ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವಕ್ಕೆ ಮತ್ತೊಂದು ಉದಾಹರಣೆ ಸಾರ್ವಜನಿಕವಾಗಿ ಗಮನ ಸೆಳೆದಿದೆ. ಇತ್ತೀಚೆಗೆ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯೊಂದು ಅವರ ವಿನಯಶೀಲತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ರಾಜ್‌ಕುಮಾರ್ ಅವರ ಪುತ್ರರಾಗಿದ್ದರೂ, ಶಿವರಾಜ್‌ಕುಮಾರ್ ಅವರಲ್ಲಿ ಯಾವುದೇ ಅಹಂ ಕಂಡುಬರುವುದಿಲ್ಲ. ಅವರು ಎಲ್ಲಿ ಬೇಕಾದರೂ ಸಾಮಾನ್ಯರಂತೆ ಕುಳಿತುಬಿಡುತ್ತಾರೆ. ಸ್ನೇಹಿತರ ಬಗ್ಗೆ ಅವರಿಗೆ ಅತೀವ ಪ್ರೀತಿ. ಇದೇ ರೀತಿ, ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಕೂಡ ಅತ್ಯಂತ ಸರಳ ವ್ಯಕ್ತಿತ್ವದವರು. ಈ ಜೋಡಿ ತಮ್ಮ ಸರಳತೆಯಿಂದಲೇ ಜನರ ಮೆಚ್ಚುಗೆ ಗಳಿಸಿದೆ.
ಶಿವರಾಜ್‌ಕುಮಾರ್ ಅವರಿಗೆ ಚೆನ್ನೈನಲ್ಲಿ ಹಲವು ವರ್ಷಗಳ ಸ್ನೇಹಿತರಿದ್ದಾರೆ. ಈ ಸ್ನೇಹವನ್ನು ಅವರು ಇಂದಿಗೂ ಉಳಿಸಿಕೊಂಡಿದ್ದಾರೆ. ಅವರ ಸ್ನೇಹಿತರು ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಾರೆ, ಹಾಗೆಯೇ ಶಿವರಾಜ್‌ಕುಮಾರ್ ಕೂಡ ಚೆನ್ನೈಗೆ ಹೋಗುತ್ತಾರೆ. ಇತ್ತೀಚೆಗೆ ಅವರು ಚೆನ್ನೈಗೆ ಭೇಟಿ ನೀಡಿದ್ದಾಗ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.Titan Neo Splash Quartz Analog with Day-Date Black Dial Metallic Brown Stainless Steel Strap Watch for Men - NT1805QM05
ಈ ವಿಡಿಯೋದಲ್ಲಿ, ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ತಮ್ಮ ಸ್ನೇಹಿತರಿಗಾಗಿ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವುದು ಕಂಡುಬರುತ್ತದೆ. ರೈಲು ಆಗಮಿಸಿದ ಕೂಡಲೇ, ಸ್ನೇಹಿತರು ಬಂದು ಅವರನ್ನು ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಸಾಮಾನ್ಯರಂತೆ ರೈಲ್ವೇ ನಿಲ್ದಾಣಕ್ಕೆ ಬಂದು ಸ್ನೇಹಿತರನ್ನು ಬರಮಾಡಿಕೊಂಡ ಶಿವಣ್ಣ ದಂಪತಿಯ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಸ್ನೇಹಿತರನ್ನು ಕಂಡ ಶಿವರಾಜ್‌ಕುಮಾರ್ ಅವರ ಸಂತೋಷಕ್ಕೆ ಪಾರವಿರಲಿಲ್ಲ. ಈ ವಿಡಿಯೋದಲ್ಲಿ ಅವರ ಸಂತೋಷವನ್ನು ಸ್ಪಷ್ಟವಾಗಿ ಕಾಣಬಹುದು. ಈ ಒಂದು ಕ್ಷಣ ದೊಡ್ಮನೆಯ ಶಿವರಾಜ್‌ಕುಮಾರ್ ಎಷ್ಟು ಸರಳರು ಎಂಬುದನ್ನು ತೋರಿಸುತ್ತದೆ. ಸ್ನೇಹಿತರು ಎಂದರೆ ಅವರಿಗೆ ಅಚ್ಚುಮೆಚ್ಚು.ವಿಜಯ್-ರಶ್ಮಿಕಾ ಎಂಗೇಜ್‌ಮೆಂಟ್ ವಿಚಾರಕ್ಕೆ ತೆರೆ ಎಳೆದ ನ್ಯಾಷನಲ್ ಕ್ರಶ್! ಏನೇಳಿದ್ರು ಗೊತ್ತಾ?
ಶಿವರಾಜ್‌ಕುಮಾರ್ ತಮ್ಮ ಬಾಲ್ಯದ ಸ್ನೇಹಿತರೊಂದಿಗೆ ಇಂದಿಗೂ ಸಂಪರ್ಕದಲ್ಲಿದ್ದಾರೆ. ಅವರು ಚೆನ್ನೈಗೆ ಭೇಟಿ ನೀಡಿದಾಗಲೆಲ್ಲಾ ಅವರನ್ನು ಭೇಟಿಯಾಗಲು ಮರೆಯುವುದಿಲ್ಲ. ಈ ಬಾರಿ ಕೂಡ ಚೆನ್ನೈಗೆ ಬಂದ ಸ್ನೇಹಿತರನ್ನು ಶಿವಣ್ಣ ಮತ್ತು ಗೀತಾ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಇದಲ್ಲದೆ, ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಅವರ ನಡುವಿನ ಪ್ರೀತಿ ಮತ್ತು ಬಾಂಧವ್ಯ ಸಹ ಎಲ್ಲರ ಗಮನ ಸೆಳೆದಿದೆ. ಸದಾ ಜೊತೆಗಿರುವ ಈ ದಂಪತಿ ಎಲ್ಲೆ ಹೋದರೂ ಕೈ ಹಿಡಿದುಕೊಂಡೇ ಹೋಗುತ್ತಾರೆ. ಸ್ನೇಹಿತರನ್ನು ಸ್ವಾಗತಿಸಲು ಬಂದಾಗಲೂ ಅವರು ಕೈ ಕೈ ಹಿಡಿದುಕೊಂಡೇ ಸಾಗಿದ್ದು, ಈ ವಿಡಿಯೋದಲ್ಲಿ ಸೆರೆಯಾಗಿದೆ.
ಅವರ ಈ ಸಂತೋಷದ ಕ್ಷಣದ ವಿಡಿಯೋ ವಾಟ್ಸ್‌ಅಪ್‌ಗಳಲ್ಲಿ ಹರಿದಾಡುತ್ತಿದ್ದು, ದೊಡ್ಮನೆಯ ಶಿವರಾಜ್‌ಕುಮಾರ್ ಅವರ ಸರಳತೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ದಾಖಲಾಗಿದೆ.