Skip to main content
ವಿಡಿಯೋ
1/3
crime

ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ನ್ಯಾಯಾಧೀಶರ ಮನೆ ಮೇಲೆ ಅಟ್ಯಾಕ್‌, ಕೊ**ಲೆ ಬೆದರಿಕೆ!

By Shravanthi R
ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ನ್ಯಾಯಾಧೀಶರ ಮನೆ ಮೇಲೆ ಅಟ್ಯಾಕ್‌, ಕೊ**ಲೆ ಬೆದರಿಕೆ!

ಅಪರಿಚಿತ ವ್ಯಕ್ತಿಗಳ ಗುಂಪೊಂದು, ಮಧ್ಯಪ್ರದೇಶದ ಅನುಪ್ಪುರ್‌ ಬಳಿಯ ಭಾಲುಮಾಡ ಎಂಬಲ್ಲಿ ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು, ಮನೆ ಮೇಲೆ ದಾಳಿ ನಡೆಸಿದ್ದಲ್ಲದೇ, ಕೊಲೆ ಬೆದರಿಕೆ ಹಾಗೂ ನಿಂದನಾತ್ಮಕ ಪ್ರವೃತ್ತಿ ತೋರಿದ್ದಾರೆಂದು ವರದಿಯಾಗಿದೆ.

ಮಧ್ಯಪ್ರದೇಶದ ಅನುಪ್ಪುರ್‌ ಜಿಲ್ಲೆಯಲ್ಲಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಅವರ ಮನೆ ಮೇಲೆ ಕಲ್ಲು ತೂರಾಟ ದಾಳಿ ನಡೆಸಿದ್ದಲ್ಲದೇ, ಆಸ್ತಿ ಹಾನಿ ಮಾಡಿರುವ ಕಿಡಿಗೇಡಿಗಳು ಅವರನ್ನು ಕೊಲ್ಲುವುದಾಗಿ ಯತ್ನಿಸಲು ಮುಂದಾಗಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ. 

ಶುಕ್ರವಾರ ಮಧ್ಯರಾತ್ರಿಯ ಹೊತ್ತಿಗೆ, ಅವರ ಅಧಿಕೃತ ನಿವಾಸದಲ್ಲಿ ಮಲಗಿದ್ದಾಗ, ಗುಂಪೊಂದು ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲು ಶುರುವಿಟ್ಟಿದ್ದರು. ಮನೆಯ ಗೇಟ್‌ಗೆ ನುಗ್ಗಿ ದೀಪ ಹಾಗೂ ಕಬ್ಬಿಣಗಳನ್ನು ಒಡೆದು ಹಾಕಿದ್ದಾರೆ. ಮನೆ ಮೇಲೆ ಕಲ್ಲು ಎಸೆದು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಹಲವು ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. Amazfit T-Rex 3 Outdoor Rugged Military 48mm Smart Watch, Built in GPS, 27 Days Battery Life, Offline Maps, 2000 Nits Brightness, 10 ATM Water Resistance, AI Coach, for iOS & Android (Onyx)

ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಭಾಲುಮಾಡ ಘಟನೆ ಸಂಭವಿಸಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮನ್‌ದೀಪ್ ಸಿಂಗ್‌ ಛಾಬ್ರಾ ಅವರು ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ʻಮೊಂತಾʼ ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆ ಆಂಧ್ರ, ಚೆನ್ನೈ, ಒಡಿಶಾದಲ್ಲಿ ಭಾರಿ ಮಳೆ!