ಭಾರತ ಹಾಗೂ ಚೀನಾ ದೇಶಗಳ ನಡುವಿನ ನೇರ ವಿಮಾನಯಾನ ಪುನರಾರಂಭವಾಗಿದೆ. ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳಿಗೆ ವಿಮಾನ ಪ್ರಯಾಣವನ್ನು ಮರುಸಂಪರ್ಕಿಸಲಾಗಿದೆ.
ಇಂದು ಕೋಲ್ಕತ್ತಾದಿಂದ ಇಂಡಿಗೋ ವಿಮಾನ 6E1703 ಚೀನಾದ ಗುವಾಂಗ್ ಝೌ ವಿಮಾನ ನಿಲ್ದಾಣಕ್ಕೆ ಸುಮಾರು 4 ಗಂಟೆಗೆ ಬಂದಿಳಿದಿದ್ದು, ಮೊದಲ ನೇರ ವಿಮಾನ ಪ್ರಯಾಣ ಆರಂಭಗೊಂಡಿದೆ.
ಕೋವಿಡ್ ಹಾಗೂ ಭೌಗೋಳಿಕ ಹಾಗೂ ರಾಜಕೀಯ ಉದ್ವಿಗ್ನತೆಯಿಂದ ನೆರೆಹೊರೆಯ ದೇಶಗಳ ಮಧ್ಯೆ ವಿಮಾನಯಾನ ಸಂಪರ್ಕವು ನಿಂತುಹೋಗಿತ್ತು ಎನ್ನಲಾಗಿದೆ.
ಅಂತರರಾಷ್ಟ್ರೀಯ ಸಂಬಂಧಗಳು ಕ್ಷೀಣಿಸುತ್ತಿವೆ ಎನ್ನಲಾಗಿರುವ ಮಧ್ಯೆ ಗಡಿ ವಿವಾದ, ಪ್ರಾದೇಶಿಕ ಅಸಮಧಾನದಂತಹ ಸಮಸ್ಯೆಗಳ ನಡುವಲ್ಲೂ ಎರಡು ದೇಶಗಳ ನಡುವಣ ಸಂಬಂಧಗಳಲ್ಲಿ ಸುಧಾರಣೆ ಕಂಡಿದೆ ಎನ್ನಲಾಗಿದೆ. My First Mythology Tale (Illustrated) (Set of 5 Books) (Kannada) - Mahabharata, Krishna, Hanuman, Ganesha, Ramayana - Story Books for Kids - Kannada Short Stories Paperback – 19 June 2024
ಈ ಕುರಿತ ಹೆಚ್ಚುವರಿ ಸೇವೆಗಳು ನವೆಂಬರ್‌ನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ ಎನ್ನಲಾಗಿದೆ. ತಡೆರಹಿತ ವಿಮಾನಸಂಪರ್ಕಗಳ ಜೊತೆಗೆ, ನಿಯಮಿತ ವಿಮಾನಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮತ್ತಷ್ಟು ಸಮಸ್ಯೆಗಳ ಸರಿಪಡಿಸುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಕೇಳಿಬಂದಿದೆ. ಇದನ್ನೂ ಓದಿ: ಚಿನ್ನದ ಮಾರುಕಟ್ಟೆ ಅಸ್ಥಿರತೆ: ತಜ್ಞರು ಹೇಳಿದಂತೆ ʻರೆಡ್ ಅಲರ್ಟ್ʼ ಮುನ್ನೆಚ್ಚರಿಕೆ!?