Skip to main content
ವಿಡಿಯೋ
1/3
general

ಮನೆ ಸ್ಪೋಟ ಪ್ರಕರಣ - ಸಿಲಿಂಡರ್ ಗ್ಯಾಸ್ ಸೋರಿಕೆಯೇ ಅಥವಾ ಬೇರೆ ಸ್ಟೋಟಕ ವಸ್ತುಗಳಿದೆಯೇ? - ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ!

By Shravanthi R
ಮನೆ ಸ್ಪೋಟ ಪ್ರಕರಣ - ಸಿಲಿಂಡರ್ ಗ್ಯಾಸ್ ಸೋರಿಕೆಯೇ ಅಥವಾ ಬೇರೆ ಸ್ಟೋಟಕ ವಸ್ತುಗಳಿದೆಯೇ? - ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ!

ಕೆ.ಆರ್.ಪುರಂ ತ್ರಿವೇಣಿನಗರದಲ್ಲಿ ಸಂಭವಿಸಿದ ಭೀಕರ ಮನೆ ಸ್ಪೋಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕವಾಗಿ ಸಿಲಿಂಡರ್‌ ಸೋರಿಕೆಯಿಂದ ಸಂಭವಿಸಿದ ಅವಘಡವೆಂದು ಶಂಕಿಸಲಾಗಿದೆ. ಆದರೆ ಸ್ಪೋಟದ ನಿಖರ ಕಾರಣ ತಿಳಿಯಲು ಎಫ್ಎಸ್ಎಲ್‌ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.

ಬೆಂಗಳೂರು: ಶನಿವಾರ ಮುಂಜಾನೆ ನಗರದ ಕೆ.ಆರ್‌ ಪುರಂನ ಮನೆಯೊಂದರಲ್ಲಿ ಸಿಲಿಂಡರ್‌ ಸೋರಿಕೆ ಸ್ಪೋಟ ಅವಘಡವು ಸಂಭವಿಸಿದೆ. ಕೆ.ಆರ್‌ ಪುರಂನ ವಿಧಾನಸಭಾ ಕ್ಷೇತ್ರದ ತ್ರಿವೇಣಿನಗರದಲ್ಲಿ ಸಂಭವಿಸಿದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ್‌ ಅವರು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಈ ದುರ್ಘಟನೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಮನೆಯು ಸಂಪೂರ್ಣ ಹಾನಿಗೊಳಗಾಗಿದ್ದು, ಜನರು ಇಂತಹ ಘಟನೆಗಳಿಂದ ಭಯಭೀತರಾಗುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಇದೇ ವೇಳೆ ಸ್ಪೋಟ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದರು. 

ಈ ಹಿನ್ನಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿರುವ ಪೋಲಿಸರು, ಸ್ಪೋಟದ ಬಗ್ಗೆ ಅನುಮಾನ ಮೂಡಿದ್ದು, ಸಿಲಿಂಡರ್ ಗ್ಯಾಸ್ ಸೋರಿಕೆಯೇ ಅಥವಾ ಬೇರೆ ಸ್ಟೋಟಕ ವಸ್ತುಗಳಿದೆಯಾ..? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  KESHAR KAALVI Trending Midi Length 1 Piece | Cotton A-Line Midi Dress | Trending Paisley Printed Fit & Flare Gown | Casual Summer Dress

ಇಡೀ ಮನೆ ನೆಲಸಮವಾಗಿದ್ದು, ಅವಶೇಷಗಳನ್ನ ತೆಗೆದು ಪರಿಶೀಲನೆಗೆ ಸೂಚಿಸಿರುವ ಹಿರಿಯ ಅಧಿಕಾರಿಗಳು, ಸ್ಫೋಟಗೊಂಡ ಸ್ಥಳದ ವಸ್ತುಗಳನ್ನ ಎಫ್ಎಸ್ಎಲ್ ಗೆ ರವಾನಿಸಲಾಗಿದೆ. ಆ ಬಳಿಕ, ರಿಪೋರ್ಟ್ ಬಂದ‌ ಬಳಿಕ ಕಾರಣ ಬೆಳಕಿಗೆ ಬರಲಿದೆ ಎನ್ನಲಾಗಿದೆ. ಇನ್ನು ಗಾಯಾಳು ಯುವತಿ ಚಂದನಾ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮದ್ರಾಸ್‌ ಹೈಕೋರ್ಟ್‌ ತೀರ್ಪು: ಭಾರತದ ಕಾನೂನಿನಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಇದೀಗ ಅಧಿಕೃತ ಆಸ್ತಿ!