Skip to main content
ವಿಡಿಯೋ
1/3
general

ಸಮ್ಮತಿಯೊಂದಿಗಿನ ಲೈಂಗಿಕ ಸಂಬಂಧ ಅಪರಾಧವಲ್ಲ: ಡೇಟಿಂಗ್ ಆ್ಯಪ್ ಸಂಬಂಧಿತ ಕೇಸ್‌ನಲ್ಲಿ ಹೈಕೋರ್ಟ್‌ ತೀರ್ಪು

By Vinutha U
ಸಮ್ಮತಿಯೊಂದಿಗಿನ ಲೈಂಗಿಕ ಸಂಬಂಧ ಅಪರಾಧವಲ್ಲ: ಡೇಟಿಂಗ್ ಆ್ಯಪ್ ಸಂಬಂಧಿತ ಕೇಸ್‌ನಲ್ಲಿ ಹೈಕೋರ್ಟ್‌ ತೀರ್ಪು

ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಫೋಟೋಗಳು, ವೀಡಿಯೋಗಳು ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದರು. 2024ರ ಆಗಸ್ಟ್ 11ರಂದು ಆರೋಪಿ ದೂರುದಾರೆಯನ್ನು ಅಪಾರ್ಟ್‌ಮೆಂಟ್‌ನಿಂದ ರೆಸ್ಟೋರೆಂಟ್‌ಗೆ ಕರೆದುಕೊಂಡು ಊಟ ಮಾಡಿಸಿದ ನಂತರ ಇಬ್ಬರೂ ಓಯೋ ಹೋಟೆಲ್‌ಗೆ ತೆರಳಿದ್ದರು.

ಬೆಂಗಳೂರು (.28): ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು ಓಯೋ ರೂಮ್ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರು ಯುವಕನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ‘ಸಮ್ಮತಿಯೊಂದಿಗಿನ ಲೈಂಗಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ನೀಡಿದೆ.

ಬನ್ನೇರುಘಟ್ಟ ರಸ್ತೆಯ ನಿವಾಸಿ ಸಂಪ್ರಾಸ್ ಆ್ಯಂಥೋನಿ ಅವರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಪುರಸ್ಕರಿಸಿ ಆದೇಶ ಹೊರಡಿಸಿದೆ. ಪ್ರಕರಣದ ದೂರು, ದೋಷಾರೋಪ ಮತ್ತು ಆರೋಪಿ-ದೂರುದಾರರ ನಡುವಿನ ಚಾಟ್ ಸಂದೇಶಗಳನ್ನು ಪರಿಶೀಲಿಸಿದ ಪೀಠ, ಇವುಗಳು ಸಂಪೂರ್ಣ ಸಮ್ಮತಿಯೊಂದಿಗಿನ ಸಂಬಂಧವನ್ನು ಸೂಚಿಸುತ್ತವೆ ಎಂದು ತಿಳಿಸಿದೆ. ಹಿಂದೆ ಈದ್ಗಾ ಮೈದಾನದಲ್ಲಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಯತ್ನಾಳ್: ಸಚಿವ ಎಂ.ಬಿ. ಪಾಟೀಲರ ಹೇಳಿಕೆ

 ಇಂತಹ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದರೆ, ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ತಪ್ಪು ನ್ಯಾಯ ದಾನವಾಗುತ್ತದೆಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ದೂರುದಾರೆ ಮತ್ತು ಆರೋಪಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು ಸಾಕಷ್ಟು ಕಾಲ ಸಂಪರ್ಕದಲ್ಲಿದ್ದರು. ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಫೋಟೋಗಳು, ವೀಡಿಯೋಗಳು ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದರು. 2024 ಆಗಸ್ಟ್ 11ರಂದು ಆರೋಪಿ ದೂರುದಾರೆಯನ್ನು ಅಪಾರ್ಟ್ಮೆಂಟ್ನಿಂದ ರೆಸ್ಟೋರೆಂಟ್ಗೆ ಕರೆದುಕೊಂಡು ಊಟ ಮಾಡಿಸಿದ ನಂತರ ಇಬ್ಬರೂ ಓಯೋ ಹೋಟೆಲ್ಗೆ ತೆರಳಿದ್ದರು.

