Skip to main content
ವಿಡಿಯೋ
1/3
politics

ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ - ಕುಮಾರ್‌ ಬಂಗಾರಪ್ಪ ಹೇಳಿಕೆ

By Shravanthi R
ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ - ಕುಮಾರ್‌ ಬಂಗಾರಪ್ಪ ಹೇಳಿಕೆ

ರಾಜ್ಯ ಸರ್ಕಾರವು ನಡೆಸಿರುವ ಜಾತಿ ಸಮೀಕ್ಷೆ ಬಗ್ಗೆ ಹಲವು ಅಸಮಧಾನಕರ ಬೆಳವಣಿಗೆಗಳು ಕಂಡುಬಂದವು. ಈ ಮಧ್ಯೆ, ಜಾತಿಗಣತಿ ಪರವಾಗಿ ಬಿಜೆಪಿ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಅವರು ತಮ್ಮ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯನ್ನು ಬೆಂಬಲಿಸಿದ್ದಾರೆ. ಜಾತಿಗಣತಿ ವಿರುದ್ಧ ಹಲವು ಬಿಜೆಪಿ ನಾಯಕರು ವಿರೋಧಿಸಿರುವ ಮಧ್ಯೆ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಕಾಲಕಾಲಕ್ಕೆ ಸಮೀಕ್ಷೆಗಳು ನಡೆಯುತ್ತವೆ. ರಾಜ್ಯ ಸರ್ಕಾರದಿಂದ ಸಮೀಕ್ಷೆ ನಡೆಸಲಾಗುತ್ತದೆ. ಅದಕ್ಕೆ ಎಲ್ಲಾ ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು. ಸಮೀಕ್ಷೆಯನ್ನು ತಿರಸ್ಕರಿಸಬಾರದು. Manku Thimmana kagga-by D.V.G Hardcover

ಇದು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಾವುದೇ ವರ್ಗಕ್ಕೆ ಸೇರಿದ್ದಲ್ಲ ಎಂದಿದ್ದಾರೆ. ಜಾತಿ, ಜನಗಣತಿ ಹಾಗೂ ವರ್ಗ ಸಮೀಕ್ಷೆ ಕೇಂದ್ರ ಸರ್ಕಾರವು ಮಾಡಬಹುದು ಆಗ ಇದೇ  ಮಾದರಿಯನ್ನು ಅನುಸರಿಸಲಾಗುವುದು. ಇದರಲ್ಲಿ ಪಾಲ್ಗೊಳ್ಳುವುದು ಆದ್ಯ ಕರ್ತವ್ಯವಾಗಿದೆ. 

ರಾಜ್ಯದ ಬಳಿಕ ಕೇಂದ್ರ ಸರ್ಕಾರದ ಸಮೀಕ್ಷೆ ಬರುತ್ತದೆ. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯಿಂದ ವಿರೋಧವಿಲ್ಲ, ವೈಯಕ್ತಿಕ ವಿಚಾರ ಕೇಳುವುದಕ್ಕೆ ವಿರೋಧವಿದೆ. ಕೇಂದ್ರ ಸರ್ಕಾರದ ಸಮೀಕ್ಷೆ ಆರಂಭಗೊಂಡಾಗ, ಕಾಂಗ್ರೆಸ್ ವಿರೋಧ ಮಾಡುತ್ತೆ ಎಂದು ಹೇಳಲು ಸಾಧ್ಯವೇ? ಇದರಲ್ಲಿ ರಾಜಕಾರಣ ಮಾಡಬಾರದು ಎಂದು ನುಡಿದಿದ್ದಾರೆ. ಇದನ್ನೂ ಓದಿ: ಭಾರತ - ಚೀನಾ ವಿಮಾನಯಾನ: ಐದು ವರ್ಷಗಳ ಬಳಿಕ ಮರುಸಂಪರ್ಕದ ರೆಕ್ಕೆಗಳು!