Skip to main content
ವಿಡಿಯೋ
1/3
politics

ಸ್ಪರ್ಧಿಸಲು ಆಸಕ್ತಿ ಇಲ್ಲದಿದ್ರೂ ಚನ್ನಪಟ್ಟಣದಲ್ಲಿ ನಾನು ನಿಮಗಾಗಿ ತಲೆಕೊಟ್ಟೆ..ನಿಖಿಲ್‌ ಕುಮಾರಸ್ವಾಮಿ ಹೇಳಿದ್ಯಾರಿಗೆ?

By Pavitra Ganapathi Baradavalli
 ಸ್ಪರ್ಧಿಸಲು ಆಸಕ್ತಿ ಇಲ್ಲದಿದ್ರೂ ಚನ್ನಪಟ್ಟಣದಲ್ಲಿ ನಾನು ನಿಮಗಾಗಿ ತಲೆಕೊಟ್ಟೆ..ನಿಖಿಲ್‌ ಕುಮಾರಸ್ವಾಮಿ ಹೇಳಿದ್ಯಾರಿಗೆ?

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗದಿದ್ದರೂ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿ ಸೋತಿದ್ದಾರೆ. ಸಭೆಯಲ್ಲಿ ಅವರು ತಮ್ಮ ನೋವು ಹಂಚಿಕೊಂಡು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವುದಾಗಿ ಘೋಷಿಸಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಆಸಕ್ತಿ ಇರಲಿಲ್ಲ. ಆದರೂ ಪಕ್ಷದ ಒಳಿತಿಗಾಗಿ ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿ ತಲೆಕೊಟ್ಟೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋತಿದ್ದರೂ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಅಶ್ವಿನಿ-ಜಾನ್ವಿ ಸ್ನೇಹದಲ್ಲಿ ದೊಡ್ಡ ಬಿರುಕು...ಅಷ್ಟಕ್ಕೂ ಇಬ್ಬರಿಗೂ ಜಗಳ ಯಾಕೆ, ದೂರ ಆಗಲು ಕಾರಣ ಏನು?

ಅಕ್ಟೋಬರ್ 27ರಂದು ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದ ಸಾಯಿ ಮಂದಿರದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ರಾಜಕೀಯವಾಗಿ ತಾವು ಅನುಭವಿಸಿದ ನೋವು ಬೇರೆಯವರಿಗಾಗಿದ್ದರೆ ಮನೆಯಿಂದ ಆಚೆ ಬರುತ್ತಿರಲಿಲ್ಲ ಎಂದರು. ಆದರೂ, ತಾವು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದರು.ಇದನ್ನೂ ಓದಿ: ಮಟನ್ ಅಂಗಡಿಯಲ್ಲಿ ಕೂತಿದ್ದವನ ಮೇಲೆ ಫೈ*ರಿಂಗ್‌; ಇಸ್ಲಾಂಪುರದಲ್ಲಿ ಘಟನೆ

ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದವರು ಸೂಚಿಸಿದ್ದರು. ಆದರೆ, ಅದನ್ನು ನಿರಾಕರಿಸಿದೆ. ಇಲ್ಲಿ ಪಕ್ಷದ ಕಾರ್ಯಕರ್ತರಿಗಾಗಿ ಬಂದು ತಲೆಕೊಟ್ಟೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಸೋತರೂ ತಾನು ಮನೆಯಲ್ಲಿ ಕೂತಿಲ್ಲ. ಪಕ್ಷ ಸಂಘಟಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಜಯಮುತ್ತು ಅಥವಾ ಹಾಪ್‌ಕಾಮ್ಸ್ ದೇವರಾಜು ಅವರಲ್ಲಿ ಯಾರಾದರೂ ಒಬ್ಬರು ಸ್ಪರ್ಧಿಸುವಂತೆ ಕುಮಾರಸ್ವಾಮಿ ತಿಳಿಸಿದ್ದರು. ಆದರೆ, ಕೊನೆಗೆ ನನ್ನ ತಲೆಗೆ ಕಟ್ಟಿದರು. ಇದು ನೀವು ಕಟ್ಟಿರುವ ಪಕ್ಷ, ಇಲ್ಲಿ ಪ್ರಾಮಾಣಿಕರು ಯಾರು ಮತ್ತು ಅಪ್ರಾಮಾಣಿಕರು ಯಾರು ಎಂದು ತಮ್ಮ ಆತ್ಮಸಾಕ್ಷಿಗೆ ಕೇಳಿಕೊಂಡರೆ ಸಾಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ಸಂಪುಟ ಪುನಾರಚನೆ ದೋಣಿ ಸಿದ್ದ...ನವೆಂಬರ್‌ನಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೆ ಸಜ್ಜು!

ಎರಡು ತಿಂಗಳ ಹಿಂದೆ ದೆಹಲಿಗೆ ಆಗಮಿಸಿದ್ದ ಜಯಮುತ್ತು, ತಾಲೂಕು ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ. ನವೆಂಬರ್ ವೇಳೆಗೆ ಕೆಲ ಜಿಲ್ಲೆಗಳ ಜೆಡಿಎಸ್ ಅಧ್ಯಕ್ಷರ ಬದಲಾವಣೆ ಆಗಲಿದೆ. ಜಯಮುತ್ತು ಅವರನ್ನೇ ಮುಂದುವರಿಸುವುದಾದರೆ ಮುಂದುವರಿಸಿ, ಇಲ್ಲವೇ ಮೂರ್ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿ ಕಳುಹಿಸಿ ಎಂದು ತಿಳಿಸಿದರು. ಬಮೂಲ್ ಚುನಾವಣೆಯಲ್ಲಿ ಸರ್ಕಾರ ಹೇಗೆ ನಡೆದುಕೊಂಡಿತು. ಅಧಿಕಾರಿಗಳು ಹೇಗೆ ಕುಣಿದು ಕುಪ್ಪಳಿಸಿದರು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಕಾಂಗ್ರೆಸ್‌ನವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಿದ್ದಾರೆ ಎಂದು ತೀಕ್ಷ್ಣವಾಗಿ ನುಡಿದರು. ತಮ್ಮ ಮೇಲೆ ದಾಖಲಾಗುವ ಕೇಸ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಕಾರ್ಯಕರ್ತರಿಗೆ ಸೂಚಿಸಿದರು. ನೂರು ಕೇಸ್ ಹಾಕಿದರೂ ವಿಚಲಿತರಾಗಬೇಡಿ ಎಂದು ಧೈರ್ಯ ತುಂಬಿದರು.INDO ERA Women's Silk Blend Embroidered A-Line Kurta and Pant with Dupatta Set (Ieout6682)