ಮರುದಿನ ಬೆಳಗ್ಗೆ ಆರೋಪಿ ಆಕೆಯನ್ನು ಅಪಾರ್ಟ್ಮೆಂಟ್ ಬಳಿ ಬಿಟ್ಟಿದ್ದ. ಅದೇ ದಿನ ದೈಹಿಕ ಅಸ್ವಸ್ಥತೆಯಿಂದ ಖಾಸಗಿ ಆಸ್ಪತ್ರೆಗೆ ತೆರಳಿದ ದೂರುದಾರೆ, ‘ಓಯೋ ರೂಮ್ನಲ್ಲಿ ಆರೋಪಿ ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನನ್ನ ಅಸಮ್ಮತಿಯನ್ನು ಉಲ್ಲಂಘಿಸಿದ್ದಾನೆಎಂದು ಆರೋಪಿಸಿ ದೂರು ನೀಡಿದ್ದರು. ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 64 ಅಡಿ ಅತ್ಯಾಚಾರ ಅಪರಾಧದಡಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ತನಿಖೆಯಲ್ಲಿ ದೋಷಾರೋಪಟ್ಟಿ ಸಲ್ಲಿಸಿ ವಿಚಾರಣೆ ಆರಂಭಿಸಿದ್ದರು.

ಆರೋಪಿಯ ಪರ ವಕೀಲರು ಸಲ್ಲಿಸಿದ ಫೋಟೋ, ವೀಡಿಯೋ ಮತ್ತು ಇನ್ಸ್ಟಾಗ್ರಾಂ ಚಾಟ್ಗಳನ್ನು ಪರಿಶೀಲಿಸಿದ ಪೀಠ, ಇವುಗಳು ಇಬ್ಬರ ನಡುವಿನ ಸಂಬಂಧ ಸಮ್ಮತಿಯದ್ದು ಮತ್ತು ಪರಸ್ಪರ ಇಚ್ಛೆಯಿಂದ ಕೂಡಿದ್ದು ಎಂದು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ‘ಸಮ್ಮತಿಯ ಲೈಂಗಿಕ ಸಂಬಂಧ ಮತ್ತು ಅತ್ಯಾಚಾರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ನಿರಾಶೆಯಿಂದ ಕೂಡಿದರೂ, ಸ್ಪಷ್ಟ ಅಪರಾಧೀಯ ಸಂದರ್ಭಗಳನ್ನು ಹೊರತುಪಡಿಸಿ, ಅದನ್ನು ಕ್ರಿಮಿನಲ್ ಕಾನೂನಿನಡಿ ಪರಿವರ್ತಿಸಲಾಗದುಎಂದು ಸ್ಪಷ್ಟಪಡಿಸಿದೆ. ಪೊಲೀಸರ ಪರ ಸರ್ಕಾರಿ ವಕೀಲರು, ‘ಮದುವೆಯ ಭರವಸೆಯೊಂದಿಗಿನ ಲೈಂಗಿಕ ಕ್ರಿಯೆಯೂ ಅಪರಾಧವಾಗುತ್ತದೆ. ಸಮ್ಮತಿಯ ಸಾಕ್ಷ್ಯವೇನಿಲ್ಲದೆ ವಿಚಾರಣೆಯಲ್ಲಿ ತೀರ್ಮಾನಿಸಬೇಕುಎಂದು ವಾದಿಸಿದ್ದರೂ, ಪೀಠ ಅದನ್ನು ತಳ್ಳಿ ಹಾಕಿದೆ. ಇದರೊಂದಿಗೆ, ಆರೋಪಿಯ ವಿರುದ್ಧದ ಎಲ್ಲಾ ಕಾನೂನು ಕಾರ್ಯವಚಿಕ್ಕೆಗಳು ರದ್ದಾಗಿವೆ