ಬೆಂಗಳೂರು: ದಕ್ಷಿಣ ಕನ್ನಡದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಮಾಡುವ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗಡುವು ನೀಡಿದೆ. ಹಿಂದಿನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎಂಟು ವಾರಗಳ ಅಂದರೆ ಎರಡು ತಿಂಗಳು ಒಳಗಾಗಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ವಿಭಾಗೀಯ ಪೀಠವು ನಿರ್ದೇಶಿಸಿದೆ.ಇದನ್ನೂ ಓದಿ: ಆನೇಕಲ್‌ನಲ್ಲಿ ಭಯಾನಕ ರಸ್ತೆ ಅಪಘಾತ: ಕಂಟೈನರ್ ಲಾರಿ ಕಂದಕಕ್ಕೆ ಉರುಳಿ ಇಬ್ಬರು ಸಾವು, ನಾಲ್ವರಿಗೆ ಗಾಯ..!!
ದೇವಾಲಯದ ನೌಕರರಿಗೆ 2018ರ ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ಪಾವತಿಸುವಂತೆ 2024ರ ಮಾರ್ಚ್‌ನಲ್ಲಿ ಏಕಸದಸ್ಯ ಪೀಠ ಆದೇಶಿಸಿತ್ತು. ಇತರ ಎ ದರ್ಜೆಯ ಮುಜರಾಯಿ ದೇವಾಲಯಗಳ ಸಿಬ್ಬಂದಿಗೆ 2018ರಿಂದಲೇ ವೇತನ ಪರಿಷ್ಕರಣೆ ಮಾಡಲಾಗಿದ್ದರೂ, ಕುಕ್ಕೆ ದೇವಾಲಯದ ಸಿಬ್ಬಂದಿಗೆ ಮಾತ್ರ ವಿಳಂಬ ಮಾಡಿದ್ದನ್ನು ಪ್ರಶ್ನಿಸಿ ನೌಕರರು ಹೈಕೋರ್ಟ್ ಮೊರೆ ಹೋಗಿದ್ದರು.ಇದನ್ನೂ ಓದಿ: ಹುಟ್ಟಿದ ದಿನವೇ ಜೀವ ಕಳೆದುಕೊಂಡ ದುರ್ವಿಧಿ - ಕಿರುತೆರೆ ನಟನ ಅಂಗಾಂಗ ದಾನ!
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ. ಅಲ್ಲದೆ, ನೌಕರರಿಗೆ ಎಂಟು ವಾರಗಳಲ್ಲಿ ಆದೇಶ ಜಾರಿ ಮಾಡಬೇಕು. ತಪ್ಪಿದಲ್ಲಿ, ನೌಕರರು ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತೀರ್ಪು ಕುಕ್ಕೆ ದೇವಾಲಯದ ನೂರಾರು ನೌಕರರಿಗೆ ನೆಮ್ಮದಿ ತಂದಿದೆ.INDO ERA Women's Embroidered Pure Cotton Kurta Pant With Dupatta Set (Kh0Ph6072)