ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ನಕಲಿ ನಂಬರ್ ಬಳಸಿ ವಂಚಿತ ಕರೆ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತ ವ್ಯಕ್ತಿಯ ಹುಡುಕಾಟ ನಡೆಸಲಾಗುತ್ತಿದ್ದು, ಈ ಬಗ್ಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀನಿವಾಸ್ ದೊಡ್ಡಮನಿಯವರು ವಿಧಾನಸೌಧ ಪೋಲಿಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 3 ನಗರದ ರಾಜರಾಜೇಶ್ವರಿ ನಗರದ ಸರೋವರ ವಲಯದ ಪಾಲಿಕೆಯ ವೆಂಕಟೇಶ್ ಅವರ ಫೋನ್‌ಗೆ ಬಂದ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಮಿಸ್ ಕಾಲ್ ನಂಬರ್ ಆದ್ದರಿಂದ ಆಪ್ ನಲ್ಲಿ ಪರಿಶೀಲಿಸಿದಾಗ ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿರುವುದು ಹಾಗೂ ಪ್ರೊಫೈಲ್ ನಲ್ಲಿ ಅವ