Skip to main content
ವಿಡಿಯೋ
1/3
general

ಮದ್ರಾಸ್‌ ಹೈಕೋರ್ಟ್‌ ತೀರ್ಪು: ಭಾರತದ ಕಾನೂನಿನಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಇದೀಗ ಅಧಿಕೃತ ಆಸ್ತಿ!

By Shravanthi R
ಮದ್ರಾಸ್‌ ಹೈಕೋರ್ಟ್‌ ತೀರ್ಪು: ಭಾರತದ ಕಾನೂನಿನಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಇದೀಗ ಅಧಿಕೃತ ಆಸ್ತಿ!

ಹಣ ಸ್ವರೂಪದ್ದಲ್ಲದ ಕ್ರಿಪ್ಟೋ ಕರೆನ್ಸಿ ಮೌಲ್ಯಗಳಿಗೆ ಆಸ್ತಿಯೆಂದು ಪರಿಗಣಿಸಿ, ಮದ್ರಾಸ್‌ ಹೈಕೋರ್ಟ್‌ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 2(47ಎ) ಅಡಿಯಲ್ಲಿ ವರ್ಚುವಲ್ ಡಿಜಿಟಲ್ ಸ್ವತ್ತುಗಳು ಎಂದು ಅವುಗಳ ವರ್ಗೀಕರಣವನ್ನು ಉಲ್ಲೇಖಿಸಿದೆ ಎನ್ನಲಾಗಿದೆ.

ಭಾರತೀಯ ಕಾನೂನಿನಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಈಗ ಅಧಿಕೃತ ʻಆಸ್ತಿʼಯೆಂದು ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಡಿಜಿಟಲ್‌ ಸ್ವತ್ತುಗಳ ಕಾನೂನು ಸ್ಥಿತಿಯನ್ನು ಹೆಗ್ಗುರುತಾಗಿಸಿದೆ.

ಇನ್ನೂ ಅಮೂರ್ತ ಹಾಗೂ ಕಾನೂನುಬದ್ಧವಲ್ಲದ ಕ್ರಿಪ್ಟೋ ಕರೆನ್ಸಿಯು ಆಸ್ತಿಯ ಅಗತ್ಯ ಗುಣಲಕ್ಷಣಗಳನ್ನು ಹೊಂದಿದೆ. ಇದರ ಮಾಲೀಕತ್ವ, ನಿಯಂತ್ರಣ ಹಾಗೂ ಸಮರ್ಥ ವರ್ಗಾವಣೆ ಮಾಡಬಹುದಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿ ಆನಂದ್‌ ವೆಂಕಟೇಶ್‌ ಅವರು ತಿಳಿಸಿದ ಹಾಗೆ, ಕ್ರಿಪ್ಟೋ ಕರೆನ್ಸಿಯು ಸ್ಪರ್ಶಿಸಬಹುದಾದ್ದಲ್ಲ. ನಗದೂ ಅಲ್ಲ ಆದರೆ, ಅದು ಕಾನೂನು ಮೌಲ್ಯವನ್ನು ಹೊಂದಿದ್ದು; ಒಂದು ಆಸ್ತಿ ಎಂಬುದರಲ್ಲಿ ಸಂದೇಹವಿಲ್ಲ. ಅದು ಆಸ್ತಿಯಾಗಿ ಅನುಭವಿಸಲು, ಇರಿಸಿಕೊಳ್ಳಲು ಸಮರ್ಥವಾಗಿದೆ ಹಾಗೂ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 2(47ಎ) ಅಡಿಯಲ್ಲಿ ವರ್ಚುವಲ್ ಡಿಜಿಟಲ್ ಸ್ವತ್ತುಗಳು ಎಂದು ಅವುಗಳ ವರ್ಗೀಕರಣವನ್ನು ಉಲ್ಲೇಖಿಸಿದೆ. ಕ್ರಿಪ್ಟೋ ಕರೆನ್ಸಿಗಳು ʼಊಹಾತ್ಮಕ ಚಟುವಟಿಕೆʼಗಳಿಗೆ ಬರುವುದಿಲ್ಲ ಎಂದು ಹೈಕೋರ್ಟ್‌ ಒತ್ತಿ ಹೇಳಿದೆ. Malegalalli Madhumagalu Hardcover

ಕಳೆದ ವರ್ಷ ಜುಲೈನಲ್ಲಿ ನಡೆದ ಸೈಬರ್ ದಾಳಿಯ ನಂತರ ವಜಿರ್‌ಎಕ್ಸ್ ವೇದಿಕೆಯಲ್ಲಿ ಕ್ರಿಪ್ಟೋಕರೆನ್ಸಿ ಮೊತ್ತ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು (ಅರ್ಜಿದಾರರು) ಅರ್ಜಿ ಸಲ್ಲಿಕೆ ಮಾಡಿದ್ದರು. ಕ್ರಿಪ್ಟೋಕರೆನ್ಸಿಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ (ಕೋಲ್ಡ್‌ ವ್ಯಾಲೆಟ್‌) ಸೈಬರ್‌ ದಾಳಿಗೆ ತುತ್ತಾದ ಪರಿಣಾಮ, ಎಥೆರಿಯಮ್‌ ಕ್ರಿಪ್ಟೋಕರೆನ್ಸಿ ನಷ್ಟ ಉಂಟಾಗಿತ್ತು. ಈ ಕುರಿತು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಪ್ರಕಟಿಸಲಾಗಿದೆ. ಇದನ್ನೂ ಓದಿ: ಝಾಕಿರ್ ನಾಯ್ಕ್‌: ಭಾರತದ ಮೋಸ್ಟ್‌ ವಾಂಟೆಡ್‌ ಆರೋಪಿಗೆ ರೆಡ್‌ ಕಾರ್ಪೆಟ್‌ ಸ್ವಾಗತ ಮಾಡಲಿದೆ ಬಾಂಗ್ಲಾದೇಶ!