Skip to main content
ವಿಡಿಯೋ
1/3
globalnews

ಇಷ್ಟಕ್ಕೇ ನನ್ನ ರಾಜಕೀಯ ಜೀವನ ಮುಗಿದಿಲ್ಲ...2028ಕ್ಕೆ ಮತ್ತೆ ಅಖಾಡಕ್ಕೆ ಬರ್ತೀನಿ-ಕಮಲಾ ಹ್ಯಾರಿಸ್!

By Gireesh Vasishta
ಇಷ್ಟಕ್ಕೇ ನನ್ನ ರಾಜಕೀಯ ಜೀವನ ಮುಗಿದಿಲ್ಲ...2028ಕ್ಕೆ ಮತ್ತೆ ಅಖಾಡಕ್ಕೆ ಬರ್ತೀನಿ-ಕಮಲಾ ಹ್ಯಾರಿಸ್!

ಬಿಬಿಸಿ ಜೊತೆಗಿನ ಸಂದರ್ಶನದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ಜೀವನವನ್ನು ಜನಸೇವೆಗೆ ಮೀಸಲಿಟ್ಟಿದ್ದು, 2028ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸಾಧ್ಯತೆ ಇರುವುದಾಗಿ ಸೂಚಿಸಿದರು.

ಅಮೆರಿಕಾ; 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಎದುರು ಸೋಲುಂಡ ನಂತರವೂ ತಮ್ಮ ರಾಜಕೀಯ ಜೀವನ ಮುಗಿದಿಲ್ಲ ಎಂದು ಅಂದಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಹೇಳಿದ್ದಾರೆ. 2028ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.Monte Carlo Mens Solid Lace Up Genuine Leather Casual Shoes (201803FW)

 

ಬಿಬಿಸಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಕಮಲಾ, ತಮ್ಮ ಇಡೀ ಜೀವನವನ್ನು ಜನರ ಸೇವೆಗಾಗಿ ಮೀಸಲಿಟ್ಟಿರುವುದಾಗಿ ತಿಳಿಸಿದರು. ನನ್ನ ಕಣ ಕಣದಲ್ಲೂ ಸೇವೆಯೇ ತುಂಬಿದೆ. ನನ್ನ ಮೊಮ್ಮಕ್ಕಳು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಮಹಿಳಾ ಅಧ್ಯಕ್ಷರನ್ನು ನೋಡುತ್ತಾರೆ ಎಂಬ ವಿಶ್ವಾಸ ನನಗಿದೆ, ಎಂದು ಅವರು ಹೇಳಿದರು.ಇದನ್ನು ಓದಿ; ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆ; ಕರ್ನಾಟಕ ಬಸ್‌ಗಳ ಸುರಕ್ಷತಾ ವ್ಯವಸ್ಥೆ ಆಡಿಟ್‌ಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

 

ಅದು ನೀವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲಾ, ಇದ್ದರೂ ಇರಬಹುದು ಎಂದು ಮರ್ಮವಾಗಿ ನುಡಿದರು. ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ ಭಾರತ-ಅಮೆರಿಕ ಸಂಬಂಧದಲ್ಲಿ ಏರುಪೇರಾಗುತ್ತಿರುವ ನಡುವೆ, ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಪ್ರಮುಖ ಹೇಳಿಕೆ ನೀಡಿದ್ದಾರೆ.

 

ಭಾರತದೊಂದಿಗಿನ ಸಂಬಂಧವನ್ನು ಬಲಿಕೊಟ್ಟು ಪಾಕಿಸ್ತಾನದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದಿಲ್ಲ ಎಂದು ಶನಿವಾರ ಅವರು ಘೋಷಿಸಿದರು. ಪಾಕಿಸ್ತಾನವು ಅಮೆರಿಕಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ರುಬಿಯೊ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

 

ಸಾಧ್ಯವಾದರೆ, ಸಹಭಾಗಿತ್ವವನ್ನು ಮೀರಿ ನಮ್ಮ ಸಂಬಂಧವನ್ನು ವಿಸ್ತರಿಸಲು ನಾವು ಬಯಸುತ್ತೇವೆ. ಆದರೆ, ಪಾಕಿಸ್ತಾನದೊಂದಿಗೆ ನಾವು ಕೈಗೊಳ್ಳುವ ಯಾವುದೇ ಕಾರ್ಯಗಳು ಭಾರತದೊಂದಿಗಿನ ನಮ್ಮ ಆಳವಾದ ಮತ್ತು ಐತಿಹಾಸಿಕ ಸಂಬಂಧ ಅಥವಾ ಸ್ನೇಹವನ್ನು ಹಾಳುಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ, ಎಂದು ರುಬಿಯೊ ಸ್ಪಷ್ಟಪಡಿಸಿದರು.