ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಈಗ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ, ಅದೂ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅವರಿಂದ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತು ಊಹಾಪೋಹಗಳು ಹರಿದಾಡಿದ್ದವು.ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್: ಸಿಜೆಐ ಬಿ.ಆರ್. ಗವಾಯಿಯಿಂದ ಶಿಫಾರಸು
ಈ ಚರ್ಚೆಗಳ ನಡುವೆಯೇ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಪಿಚ್ನಲ್ಲಿ ಅಬ್ಬರಿಸಿದ್ದರು. ಅಡಿಲೇಡ್ನಲ್ಲಿ 73 ರನ್ಗಳ ಉತ್ತಮ ಇನಿಂಗ್ಸ್ ಆಡಿದ್ದ ಹಿಟ್ಮ್ಯಾನ್, ಸಿಡ್ನಿಯಲ್ಲಿ ಅಜೇಯ 121 ರನ್ಗಳ ಶತಕದೊಂದಿಗೆ ನಿವೃತ್ತಿ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದರು. ಆದರೂ, ರೋಹಿತ್ ಶರ್ಮಾ ಇನ್ನೆಷ್ಟು ವರ್ಷ ಆಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿತ್ತು.
ಈ ಪ್ರಶ್ನೆಗೆ ದಿನೇಶ್ ಲಾಡ್ ಉತ್ತರಿಸಿದ್ದಾರೆ. ರೋಹಿತ್ ಶರ್ಮಾ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ. ಇನ್ನೂ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ. ರೋಹಿತ್ರ ಕನಸು ಏಕದಿನ ವಿಶ್ವಕಪ್ ಗೆಲ್ಲುವುದು. ಹೀಗಾಗಿ, 2027ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಕೊನೆಯ ಪಂದ್ಯದ ಬಳಿಕ ರೋಹಿತ್ ಶರ್ಮಾ ನಿವೃತ್ತಿಯನ್ನು ಘೋಷಿಸಲಿದ್ದಾರೆ, ಎಂದು ಲಾಡ್ ತಿಳಿಸಿದ್ದಾರೆ.ಇದನ್ನೂ ಓದಿ: ಸ್ಪರ್ಧಿಸಲು ಆಸಕ್ತಿ ಇಲ್ಲದಿದ್ರೂ ಚನ್ನಪಟ್ಟಣದಲ್ಲಿ ನಾನು ನಿಮಗಾಗಿ ತಲೆಕೊಟ್ಟೆ..ನಿಖಿಲ್ ಕುಮಾರಸ್ವಾಮಿ ಹೇಳಿದ್ಯಾರಿಗೆ?
ಈ ಮೂಲಕ ರೋಹಿತ್ ಶರ್ಮಾ 2027ರವರೆಗೆ ಭಾರತ ತಂಡದಲ್ಲಿ ಮುಂದುವರಿಯುವುದು ಖಚಿತವಾಗಿದೆ. ದಿನೇಶ್ ಲಾಡ್ ಅವರು ನಿವೃತ್ತಿ ಸುದ್ದಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. 40ನೇ ವಯಸ್ಸಿನಲ್ಲಿ ಏಕದಿನ ವಿಶ್ವಕಪ್ ಗೆದ್ದು, ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಸ್ಮರಣೀಯವಾಗಿ ಅಂತ್ಯಗೊಳಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.INDO ERA Women's Silk Blend Embroidered A-Line Kurta and Pant with Dupatta Set (Ieout6682)