Skip to main content
ವಿಡಿಯೋ
1/3
cinema

ಋತುಚಕ್ರದ ತೀವ್ರ ಸಮಸ್ಯೆ ಇದ್ರೆ ನೆಗ್ಲೆಟ್‌ ಬೇಡ...ನಟಿ ಸಂಗೀತಾ ಭಟ್‌ಗೆ ಆದ ಅನುಭವ ಎಷ್ಟು ಭಯಾನಕವಾಗಿತ್ತು ಗೊತ್ತಾ?

By Ram Chethan
ಋತುಚಕ್ರದ ತೀವ್ರ ಸಮಸ್ಯೆ ಇದ್ರೆ ನೆಗ್ಲೆಟ್‌ ಬೇಡ...ನಟಿ ಸಂಗೀತಾ ಭಟ್‌ಗೆ ಆದ ಅನುಭವ ಎಷ್ಟು ಭಯಾನಕವಾಗಿತ್ತು ಗೊತ್ತಾ?

ನಟಿ ಸಂಗೀತಾ ಭಟ್ ತಮ್ಮ ಋತುಚಕ್ರದ ಅಸಮತೋಲನದಿಂದ ಉಂಟಾದ ಗರ್ಭಕೋಶದ ಗಡ್ಡೆ ಸಮಸ್ಯೆಯನ್ನು ಬಹಿರಂಗಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರು ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಋತುಚಕ್ರದ ಸಮಸ್ಯೆಗಳನ್ನು ಅನೇಕ ಮಹಿಳೆಯರು ನಿರ್ಲಕ್ಷಿಸುತ್ತಾರೆ. ಪದೇ ಪದೇ ಮುಟ್ಟಾಗುವುದು, ತಿಂಗಳುಗಟ್ಟಲೆ ಮುಟ್ಟಾಗದಿರುವುದು ಅಥವಾ ತೀವ್ರ ನೋವು ಸಾಮಾನ್ಯ ಎಂದು ಭಾವಿಸುತ್ತಾರೆ. ಆದರೆ, ವೈದ್ಯಕೀಯ ಲೋಕ ಇದನ್ನು ಸಾಮಾನ್ಯವೆಂದು ಪರಿಗಣಿಸುವುದಿಲ್ಲ. ಇದರ ಹಿಂದೆ ನಿರ್ದಿಷ್ಟ ಕಾರಣವಿರಬಹುದು ಎಂದು ನಟಿ ಸಂಗೀತಾ ಭಟ್ ತಮ್ಮ ವೈಯಕ್ತಿಕ ಅನುಭವದಿಂದ ಹೇಳಿದ್ದಾರೆ.

ಸಂಗೀತಾ ಭಟ್ ತಮ್ಮ ಇತ್ತೀಚಿನ ಆರೋಗ್ಯ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರಿಗೆ ಪದೇ ಪದೇ ಋತುಚಕ್ರವಾಗುತ್ತಿದ್ದು, ಇದರೊಂದಿಗೆ ತೀವ್ರ ನೋವಿತ್ತು. ಆರಂಭದಲ್ಲಿ ವೈದ್ಯರು ಇದನ್ನು ಸಾಮಾನ್ಯವೆಂದು ಹೇಳಿದ್ದರು, ಕುಟುಂಬದವರೂ ಇದನ್ನೇ ನಂಬಿದ್ದರು.USPA|TORM| Stylish Casual Sneaker Shoes for Man

ಆದರೆ, ಸಂಗೀತಾ ಭಟ್‌ಗೆ ಈ ಸ್ಥಿತಿ ಅಸಾಮಾನ್ಯವೆಂದು ಅನಿಸಿತು. ಹಾಗಾಗಿ, ಅವರು ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ, ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ಈ ಗಡ್ಡೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಈ ಸಮಸ್ಯೆ ನಿವಾರಣೆಗಾಗಿ ಸಂಗೀತಾ ಭಟ್ 'ಹಿಸ್ಟ್ರೋಸ್ಕೋಪಿಕ್ ಪಾಲಿಪೆಕ್ಟಮಿ' ಎಂಬ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ಕಾರ್ಯಾಚರಣೆಯ ನಂತರ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಈ ಗಡ್ಡೆ ಮತ್ತೆ ಮರುಕಳಿಸುವ ಸಾಧ್ಯತೆಯಿದ್ದು, ಜೀವಿತಾವಧಿ ಪೂರ್ತಿ ಈ ಸಮಸ್ಯೆಯೊಂದಿಗೆ ಬದುಕಬೇಕಾಗಬಹುದು ಎಂದಿದ್ದಾರೆ.ನಿರ್ಮಾಪಕ ಕುಡಿದು ಲಿಪ್‌ಕಿಸ್‌ ಕೊಟ್ಟ..ಶರ್ಟ್‌ ಒಳಗೆ ಕೈ ಹಾಕಿ ದುರ್ವರ್ತನೆ ತೋರಿದ! ಫೇಮಸ್‌ ನಟಿಯ ಭಯಾನಕ ಅನುಭವ!

