ಭಾರತದ ದೇಶಭ್ರಷ್ಟನೆಂದು ಗುರುತಿಸಿರುವ ಹಾಗೂ ವಿವಾದಾತ್ಮಕ ಧರ್ಮೋಪದೇಶಕ ಝಾಕಿರ್ ನಾಯ್ಕ್ ಇದೀಗ ಬಾಂಗ್ಲಾದೇಶಕ್ಕೆ ಆಗಮಿಸಿಲಿದ್ದು, ಇದಕ್ಕಾಗಿ ರೆಡ್ ಕಾರ್ಪೆಟ್ ಸ್ವಾಗತ ಸಿದ್ದತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಒಂಭತ್ತು ವರ್ಷಗಳ ನಂತರ, ಆತನ ಮೊದಲ ಭೇಟಿಯಿದಾಗಿದೆ. ಶೇಖ್ ಹಸೀನಾ ಅವರಿದ್ದ ಸರ್ಕಾರವು ಈತನ ಒಡೆತನದ ಅಂದಿನ ಪೀಸ್ ಟಿವಿಯನ್ನು ನಿಷೇಧಗೊಳಿಸಿತ್ತು.
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು, ಒಂದು ತಿಂಗಳಕಾಲ ನಾಯ್ಕ್‌ಗೆ ರಾಷ್ಟ್ರವ್ಯಾಪಿ ಪ್ರವಾಸಕ್ಕೆ ಅನುಮೋದನೆ ನೀಡಿದೆ. ಆಯೋಜಕರು, ನವೆಂಬರ್ 28 ರಿಂದ ಡಿಸೆಂಬರ್ 20 ರವರೆಗೆ ಈ ಪ್ರವಾಸಕ್ಕೆ ಹಾಗೂ ಸರಣಿ ಧರ್ಮೋಪದೇಶಕ್ಕೆ ಅನುಕೂಲ ಮಾಡಲಿದ್ದಾರೆ.
ಭಾರತದಲ್ಲಿ ದ್ವೇಷ ಭಾಷಣ ಹಾಗೂ ಕೋಮು ಸೌಹಾರ್ದತೆಗೆಡಹುವ ಆರೋಪ ಹೊತ್ತ ಈತನಿಗೆ ಯೂನಸ್ ಸರ್ಕಾರ ಮಾನ್ಯತೆ ನೀಡಿದೆ ಎನ್ನಲಾಗಿದೆ. Mookajjiya Kanasugalu: Gnyaanapeeta Prashasthi Puraskrutha Kaadambari Hardcover – 1 January 2018
2016 ರಿಂದ ಭಾರತವನ್ನು ತೊರೆದು, ತಲೆಮರೆಸಿಕೊಂಡಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಈ ಹಿಂದೆ ಮಲೇಷಿಯಾದಲ್ಲಿ ನೆಲೆಸಿರುವುದಾಗಿ ಸುದ್ದಿಯಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಜೊತೆಗೆ, ಆತನ ಹಸ್ತಾಂತರಕ್ಕಾಗಿ ಒಪ್ಪಿಗೆ ನೀಡಿ ಮಲೇಷಿಯಾ ಸರ್ಕಾರವು ಭಾರತ ಸಲ್ಲಿಸಿದ ಮನವಿಗೆ ಸ್ಪಂದಿಸಿ ಸಹಕರಿಸುವುದಾಗಿ ತಿಳಿಸಿತ್ತು. ಇದನ್ನೂ ಓದಿ: ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ - ಕುಮಾರ್ ಬಂಗಾರಪ್ಪ ಹೇಳಿಕೆ