Skip to main content
ವಿಡಿಯೋ
1/2
politics

ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆ; ಕರ್ನಾಟಕ ಬಸ್‌ಗಳ ಸುರಕ್ಷತಾ ವ್ಯವಸ್ಥೆ ಆಡಿಟ್‌ಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

By Gireesh Vasishta
ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆ; ಕರ್ನಾಟಕ ಬಸ್‌ಗಳ ಸುರಕ್ಷತಾ ವ್ಯವಸ್ಥೆ ಆಡಿಟ್‌ಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಸಮಗ್ರ ಸುರಕ್ಷತಾ ಆಡಿಟ್ (Safety Audit): ರಾಜ್ಯದ ಎಲ್ಲಾ ಸರ್ಕಾರಿ ಬಸ್ಸುಗಳು (ಸಾರಿಗೆ ನಿಗಮಗಳ) ಮತ್ತು ಖಾಸಗಿ ಬಸ್‌ಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು, ಪ್ರವಾಸಿ ಬಸ್‌ಗಳು ಮತ್ತು ಟೆಂಪೋ ಟ್ರಾವೆಲರ್‌ಗಳು ಸೇರಿದಂತೆ ಎಲ್ಲ ವಾಹನಗಳ ಸುರಕ್ಷತಾ ವ್ಯವಸ್ಥೆಗಳ ಸಮಗ್ರ ತಪಾಸಣೆ ನಡೆಸಬೇಕು. ಪ್ರಮುಖ ಸುರಕ್ಷತಾ ಅಂಶಗಳ ತಪಾಸಣೆ: ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರಗಳು (Emergency Exits) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಬೆಂಗಳೂರು; ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಮಹತ್ವದ ಸೂಚನೆ ನೀಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹಾಗೂ ಎಲ್ಲಾ ಸಾರಿಗೆ ನಿಗಮಗಳ (KSRTC, BMTC, ಇತ್ಯಾದಿ) ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕೆಳಗಿನಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ..TRASE Block Heels Sandals For Women, Dusky Stylish & Comfortable Footwear

ಸಮಗ್ರ ಸುರಕ್ಷತಾ ಆಡಿಟ್ (Safety Audit): ರಾಜ್ಯದ ಎಲ್ಲಾ ಸರ್ಕಾರಿ ಬಸ್ಸುಗಳು (ಸಾರಿಗೆ ನಿಗಮಗಳ) ಮತ್ತು ಖಾಸಗಿ ಬಸ್ಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳು, ಪ್ರವಾಸಿ ಬಸ್ಗಳು ಮತ್ತು ಟೆಂಪೋ ಟ್ರಾವೆಲರ್ಗಳು ಸೇರಿದಂತೆ ಎಲ್ಲ ವಾಹನಗಳ ಸುರಕ್ಷತಾ ವ್ಯವಸ್ಥೆಗಳ ಸಮಗ್ರ ತಪಾಸಣೆ ನಡೆಸಬೇಕು. ಪ್ರಮುಖ ಸುರಕ್ಷತಾ ಅಂಶಗಳ ತಪಾಸಣೆ: ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರಗಳು (Emergency Exits) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.ಇದನ್ನು ಓದಿ; ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಉಗ್ರ ನಿಗಾ ಪಟ್ಟಿಗೆ ಸೇರಿಸಿದ ಪಾಕಿಸ್ತಾನ; ಕಾರಣ ಹೀಗಿದೆ

ಕಿಟಕಿಗಳನ್ನು ಒಡೆಯಲು ಅಗತ್ಯವಿರುವ ಸುತ್ತಿಗೆಗಳು (Hammers) AC ಬಸ್ಗಳಲ್ಲಿ ಕಡ್ಡಾಯವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಸ್ಫೋಟಕ ವಸ್ತುಗಳನ್ನು ಲಗೇಜ್ ವಿಭಾಗದಲ್ಲಿ ಅಥವಾ ಬಸ್ನೊಳಗೆ ಸಾಗಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಸೀಟುಗಳನ್ನು ಸ್ಲೀಪರ್ ಕೋಚ್ಗಳಾಗಿ ಅಕ್ರಮವಾಗಿ ಮಾರ್ಪಾಡು ಮಾಡಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು.

ಕಟ್ಟುನಿಟ್ಟಿನ ಕ್ರಮ: ತಪಾಸಣೆ ವೇಳೆ ಯಾವುದೇ ಬಸ್ನಲ್ಲಿ ಸುರಕ್ಷತಾ ನ್ಯೂನತೆಗಳು ಕಂಡುಬಂದರೆ, ಅಂತಹ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಮತ್ತು ನಿಯಮ ಉಲ್ಲಂಘಿಸಿದ ಆಪರೇಟರ್ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.