Skip to main content
ವಿಡಿಯೋ
1/2
general

ರಾಜ್ಯ ಪೊಲೀಸರಿಗೆ ಇವತ್ತಿನಿಂದ ಹ್ಯಾಟ್ ಭಾಗ್ಯ; ಸ್ಲೋಚ್ ಹ್ಯಾಟ್ʼ ಗೆ ಗುಡ್ ಬೈ; ಇವತ್ತಿನಿಂದ ಪೀಕ್‌ ಕ್ಯಾಪ್‌ʼಗಳ ಬಳಕೆ

By Gireesh Vasishta
ರಾಜ್ಯ ಪೊಲೀಸರಿಗೆ ಇವತ್ತಿನಿಂದ ಹ್ಯಾಟ್ ಭಾಗ್ಯ; ಸ್ಲೋಚ್ ಹ್ಯಾಟ್ʼ ಗೆ ಗುಡ್ ಬೈ; ಇವತ್ತಿನಿಂದ ಪೀಕ್‌ ಕ್ಯಾಪ್‌ʼಗಳ ಬಳಕೆ

ಪ್ರಮುಖಾಂಶಗಳು: ಟೋಪಿ ಬದಲಾವಣೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು ಇದುವರೆಗೆ ಧರಿಸುತ್ತಿದ್ದ 'ಸ್ಲೋಚ್ ಹ್ಯಾಟ್‌'ಗೆ ಬದಲಾಗಿ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು (Navy Blue Peak Caps) ಧರಿಸಲಿದ್ದಾರೆ. ವಿತರಣಾ ದಿನಾಂಕ: ಈ ಹೊಸ ಕ್ಯಾಪ್‌ಗಳನ್ನು ಇಂದಿನಿಂದ (ಅಕ್ಟೋಬರ್ 28, 2025) ಹಂತ ಹಂತವಾಗಿ ವಿತರಿಸಲಾಗುತ್ತಿದೆ.

ಕರ್ನಾಟಕ; ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿದ್ದ 'ಸ್ಲೋಚ್ ಹ್ಯಾಟ್' (Slouch Hat) ಬದಲಿಗೆ, ಹೊಸ 'ಪೀಕ್ ಕ್ಯಾಪ್' (Peak Cap) ಗಳನ್ನು ಇಂದಿನಿಂದ ವಿತರಿಸಲು ಗೃಹ ಇಲಾಖೆ ನಿರ್ಧರಿಸಿದೆ.

ಪ್ರಮುಖಾಂಶಗಳು: ಟೋಪಿ ಬದಲಾವಣೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳು ಇದುವರೆಗೆ ಧರಿಸುತ್ತಿದ್ದ 'ಸ್ಲೋಚ್ ಹ್ಯಾಟ್‌'ಗೆ ಬದಲಾಗಿ ನೇವಿ ಬ್ಲೂ ಪೀಕ್ ಕ್ಯಾಪ್ಗಳನ್ನು (Navy Blue Peak Caps) ಧರಿಸಲಿದ್ದಾರೆ.
ವಿತರಣಾ ದಿನಾಂಕ: ಹೊಸ ಕ್ಯಾಪ್ಗಳನ್ನು ಇಂದಿನಿಂದ (ಅಕ್ಟೋಬರ್ 28, 2025) ಹಂತ ಹಂತವಾಗಿ ವಿತರಿಸಲಾಗುತ್ತಿದೆ.ಇದನ್ನು ಓದಿ; ಅಂಗಡಿಗೆ ನುಗ್ಗಿ ಸಿಗರೇಟ್, ಹಣಕ್ಕಾಗಿ ಕಳ್ಳನ ಹುಡುಕಾಟ; ಸಿಸಿಟಿವಿಯಲ್ಲಿ ಚಲನವಲನ ರೆಕಾರ್ಡ್‌

ಕಾರ್ಯಕ್ರಮ: ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೊಸ 'ಪಿ-ಕ್ಯಾಪ್' ಘೋಷಣೆ ಮತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.Monte Carlo Mens Solid Lace Up Genuine Leather Casual Shoes (201803FW)

ಹೊಸ ವಿನ್ಯಾಸದ ಕಾರಣ:
ಆರೋಗ್ಯದ ಕಾರಣ: ಹಳೆಯ ಸ್ಲೋಚ್ ಹ್ಯಾಟ್ಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂಬ ದೂರುಗಳು ಇದ್ದವು. ಪ್ರತಿಭಟನೆ, ರ್‍ಯಾಲಿ ಅಥವಾ ಅಪರಾಧಿಗಳನ್ನು ಬೆನ್ನಟ್ಟುವಂತಹ ಸನ್ನಿವೇಶಗಳಲ್ಲಿ ಹಳೆಯ ಟೋಪಿ ಧರಿಸುವುದು ಕಷ್ಟವಾಗುತ್ತಿತ್ತು. ಪೀಕ್ ಕ್ಯಾಪ್ ಹಗುರ ಮತ್ತು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವುದರಿಂದ ಕರ್ತವ್ಯ ನಿರ್ವಹಣೆಗೆ ಹೆಚ್ಚು ಅನುಕೂಲಕರವಾಗಿದೆ. ಹೊಸ ಪೀಕ್ ಕ್ಯಾಪ್ಗಳನ್ನು ತೆಲಂಗಾಣ ಪೊಲೀಸ್ ಟೋಪಿಗಳ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಬಹುದಿನಗಳ ಬೇಡಿಕೆಯು ಇಂದು ಈಡೇರುತ್ತಿದ್ದು, ಬ್ರಿಟಿಷರ ಕಾಲದ ಸಮವಸ್ತ್ರದ ಒಂದು ಭಾಗಕ್ಕೆ ವಿದಾಯ ಹೇಳಿದಂತಾಗಿದೆ.