ ಕಾರ್ಮಿಕರಿಗೆ ರಾಜ್ಯ ಉದ್ಯೋಗಿ ಸ್ಥಾನಮಾನ ನೀಡುವುದಾಗಿಯೂ ಹೇಳಿದರು.ಇದನ್ನು ಓದಿ: ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು, ಸರ್ಕಾರದ ಗ್ಯಾರಂಟಿಗೆ ಜನರಿಂದ ಮೆಚ್ಚುಗೆ...!!
ಇದಲ್ಲದೆ, ಪಂಚಾಯತ್ ಮತ್ತು ಗ್ರಾಮ ಪ್ರತಿನಿಧಿಗಳ ಭತ್ಯೆಗಳನ್ನು ದ್ವಿಗುಣಗೊಳಿಸುವುದು, ಹಿಂದಿನ ಪ್ರತಿನಿಧಿಗಳಿಗೆ ಪಿಂಚಣಿ ನೀಡುವುದು ಎಂಬ ಘೋಷಣೆಗಳು ಗ್ರಾಮೀಣ ಮತಗಳನ್ನು ಗೆಲ್ಲಿಸುವ ಉದ್ದೇಶ ಹೊಂದಿವೆ.
ತೇಜಸ್ವಿ ಅವರ ಈ ಚುನಾವಣಾ ತಂತ್ರಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸವಾಲು ಎಸ್ಸಿಸಿವೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ 243 ಸ್ಥಾನಗಳ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲುವಿನ ಆಶಯ ಹೊಂದಿದ್ದು, ತೇಜಸ್ವಿ ಅವರ ಉತ್ಸಾಹ ರಾಜ್ಯವನ್ನು ಉಲೇಖಿಸುತ್ತಿದೆ.ಇದನ್ನು ಓದಿ: ಪತಿಯೊಂದಿಗೆ ಜಗಳ ಮಾಡಿ ತವರು ಮನೆಗೆ ಹೋದ ಮಹಿಳೆಯ ಅವಳಿ ಮಕ್ಕಳ ಕತ್ತು ಸೀಳಿ ಕೊಂದ ತಂದೆ..!