Skip to main content
ವಿಡಿಯೋ
1/3
politics

ಮಹಾರಾಷ್ಟದಲ್ಲಿ ವೈದ್ಯೆ ಆತ್ಮ*ಹತ್ಯೆ: ಇದೊಂದು ಸಾಂಸ್ಥಿಕ ಕೊ*ಲೆಯಾಗಿದೆ - ರಾಹುಲ್‌ ಗಾಂಧಿ ಗಂಭೀರ ಆರೋಪ!

By Shravanthi R
ಮಹಾರಾಷ್ಟದಲ್ಲಿ ವೈದ್ಯೆ ಆತ್ಮ*ಹತ್ಯೆ: ಇದೊಂದು ಸಾಂಸ್ಥಿಕ ಕೊ*ಲೆಯಾಗಿದೆ - ರಾಹುಲ್‌ ಗಾಂಧಿ ಗಂಭೀರ ಆರೋಪ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಮಹಾರಾಷ್ಟ್ರದಲ್ಲಿ ವೈದ್ಯೆ ಆತ್ಮಹತ್ಯೆಯು ಸಾಂಸ್ಥಿಕ ಕೊಲೆ ಎಂದು ಆರೋಪಿಸಿದ್ದಾರೆ. ಘಟನೆಯನ್ನು ಖಂಡಿಸಿ ಮಾತನಾಡಿದ ಅವರು, ಬಿಜೆಪಿ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ದೂರಿದ್ದಾರೆ.

ಮಹಾರಾಷ್ಟ್ರದಲ್ಲಿ ವೈದ್ಯೆಯೊಬ್ಬರು ತಮ್ಮ ಹಸ್ತದ ಮೇಲೆ ಸಾಕ್ಷೀಕರಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆಯು ರಾಜಕೀಯ ವಿವಾದವನ್ನು ಸೃಷ್ಟಿಸಿದೆ ಎನ್ನಲಾಗಿದೆ. ಕಾಂಗ್ರೆಸ್‌ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ಇದೊಂದು ಸಾಂಸ್ಥಿಕ ಕೊಲೆ ಎಂದು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಘಟನೆಯನ್ನು ಖಂಡಿಸಿರುವ ಅವರು, ಬಿಜೆಪಿ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ದೂರಿದ್ದಾರೆ. 

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಅವರು, ಮಹಾರಾಷ್ಟ್ರದ ಸತಾರಾದಲ್ಲಿ ಅತ್ಯಾಚಾರ ಹಾಗೂ ಕಿರುಕುಳದಿಂದ ಹತಾಶೆಗೊಂಡು ಮಹಿಳಾ ವೈದ್ಯರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರ ರಚನೆಯಲ್ಲಿರುವ ಅಧಿಕಾರಿಗಳ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಇದೊಂದು ಯಾವುದೇ ನಾಗರೀಕ ಸಮಾಜದ ಆತ್ಮಸಾಕ್ಷಿಯನ್ನು ಕದಡುವ ದುರಂತ ಎಂದು ಹೇಳಿದ್ದಾರೆ. 

ಸಾರ್ವಜನಿಕರನ್ನು ರಕ್ಷಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಅಪರಾಧಿಗಳ ಪರ ನಿಂತಿದ್ದಾರೆ. ಆಕೆಯ ಮೇಲೆ ಘೋರ ಅಪರಾಧವನ್ನು ಎಸಗಿದ್ದಾರೆ. ಇದು ಆತ್ಮಹತ್ಯೆ ಹೆಸರಿನಲ್ಲಿ ನಡೆಸಿದ ಸಾಂಸ್ಥಿಕ ಕೊಲೆಯಾಗಿದೆ. ಅಧಿಕಾರವು ಅಪರಾಧಿಗಳಿಗೆ ಗುರಾಣಿಯಾಗಿರುವ ನ್ಯಾಯವನ್ನು ಯಾರಿಂದ ನಿರೀಕ್ಷಿಸುವುದು? ಡಾ. ಸಂಪದ(ಮೃತ ವೈದ್ಯೆ) ಅವರ ಸಾವು ಬಿಜೆಪಿ ಸರ್ಕಾರದ ಅಮಾನವೀಯ ಹಾಗೂ ಅಸಂವೇದನಾ ಮುಖವನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ. Nikon D7500 20.9MP Digital SLR Camera (Black) with AF-S DX NIKKOR 18-140mm f/3.5-5.6G ED VR Lens

ಮೃತ ವೈದ್ಯ ಮಧ್ಯ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆಯವರಾಗಿದ್ದು, ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಲಾಗಿದೆ. ಫಾಲ್ಮನ್ ಪಟ್ಟಣದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವವು ಪತ್ತೆಯಾಗಿದ್ದು, ತನ್ನ ಅಂಗೈಯಲ್ಲಿ ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ, ಪೊಲೀಸ್ ಸಬ್-ಇನ್ಸ್‌ಪೆಕ್ಟ‌ರ್ ಬದನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಬಂಕ‌ರ್ ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕ‌ರ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಬಂಧಿಸಿದ್ದಾರೆ. ಸತಾರಾ ಜಿಲ್ಲೆಯ ಫಾಲ್ಟನ್ ಪೊಲೀಸ್‌ ಠಾಣೆಯಲ್ಲಿಯೂ ಇಬ್ಬರ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಹುಟ್ಟಿದ ದಿನವೇ ಜೀವ ಕಳೆದುಕೊಂಡ ದುರ್ವಿಧಿ - ಕಿರುತೆರೆ ನಟನ ಅಂಗಾಂಗ ದಾನ!