ಇವತ್ತಿನ ದಿನ ಪ್ರಧಾನಿ ನರೇಂದ್ರ ಮೋದಿಯವರು, ಆಕಾಶವಾಣಿಯ ಮನ್‌ಕೀ ಬಾತ್ ಕಾರ್ಯಕ್ರಮದಲ್ಲಿ ಛಠ್ ಹಬ್ಬದ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ, ಆಪರೇಷನ್ ಸಿಂಧೂರ, ಮಾವೋವಾದಿಗಳ ವಿರುದ್ದದ ಕಾರ್ಯಾಚರಣೆ, ಸರೋವರಗಳಿಗೆ ಹೊಸ ಜೀವ ನೀಡುವ ಅಭಿಯಾನ, ಒಡಿಶಾದ ಕೊರಾಪುಟ್ ಕಾಫಿ ಸೇರಿದಂತೆ ಮತ್ತಷ್ಟು ವಿಷಯಗಳ ಕುರಿತು ಮಾತನಾಡಿದರು.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಛಠ್ ಹಬ್ಬದ ಪ್ರಾಮುಖ್ಯತೆ ಕುರಿತಾಗಿ ದೀರ್ಘಕಾಲ ನುಡಿದರು. ವಿವಿಧ ವಿಚಾರಗಳು ಈ ಕೆಳಗಿನಂತಿವೆ:
ನಾಗರಿಕರಿಗೆ ಪತ್ರ ಬರೆದಿದ್ದನ್ನು ನೆನಪಿಸಿಕೊಂಡು, ಪ್ರತಿಯಾಗಿ ಅನೇಕರು ತಮಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಜಿಎಸ್ಟಿ ಬಚತ್ ಉತ್ಸವದ ಬಗ್ಗೆ ಜನರಲ್ಲಿ ಉತ್ಸಾಹವಿದ್ದು, ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳ ಖರೀದಿ ಭಾರಿ ಹೆಚ್ಚಳವಾಗಿದೆ ಎಂದರು. Fujifilm X-M5 26.1MP APS-C X-Trans CMOS 4 with 15-45 f/3.5-5.6 Lens|Retro Style mirrorless Compact Travel Camera|6.2k vlogging|High Speed Recording FHD 240fps|Advance AF for Street/Lifestyle - Black
ಸ್ವಚ್ಛತಾ ಅಭಿಯಾನದ ಕುರಿತು, ದೇಶದ ನಗರಗಳ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
ಬೆಂಗಳೂರಿನ ಕಪಿಲ್ ಶರ್ಮಾ ಅಭಿಯಾನ; ದೃಢನಿಶ್ಚಯದಿಂದ ಬದಲಾವಣೆ ಸಾಧ್ಯ ಎಂದು ಮೋದಿ ಉಲ್ಲೇಖ.
ಸರೋವರಗಳ ಪುನರುಜೀವನ: ಬೆಂಗಳೂರಿನ ಕಪಿಲ್ ಶರ್ಮಾ ಅಭಿಯಾನ; ದೃಢನಿಶ್ಚಯದಿಂದ ಬದಲಾವಣೆ ಸಾಧ್ಯ ಎಂದು ಮೋದಿ ಉಲ್ಲೇಖ.
ಮ್ಯಾಂಗ್ರೋವ್‌ಗಳ ಮಹತ್ವದ ಕುರಿತಾಗಿ ಅವುಗಳ ಸಂರಕ್ಷಣಾ ದೃಷ್ಟಿಯಿಂದ ಗುಜರಾತ್ ಅರಣ್ಯ ಇಲಾಖೆಯ ಅಭಿಯಾನ; ಧೋಲೇರಾ ಬಳಿ 5 ವರ್ಷಗಳಲ್ಲಿ 3,500 ಹೆಕ್ಟೇರ್ ಮ್ಯಾಂಗ್ರೋವ್ ಬೆಳೆದು, ಡಾಲ್ಫಿನ್ ಮತ್ತು ಜಲಚರಗಳ ಸಂಖ್ಯೆ ಹೆಚ್ಚಳ. ಕೋರಿ ಕ್ರೀಕ್‌ನಲ್ಲಿ ಮ್ಯಾಂಗ್ರೋವ್ ಕಲಿಕಾ ಕೇಂದ್ರ ಸ್ಥಾಪನೆ. ಮರಗಳ ನೆಡುವಿಕೆ ಮತ್ತು 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನಕ್ಕೆ ಒತ್ತು ನೀಡಿರುವ ಬಗ್ಗೆ ಪ್ರಸ್ತಾಪ.
ಒಡಿಶಾದ ಕೊರಾಪುಟ್ ಕಾಫಿ ಅದ್ಭುತ ರುಚಿ; ಉದ್ಯೋಗ ತೊರೆದು ಯಶಸ್ವಿ ಬೆಳೆಗಾರರು; ಒಡಿಶಾದ ಹೆಮ್ಮೆ. ಜೊತೆಗೆ, ಭಾರತೀಯ ಕಾಫಿ: ಪ್ರಪಂಚದಲ್ಲಿ ಜನಪ್ರಿಯ; ಈಶಾನ್ಯ ಭಾಗದಲ್ಲಿ ಪ್ರಗತಿ, ಭಾರತೀಯ ಕಾಫಿಯ ಗುರುತು ಬಲಪಡಿಸುವುದು.
ಭಾರತದ ವಂದೇ ಮಾತರಂ ಗೀತೆ 19 ನೇ ಶತಮಾನದಲ್ಲಿ ರಚನೆ; ಸಾವಿರಾರು ವರ್ಷಗಳ ಭಾರತೀಯ ಪ್ರಜ್ಞೆ; ನವೆಂಬರ್ 7 ರಂದು 150 ನೇ ವರ್ಷೋತ್ಸವ. ವಂದೇ ಮಾತರಂ ಪ್ರಚಾರ: 1896 ಲ್ಲಿ ರವೀಂದ್ರನಾಥ್ ಟ್ಯಾಗೋರ್ ಮೊದಲ ಹಾಡು; #VandeMataram150 ಮೂಲಕ ಸಲಹೆಗಳು ಕಳುಹಿಸಿ ಎಂದರು. ಇದನ್ನೂ ಓದಿ: ಮಹಾರಾಷ್ಟದಲ್ಲಿ ವೈದ್ಯೆ ಆತ್ಮ*ಹತ್ಯೆ: ಇದೊಂದು ಸಾಂಸ್ಥಿಕ ಕೊ*ಲೆಯಾಗಿದೆ - ರಾಹುಲ್ ಗಾಂಧಿ ಗಂಭೀರ ಆರೋಪ!