ಬೆಂಗಳೂರು; ಇತ್ತೀಚೆಗೆ ಚಿಕ್ಕ-ಪುಟ್ಟ ಕಾರಣಕ್ಕೆ ಜಗಳಗಳು ನಡೆಯುತ್ತಿದ್ದು ಅದು ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇಲ್ಲಿಯೂಸಹ ಇದೇ ರೀತಿಯ ಘಟನೆ ನಡೆದಿದೆ.
ತನ್ನ ತಾಯಿಗೆ ಬೈದ ಎಂಬ ಕಾರಣಕ್ಕೆ ಸಂಬಂಧಿ ಯುವಕನನ್ನು ಯುವಕನೊಬ್ಬ ಕೊಲೆ ಮಾಡಿದ್ದಾನೆ, ಈ ಕೃತ್ಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿರೋ ಘಟನೆ ಇದಾಗಿದ್ದು, ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್ ನಲ್ಲಿ ನಡೆದಿದೆ.BULLMER Striped Textured Printed Polo Neck Fullsleeve T-Shirt with Rib for Men
-ಕೊಂದು ತಾನೇ ಪೊಲೀಸರಿಗೆ ಕರೆ ಮಾಡಿದ ಆರೋಪಿ ಕಾರ್ತಿಕ್
-ಮನೆ ಮಾಲಕಿಯ ಅಕ್ಕನ ಮಗನಾಗಿದ್ದ ಮೃತ ಅವಿನಾಶ್
-ಈ ಮನೆಯಲ್ಲಿ ಒಂದು ವರ್ಷದಿಂದ ಬಾಡಿಗೆಗೆ ಇದ್ದ ಕಾರ್ತಿಕ್ ಹಾಗೂ ಆತನ ತಾಯಿ
-ಅವಿನಾಶ್ ತಂದೆ-ತಾಯಿ ಮೃತಪಟ್ಟಿದ್ದರು, ಹೆಂಡತಿ-ಮಕ್ಕಳು ಬಿಟ್ಟು ಹೋಗಿದ್ರು, ಕುಡಿತದ ದಾಸನಾಗಿದ್ದ ಅವಿನಾಶ್ ಕೆಲಸ ಇಲ್ಲದೆ ಅಲೆಯುತ್ತಿದ್ದ. ಹೊಟೇಲ್ ನಡೆಸುತ್ತಿದ್ದ ಕಾರ್ತಿಕ್ ತಾಯಿ ಅವಿನಾಶ್ ಗೆ ಕೆಲಸ ನೀಡಿದ್ರು.
-ಹೊಟೇಲ್ ಕ್ಲೋಸ್ ಆದ ನಂತರವೂ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ರು,
ತಮ್ಮ ಮನೆಯಲ್ಲಿ ಮಗನಂತೆ ನೋಡಿಕೊಂಡಿದ್ರು, ಈಗ ಆಟೋ ಓಡಿಸಿಕೊಂಡಿದ್ದ ಅವಿನಾಶ್ ಕುಡಿದು ನಿತ್ಯ ಗಲಾಟೆ ಮಾಡ್ತಾ ಇದ್ದ. ನಿನ್ನೆ ಕುಡಿದು ಬಂದು ಅವಿನಾಶ್ ಗಲಾಟೆ ಮಾಡಿದ್ದಾನೆ. ಅವಿನಾಶ್ ಬಂದಾಗ ಕಾರ್ತಿಕ್ ತಾಯಿ ಒಬ್ಬರೆ ಮನೆಯಲ್ಲಿ ಇರ್ತಾರೆ, ಹೊರಗೆ ಹೋಗಿದ್ದ ಕಾರ್ತಿಕ್‌ಗೆ ತಾಯಿ ಕರೆ ಮಾಡಿ ಗಲಾಟೆ ಬಗ್ಗೆ ಹೇಳ್ತಾರೆ...ಮನೆಗೆ ಬಂದ ಕಾರ್ತಿಕ್, ಕೋಪದಲ್ಲಿ ಬೈಕ್ ನ ರಾಡ್ ತೆಗೆದು ಅವಿನಾಶ್ ತಲೆಗೆ ಹೊಡೆಯುತ್ತಾನೆ,ಅವಿನಾಶ್ ತಲೆಗೆ ಗಂಭೀರ ಗಾಯವಾಗಿ ಅಲ್ಲಿಯೇ ಸಾವನ್ನಪ್ಪುತ್ತಾನೆ, ನಂತರ ಕೊಲೆ ಮಾಡಿರುವ ಕಾರ್ತಿಕ್ ಪೊಲೀಸರಿಗೆ ಮಾಹಿತಿ ನೀಡ್ತಾನೆ.ಇದನ್ನು ಓದಿ; ರಾಜ್ಯ ಪೊಲೀಸರಿಗೆ ಇವತ್ತಿನಿಂದ ಹ್ಯಾಟ್ ಭಾಗ್ಯ; ಸ್ಲೋಚ್ ಹ್ಯಾಟ್ʼ ಗೆ ಗುಡ್ ಬೈ; ಇವತ್ತಿನಿಂದ ಪೀಕ್ ಕ್ಯಾಪ್ʼಗಳ ಬಳಕೆ