Skip to main content
ವಿಡಿಯೋ
1/2
general

ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು..!

By Vinutha U
ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು..!

ಜಯನಗರದ ಸರಸ್ವತಿಪುರಂನಲ್ಲಿ ಬಾಡಿಗೆಗೆ ಒಂದು ರೂಂ ನಲ್ಲಿ ವಾಸವಿದ್ದನು, ಇತ್ತೀಚಿಗೆ ಜೊತೆಯಲ್ಲಿದ್ದ ಗೆಳೆಯ ಸಹ-ರೂಮ್‌ಮೇಟ್ ರೂಮ್ ಖಾಲಿ ಮಾಡಿದ್ದ ಕಾರಣ ಒಂಟಿಯಾಗಿ ಜೀವಿಸುತ್ತಿದ್ದನು. ಈ ಏಕಾಂತ ಜೀವನವೇ ಆತನ ಮಾನಸಿಕ ಒತ್ತಡವನ್ನು ಹೆಚ್ಚಿಸಿದ್ದು ಕಾಣುತ್ತದೆ.

ತುಮಕೂರು: ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ 20 ವರ್ಷದ ಸುರೇಶ್ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಾವಿಗೂ ಕೆಲವು ಗಂಟೆಗಳ ಮುಂಚೆ ತನ್ನ ವಾಟ್ಸ್ಆಪ್ ಸ್ಟೇಟಸ್ನಲ್ಲಿ 'ಗುಡ್ ಬೈ ಮೈ ಡಿಯರ್ ಲೈಫ್ RIP' ಎಂದು ಬರೆದುಕೊಂಡಿದ್ದ ಆತ, ಸಂದೇಶದ ಮೂಲಕ ತನ್ನ ಸಾವಿನ ಸುಳಿವು ನೀಡಿದ್ದಾನೆ ಎಂಬುದು ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಕಾಲೇಜಿನ ಸೀನಿಯರ್ ಯುವತಿಯೊಂದಿಗೆ ಒನ್ ಸೈಡ್ ಲವ್, ಮನಸು ಒತ್ತಡಕ್ಕೊಳಗಾಗಿ ದುರಂತ ನಿರ್ಧಾರಕ್ಕೆ ಶರಣಾಗಿದ್ದನು ಎಂಬ ಶಂಕೆ ವ್ಯಕ್ತವಾಗಿದೆ.

ಮೂಲತಃ ಕೊಪ್ಪಳ ಜಿಲ್ಲೆಯ ನಿವಾಸಿಯಾಗಿದ್ದ ಸುರೇಶ್, ಮೆರಿಟ್ ಆಧಾರದ ಮೇಲೆ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ನಲ್ಲಿ ಅಭ್ಯಾಸ ಮಾಡುತ್ತಿದ್ದನು. ಜಯನಗರದ ಸರಸ್ವತಿಪುರಂನಲ್ಲಿ ಬಾಡಿಗೆಗೆ ಒಂದು ರೂಂ ನಲ್ಲಿ ವಾಸವಿದ್ದನು, ಇತ್ತೀಚಿಗೆ ಜೊತೆಯಲ್ಲಿದ್ದ ಗೆಳೆಯ ಸಹ-ರೂಮ್ಮೇಟ್ ರೂಮ್ ಖಾಲಿ ಮಾಡಿದ್ದ ಕಾರಣ ಒಂಟಿಯಾಗಿ ಜೀವಿಸುತ್ತಿದ್ದನು. ಏಕಾಂತ ಜೀವನವೇ ಆತನ ಮಾನಸಿಕ ಒತ್ತಡವನ್ನು ಹೆಚ್ಚಿಸಿದ್ದು ಕಾಣುತ್ತದೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಅಕ್ಟೋಬರ್ 26 ಮಧ್ಯರಾತ್ರಿ ಸುಮಾರು 3 ಗಂಟೆಗೆ ಸುರೇಶ್ ತನ್ನ ವಾಟ್ಸ್ಆಪ್ ಸ್ಟೇಟಸ್ನಲ್ಲಿ 'ಗುಡ್ ಬೈ ಮೈ ಡಿಯರ್ ಲೈಫ್ ಆರ್ಐಪಿ' ಎಂದು ಬರೆದುಕೊಂಡಿದ್ದನು. ಸ್ಟೇಟಸ್ನ್ನು ನೋಡಿದ ಪೋಷಕರು ತಕ್ಷಣ ಮಗನಿಗೆ ಕರೆ ಮಾಡಿದ್ದರೂ, ಯಾವುದೇ ಸಂಪರ್ಕ ಸಾಧ್ಯವಾಗಲಿಲ್ಲ. ಆತಂಕಗೊಂಡ ತಂದೆ ಕೊಪ್ಪಳದಿಂದ ತುಮಕೂರಿಗೆ ಗಾಬರಿಯಿಂದ ಬಂದಾಗ, ಮಗನ ಸಾವು ನಿಶ್ಚಯವಾಯಿತು . ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುರೇಶ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾಗಿ ದೃಢಪಟ್ಟಿದ್ದು, ಸುರೇಶ್ ತಂದೆಯವರು ಮಗನ ಸಾವಿಗೆ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತಪಡಿಸಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಗೆಳೆಯರ ವಿಚಾರಣೆಯಿಂದ ಸೀನಿಯರ್ ಯುವತಿಯೊಂದಿಗಿನ ಪ್ರೀತಿ ಸಂಬಂಧದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದ್ದು, ಆತನ ಮೊಬೈಲ್ ಸಂದೇಶಗಳು ಮತ್ತು ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಲಾಗುತ್ತಿದೆ. ಸೀನಿಯರ್ ವಿದ್ಯಾರ್ಥಿನಿಯನ್ನು ಸೇರಿದಂತೆ ಸಂಬಂಧಿತರನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಂದೆ ಈದ್ಗಾ ಮೈದಾನದಲ್ಲಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಯತ್ನಾಳ್: ಸಚಿವ ಎಂ.ಬಿ. ಪಾಟೀಲರ ಹೇಳಿಕೆ

ಘಟನೆಯು ಯುವಕರಲ್ಲಿ ಬೆಳೆಯುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ಪ್ರೀತಿ-ಪ್ರೇಮದ ಒತ್ತಡಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ಮತ್ತೊಮ್ಮೆ ಎತ್ತಿ ತೋರಿದೆ. ಕುಟುಂಬಗಳು ಮತ್ತು ಕಾಲೇಜುಗಳು ಇಂತಹ ಸಂದರ್ಭಗಳಲ್ಲಿ ತಕ್ಷಣ ಸಲಹೆ ಮತ್ತು ಬೆಂಬಲ ನೀಡುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.