ಈ ಸ್ಥಿತಿಯಿಂದಾಗಿ ಋತುಚಕ್ರದಲ್ಲಿ ವ್ಯತ್ಯಯ, ಮುಟ್ಟಿನ ಸಮಯದಲ್ಲಿ ವಿಪರೀತ ನೋವು, ದೇಹದ ತೂಕ ಹೆಚ್ಚಳ ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಂಗೀತಾ ಭಟ್ ಪ್ರಕಾರ, "ಕೆಲವು ಮಹಿಳೆಯರಿಗೆ ಹಲವು ತಿಂಗಳು ಮುಟ್ಟಾಗುವುದಿಲ್ಲ, ಇನ್ನೂ ಕೆಲವರಿಗೆ ತಿಂಗಳಿಗೆ ಹಲವು ಬಾರಿ ಆಗಬಹುದು. ಋತುಚಕ್ರದ ಸಮಯದಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳಬಹುದು. ಇದನ್ನು ಅನೇಕರು ನಿರ್ಲಕ್ಷಿಸುತ್ತಾರೆ, ಆದರೆ ಇದು ಸರಿಯಲ್ಲ. ನಾವು ಸೇವಿಸುವ ಆಹಾರದಲ್ಲಿನ ವಿಷಕಾರಿ ಅಂಶಗಳಿಂದ ಹಾರ್ಮೋನ್ ಅಸಮತೋಲನ ಉಂಟಾಗಬಹುದು."

ಈ ಸಮಸ್ಯೆ ಉಂಟಾಗಲು ನಿಖರ ಕಾರಣವೇನು ಎಂದು ಹೇಳಲಾಗುವುದಿಲ್ಲ. ಆದರೆ, ಭಾರತದಲ್ಲಿ ಪ್ರತಿ 10 ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಸಂಗೀತಾ ಭಟ್ ನಟನೆಯ 'ಕಮಲ್ ಶ್ರೀದೇವಿ' ಸಿನಿಮಾ ಸೆಪ್ಟೆಂಬರ್ 19 ರಂದು ಬಿಡುಗಡೆಯಾದ ಕಾರಣ ಅವರು ತಮ್ಮ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು.

ಆದರೆ, ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಕಾರ್ಯಾಚರಣೆಯ ಬಗ್ಗೆ ಅವರಿಗೆ ಭಯವಿದ್ದರೂ, ಪತಿ ಸುದರ್ಶನ್ ನೀಡಿದ ಧೈರ್ಯದಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟರು. ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯನ್ನು ಸೀಳುವ ಬದಲಾಗಿ, ದೇಹದೊಳಗೆ ಒಂದು ಸಣ್ಣ ಉಪಕರಣವನ್ನು ಸೇರಿಸಿ ಗಡ್ಡೆಯನ್ನು ತೆಗೆಯಲಾಗುತ್ತದೆ.ಇದನ್ನು ಓದಿ:ಅಶ್ವಿನಿ ಗೌಡಗೆ ಬಿಗ್‌ಬಾಸ್‌ನಲ್ಲಿ ಸುದೀಪ್‌ ಶಿಕ್ಷೆ...ತಪ್ಪೊಪ್ಪಿಕೊಂಡು ಏನ್‌ ಮಾಡಿದ್ರು ಗೊತ್ತಾ?

"ಎಷ್ಟೋ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರಬಹುದು. ಹೀಗಾಗಿ ಇದನ್ನು ನಿರ್ಲಕ್ಷಿಸಬಾರದು. ಮುಂದೊಂದು ದಿನ ಇದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆಯೂ ಇರುತ್ತದೆ. ಗರ್ಭಕೋಶದ ಒಳಪದರದಲ್ಲಿ ಬೆಳೆಯುವುದರಿಂದ ಇದು ಗರ್ಭಧಾರಣೆಗೂ ಸಮಸ್ಯೆ ಉಂಟುಮಾಡಬಹುದು," ಎಂದು ಸಂಗೀತಾ ಭಟ್ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.