Skip to main content
ವಿಡಿಯೋ
1/3
business

ಲೆನ್ಸ್‌ಕಾರ್ಟ್ IPO: ಷೇರು ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಹೂಡಿಕೆ!

By Shravanthi R
ಲೆನ್ಸ್‌ಕಾರ್ಟ್ IPO: ಷೇರು ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಹೂಡಿಕೆ!

ಪೆಯೂಷ್ ಬನ್ಸಾಲ್‌ ನೇತೃತ್ವದ ಲೆನ್ಸ್‌ಕಾರ್ಟ್‌ ಕಂಪನಿ, ತನ್ನ ಐಪಿಒ ಮೂಲಕ ಹೊಸ ಹೂಡಿಕೆದಾರರಿಗೆ ದಾರಿಯಾಗುತ್ತಿದೆ. ಸಾಫ್ಟ್‌ಬ್ಯಾಂಕ್, ಪ್ರೇಮ್‌ಜಿ ಇನ್ವೆಸ್ಟ್ ಮತ್ತು ಎಡಿಐಎ ಬೆಂಬಲಿತ ಈ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಪ್ರತಿಕ್ರಿಯೆ ನಿರೀಕ್ಷಿಸಿದೆ ಎಂದು ವರದಿಯಾಗಿದೆ.

ಷೇರು ಮಾರುಕಟ್ಟೆಯಲ್ಲಿ ಐವೇರ್‌ ರೀಟೇಲರ್‌ ಬ್ರ್ಯಾಂಡ್‌ ಲೆನ್ಸ್‌ಕಾರ್ಟ್‌ ಐಪಿಒ ದಾಖಲೆಗೆ ಮುಂದಾಗಿದೆ ಎನ್ನಲಾಗಿದೆ. ಲೆನ್ಸ್‌ಕಾರ್ಟ್‌ ಭಾರತ ಮೂಲದ ಕನ್ನಡಕ ತಯಾರಿಕೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಇದರ ಸಂಸ್ಥಾಪಕರು ಹಾಗೂ ಹೂಡಿಕೆದಾರರ ಲಾಭದ ನಿಧಿಗಾಗಿ ಸಜ್ಜುಗೊಳಿಸಲಾಗಿದೆ ಎನ್ನಲಾಗಿದೆ. ತನ್ನ ಮೊದಲ ಆರಂಭಿಕ ಸಾರ್ವಜನಿಕ ಷೇರು ಕೊಡುಗೆಯನ್ನು ಆರಂಭಿಸಲಿದೆ. 

ಕಂಪನಿಯು ತನ್ನ ಪ್ರತೀ ಷೇರಿಗೆ 382–402 ರೂ.ಗಳ ನಿಗದಿಪಡಿಸಿದೆ. ಅಕ್ಟೋಬರ್ 31 ರಂದು ತನ್ನ ಐಪಿಒ ಆರಂಭಿಸಿ, ಹೊಸ ಷೇರುಗಳ ವಿತರಣೆಯ ಮೂಲಕ 2,150 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಮಾಲೀಕರಾದ ಪೆಯೂಷ್ ಬನ್ಸಾಲ್, ನೇಹಾ ಬನ್ಸಾಲ್, ಅಮಿತ್ ಚೌಧರಿ, ಸುಮೀತ್ ಕಪಾಹಿ ಅವರಿಂದಲೂ ಷೇರು ಮಾರಾಟ ಆಗಿದ್ದು, ಐಪಿಒ ನವೆಂಬರ್ 4 ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದೆ.  Volo Portable Metal Book Stand Holder - Adjustable, Foldable Design for Desktop Use - Ideal for Cookbooks, Textbooks, Sheet Music, and More - Convenient Book Organizer (Black)

ಸೆಬಿಯಿಂದ ಅನುಮತಿ ಪಡೆದ ಬೆನ್ನಲ್ಲೇ, ಸಾಫ್ಟ್‌ಬ್ಯಾಂಕ್, ಪ್ರೇಮ್‌ಜಿ ಇನ್ವೆಸ್ಟ್, ಟೆಮಾಸೆಕ್ ಮತ್ತು ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ (ಎಡಿಐಎ)ಯಂಥಹ ಹೂಡಿಕೆ ಕಂಪನಿಗಳ ಬೆಂಬಲಿತ ಈ ಕಂಪನಿಯು, ಷೇರು ಮಾರುಕಟ್ಟೆಯ ಭರ್ಜರಿ ನ ಹೂಡಿಕೆ ನಿರೀಕ್ಷೆ ಸೃಷ್ಟಿಸಿದೆ. ಕಳೆದ ವಾರ, ಡಿಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು ಕಂಪನಿಯ ಪೂರ್ವ-ಐಪಿಒ ದಲ್ಲಿ ಸುಮಾರು 90 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Zero Enrollment: ಭಾರತದ 8,000 ಶಾಲೆಗಳಲ್ಲಿಲ್ಲದ ವಿದ್ಯಾರ್ಥಿಗಳು, ಆದರೆ ಶಿಕ್ಷಕರಿದ್ದಾರೆ - ಪಶ್ಚಿಮ ಬಂಗಾಳ ನಂ. 1!