Skip to main content
ವಿಡಿಯೋ
1/3
crime

7 ವರ್ಷದ ಮಗಳನ್ನು ಚಿತ್ರಹಿಂಸೆ ನೀಡಿ ಮಲತಂದೆ ಕೊಂದಿದ್ಯಾಕೆ ಗೊತ್ತಾ!?

By Shravanthi R
7 ವರ್ಷದ ಮಗಳನ್ನು ಚಿತ್ರಹಿಂಸೆ ನೀಡಿ ಮಲತಂದೆ ಕೊಂದಿದ್ಯಾಕೆ ಗೊತ್ತಾ!?

ಬೆಂಗಳೂರು ಹೊರವಲಯದ ಕುಂಬಳಗೋಡು ಸಮೀಪದ ರಾಮಸಂದ್ರದಲ್ಲಿ ತಾಯಿಯ ಎರಡನೇ ಪತಿ ದರ್ಶನ್ ಎನ್ನುವಾತನಿಂದ ತನ್ನ 7 ವರ್ಷದ ಮಗಳು ಸಿರಿಯನ್ನು ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು: ಪತಿಯನ್ನು ಕಳೆದುಕೊಂಡು ಎರಡನೇ ಮದುವೆಯಾಗಿದ್ದ ತಾಯಿಯೊಬ್ಬರ 7 ವರ್ಷದ ಮಗಳು ಸಿರಿಯನ್ನು ಆಕೆಯ ಮಲತಂದೆಯೇ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆಗೈದಿರುವ ಅಮಾನವೀಯ ಘಟನೆ ನಗರದ ಹೊರವಲಯದ ಕುಂಬಳಗೋಡು ಸಮೀಪದ ರಾಮಸಂದ್ರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಪೋಲಿಸರು ಅರೆಸ್ಟ್‌ ಮಾಡಿದ್ದು ವಿಚಾರಣೆ ವೇಳೆ ಭೀಕರ ಮಾಹಿತಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. 

ಗಂಡ-ಹೆಂಡತಿ ಮಧ್ಯೆ ಮಗು ಅಡ್ಡಿ ಎಂದ ನೀಚ -

ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿ ದರ್ಶನ್‌ ನೀಡಿದ ಹೇಳಿಕೆಯು ಆತನ ನೀಚನೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. 'ಗಂಡ-ಹೆಂಡತಿ ನಡುವಿನ ಅನ್ಯೋನ್ಯತೆ ಹಾಗೂ ಪ್ರೈವೆಸಿಗೆ ಮಗು ಸಿರಿ ಅಡ್ಡಿಯಾಗುತ್ತಿದ್ದಳು ಎಂದು ದುಷ್ಟ ಮಲತಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸಿರಿ ಸಾವಿಗೆ ಕ್ಷಣಗಣನೆ ಶುರುವಾಗಿದ್ದು ಯಾವಾಗ? -

ಮೃತ ಬಾಲಕಿ ಸಿರಿಯ ತಾಯಿ ಶಿಲ್ಪಾ ಅವರಿಗೆ ದರ್ಶನ್‌ ಎರಡನೇ ಪತಿ. ಈ ಹಿಂದೆ, ಸಿರಿ ಮೊದಲು ತಾಯಿಯ ಅಜ್ಜಿ (ಶಿಲ್ಪಾ ತಾಯಿ) ಜೊತೆ ವಾಸವಾಗಿದ್ದಳು. ಅಜ್ಜಿ ತೀರಿಕೊಂಡ ಬಳಿಕ, ಮಗುವಿಗೆ ದಿನೇ ದಿನೇ ಚಿತ್ರಹಿಂಸೆ ನೀಡಿ ನಿಂದನೆ, ಕಿರುಕುಳ ಶುರುವಿಟ್ಟಿದ್ದ ಎನ್ನಲಾಗಿದೆ. Women's Rayon Printed 3/4 Sleeves Embroidery Work Round Neck Short Casual Dresses for Women and Girls (Dress_2-Red-XL)

ತುಮಕೂರಿನಲ್ಲಿ ಆರೋಪಿ ಅರೆಸ್ಟ್ -

ಘಟನೆ ಶುಕ್ರವಾರದಂದು ನಡೆದಿದ್ದು, ಮಗುವಿನ ಸಾವಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿ ದರ್ಶನ್‌ಗಾಗಿ ಶೋಧ ನಡೆಸಿ, ಅಂತಿಮವಾಗಿ ತುಮಕೂರಿನ ಬಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ವಿಚಾರಣೆ ವೇಳೆ ಆತ ಈ ಬರ್ಬರ ಕೃತ್ಯ ಎಸಗಿದ್ದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿಗಳ ಹೆಸರಿನ ದುರ್ಬಳಕೆ ಮತ್ತು ವಂಚನೆಗೆ ಯತ್ನ - ಅಪರಿಚಿತ ವ್ಯಕ್ತಿಯ ವಿರುದ್ದ FIR ದಾಖಲು!