ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಬಿಗ್ ಬಾಸ್ ವಿಜೇತ ಮತ್ತು ಜನಪ್ರಿಯ ಗಾಯಕ ಹನುಮಂತ್ ಅವರಿಗೆ ಅವಮಾನವಾಗಿದೆ ಎಂಬ ಶೀರ್ಷಿಕೆಯಡಿಯಲ್ಲಿ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಘಟನೆ, ಎಸ್‌ಪಿ ಭೀಮಾಶಂಕರ್ ಗುಳೇದ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಡುವಿನ ಮಾತಿನ ಚಕಮಕಿಯ ವಿಡಿಯೋದೊಂದಿಗೆ ವೈರಲ್ ಆಗಿತ್ತು.
ಕಿತ್ತೂರು ಉತ್ಸವದಲ್ಲಿ ಹಿಂದಿ ಹಾಡುಗಳಿಗಾಗಿ ಹನುಮಂತ್ ಅವರ ಗಾಯನವನ್ನು ನಿಲ್ಲಿಸಲಾಯಿತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ, ಎಸ್‌ಪಿ ಭೀಮಾಶಂಕರ್ ಗುಳೇದ್ ಅವರು ಸ್ವತಃ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.Titan Classique Analog Silver Dial Men's Watch 90102SL01/NN90102SL01/NP90102SL01
ಗುಳೇದ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಕಾರ್ಯಕ್ರಮದ ಸಮಯದ ಬಗ್ಗೆ ವಿದ್ಯಾವತಿ ಮತ್ತು ನನ್ನ ನಡುವೆ ವಾಗ್ವಾದ ನಡೆದಿತ್ತು. ಇದು ಕನ್ನಡ ವರ್ಸಸ್ ಹಿಂದಿ ಎಂಬ ಭಾಷೆಯ ವಿಷಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸಿಂಪ್ಲಿ ಸಿಟಿಯಲ್ಲಿ ಹಾರ್ಟ್ ಕದ್ದ ಶಿವಣ್ಣ...ಚೆನ್ನೈ ರೈಲ್ವೇ ಸ್ಟೇಷನ್‌ನಲ್ಲಿ ಏನ್ ಮಾಡಿದ್ರು ಗೊತ್ತಾ?
ಅವರು, ಕಾರ್ಯಕ್ರಮ ರಾತ್ರಿ 9:30ಕ್ಕೆ ಮುಗಿಯಬೇಕಿತ್ತು, ಆದರೆ ವಿದ್ಯಾವತಿ ಅವರು 10:30ಕ್ಕೆ ಮುಗಿಸುವುದಾಗಿ ಹೇಳಿದ್ದರು. ಇದರಲ್ಲಿ ಅವರ ತಪ್ಪಿಲ್ಲ. ಇಬ್ಬರು ಅಧಿಕಾರಿಗಳ ವಿಷಯವಾಗಿರುವುದರಿಂದ ಈ ಸ್ಪಷ್ಟನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗುಳೇದ್ ಅವರು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದ್ದು, "ವೇದಿಕೆಯ ಮೇಲೆ ಗಾಯಕರಾದ ಬಾಳು ಬೆಳಗುಂದಿ ಮತ್ತು ಹನುಮಂತ್ ಬರುತ್ತಿದ್ದಂತೆ ಜನಜಂಗುಳಿ ಹೆಚ್ಚಾಯಿತು. ಕೆಲ ಪ್ರೇಕ್ಷಕರು ವಿದ್ಯುತ್ ಕಂಬಗಳು ಮತ್ತು ಅಡ್ಡಲಾಗಿ ಹಾಕಲಾಗಿದ್ದ ಕೋಲುಗಳ ಮೇಲೆ ಹತ್ತುತ್ತಿದ್ದರು" ಎಂದಿದ್ದಾರೆ.
ಮೈಕ್‌ನಲ್ಲಿಯೂ ಈ ಬಗ್ಗೆ ಘೋಷಣೆ ಮಾಡಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಹ್ವಾನ ಪತ್ರಿಕೆಯಲ್ಲಿ ಸೂಚಿಸಿದ ಸಮಯಕ್ಕೆ ಕಾರ್ಯಕ್ರಮ ಮುಗಿಸುವುದು ನಮ್ಮ ಕರ್ತವ್ಯವಾಗಿತ್ತು ಎಂದು ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.