Skip to main content
ವಿಡಿಯೋ
1/3
weather

ʻಮೊಂತಾʼ ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆ ಆಂಧ್ರ, ಚೆನ್ನೈ, ಒಡಿಶಾದಲ್ಲಿ ಭಾರಿ ಮಳೆ!

By Shravanthi R
ʻಮೊಂತಾʼ ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆ ಆಂಧ್ರ, ಚೆನ್ನೈ, ಒಡಿಶಾದಲ್ಲಿ ಭಾರಿ ಮಳೆ!

Montha Cyclone ಪರಿಣಾಮ, ಪೂರ್ವ ಕರಾವಳಿ ಪ್ರದೇಶ ಹೊಂದಿರುವ ಒಡಿಶಾ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪ್ರಮುಖ ಭಾಗಗಳಿಗೆ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯನ್ನು ಸೂಚಿಸಿದೆ.

ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳಲಿರುವ ʻಮೊಂತಾʼ ಚಂಡಮಾರುತದ ಕಾರಣ, ಆಂಧ್ರ, ತಮಿಳುನಾಡು ಹಾಗೂ ಒಡಿಶಾದ ಕರಾವಳಿ ತೀರ ಪ್ರದೇಶಗಳಿಗೆ ಮಳೆಯ ಎಚ್ಚರಿಕೆ ಮುನ್ಸೂಚನೆಯನ್ನು ನೀಡಲಾಗಿದೆ. ಗಂಟೆಗೆ 90-100 ಕಿ.ಮೀ ವೇಗದಲ್ಲಿ ಬೀಸಲಿರುವ ಗಾಳಿಯ ಪರಿಣಾಮ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಕಟ್ಟೆಚ್ಚರ ವಹಿಸಲಾಗಿದೆ. 

ಪೂರ್ವ ಕರಾವಳಿಗೆ ಸಮೀಪಿಸುತ್ತಿರುವ ಬಂಗಾಳಕೊಲ್ಲಿಯ ʻಮೊಂತಾʼ ಚಂಡಮಾರುತವು ತರಲಿರುವ ಒತ್ತಡವು ಮುಂದಿನ ವಾರಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಅತ್ಯಂತ ಮಳೆಯಾಗಲಿದೆ ಎಂದು IMD ಎಚ್ಚರಿಕೆ ನೀಡಿದೆ. ಥೈಲ್ಯಾಂಡ್‌ನಿಂದ ಹೆಸರಿಸಲ್ಪಟ್ಟ ʻಮೊಂತಾʼ ಚಂಡಮಾರುತವು ಅಕ್ಟೋಬರ್ 28 ರಂದು ಕಾಕಿನಾಡದ ಬಳಿ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ದಾಟುವ ಸಾಧ್ಯತೆಯಿದೆ.  mi Smart Watch for Kids Boys Men Women Girls ID116 Plus 2025 Waterproof Fitness Band for Android iOS – Sports Tracker, Sleep & Heart Rate Monitor – Black

ಬಂಗಾಳಕೊಲ್ಲಿಯಲ್ಲಿ ಅಕ್ಟೋಬರ್ 26 ರಂದು ಉಂಟಾದ ವಾಯುಭಾರ ಕುಸಿತ ಹಾಗೂ ತೀವ್ರವಾಗಲಿರುವ ʻಮೊಂತಾʼ ಚಂಡಮಾರುತದ ಹಿನ್ನಲೆಯಲ್ಲಿ, ಆಂಧ್ರದ ಕರಾವಳಿ ಪ್ರದೇಶಗಳು ಮತ್ತು ರಾಯಲಸೀಮಾದ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯನ್ನು ತರಿಸಲಿದೆ. ಈ ಕುರಿತಾಗಿ ಮುಂಜಾಗ್ರತಾ ಕ್ರಮವಾಗಿ, ರಾಜ್ಯದ ವಿಪತ್ತು ನಿರ್ವಹಣಾ ತಂಡಗಳನ್ನು ಸಕ್ರಿಯವಾಗಿರಲು ಆದೇಶಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆ - ಹೊಸ ಉದ್ಯಮಿಗಳ ಕೈಗಾರಿಕಾ ಚಟುವಟಿಕೆಗಳಿಗೆ ಹಲವು ಸವಾಲುಗಳು!?