Skip to main content
ವಿಡಿಯೋ
1/3
general

Zero Enrollment: ಭಾರತದ 8,000 ಶಾಲೆಗಳಲ್ಲಿಲ್ಲದ ವಿದ್ಯಾರ್ಥಿಗಳು, ಆದರೆ ಶಿಕ್ಷಕರಿದ್ದಾರೆ - ಪಶ್ಚಿಮ ಬಂಗಾಳ ನಂ. 1!

By Shravanthi R
Zero Enrollment: ಭಾರತದ 8,000 ಶಾಲೆಗಳಲ್ಲಿಲ್ಲದ ವಿದ್ಯಾರ್ಥಿಗಳು, ಆದರೆ ಶಿಕ್ಷಕರಿದ್ದಾರೆ -  ಪಶ್ಚಿಮ ಬಂಗಾಳ ನಂ. 1!

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಒಡಕಿನ ಮಾಹಿತಿ ಒದಗಿಬಂದಿದೆ. 8,000ಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲೆ ಶೂನ್ಯ. ಶಿಕ್ಷಕರಿದ್ದರೂ, ವಿದ್ಯಾರ್ಥಿಗಳಿಲ್ಲದ ಈ ಸ್ಥಿತಿಯ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ದೇಶದಾದ್ಯಂತ 8,000 ಶೂನ್ಯ ವಿದ್ಯಾರ್ಥಿ ದಾಖಲಾತಿ ಹೊಂದಿರುವ ಶಾಲೆಗಳಲ್ಲಿ 20,000 ಶಿಕ್ಷಕರಿದ್ದಾರೆಂದು ಮಾಹಿತಿ ತಿಳಿದುಬಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯದ  ಅಂಕಿ-ಅಂಶಗಳ ಪ್ರಕಾರ 2024-2025 ನೇ ಶೈಕ್ಷಣಿಕ ಸಾಲಿನಲ್ಲಿ ಎಂಟು ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ ಎಂದು ಅಧಿಕೃತ ದತ್ತಾಂಶವನ್ನು ಬಹಿರಂಗಪಡಿಸಿದೆ. 

ಈ ಶಾಲೆಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಶಿಕ್ಷಕರಿದ್ದು, ವಿದ್ಯಾರ್ಥಿಗಳ ನೊಂದಣಿ ಮಾತ್ರ ಸೊನ್ನೆಯಾಗಿದೆ ಎನ್ನಲಾಗಿದೆ. ಈ ಪೈಕಿ ಪಶ್ಚಿಮ ಬಂಗಾಳವು ಇದರಲ್ಲಿ ಮುಂಚೂಣಿಯಲ್ಲಿದ್ದು, ಆನಂತರ ತೆಲಂಗಾಣ ರಾಜ್ಯವು ಈ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಹಿರಿಯ ಅಧಿಕಾರಿಗಳು ತಿಳಿಸಿರುವ ಹಾಗೆ, ಶಾಲಾ ಶಿಕ್ಷಣ ವಿಷಯವು ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.  Kathe Dabbi(Kannada) Paperback – 1 September 2021

ಕಳೆದ ವರ್ಷದಲ್ಲಿ ಈ ಸಂಖ್ಯೆಯು 12,954 ರ ಪ್ರಮಾಣವಿತ್ತು. ಮತ್ತೊಂದೆಡೆ, ಹರಿಯಾಣ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಹಾಗೂ ಯಾವುದೇ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತಹ ಯಾವುದೇ ಶಾಲೆಗಳಿಲ್ಲ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ - ಕಬ್ಬನ್ ಉದ್ಯಾನ ಅಭಿವೃದ್ಧಿ ಜೊತೆಗೆ ಹೈಕೋರ್ಟ್ ಸ್ಥಳಾಂತರದ ಬಗ್ಗೆ ಪ್ರಸ್ತಾಪ