Skip to main content
ವಿಡಿಯೋ
1/3
cinema

ನಟಿ ಶ್ರೀಲೀಲಾ ಯಶಸ್ಸಿನ ಹಿಂದೆ ಯಾರು ಇದ್ದಾರೆ ಗೊತ್ತಾ? ವೃತ್ತಿ ನಿರ್ಧಾರಗಳ ಬಗ್ಗೆ ನಟಿ ಸ್ಪಷ್ಟನೆ..!

By Ram Chethan
ನಟಿ ಶ್ರೀಲೀಲಾ ಯಶಸ್ಸಿನ ಹಿಂದೆ ಯಾರು ಇದ್ದಾರೆ ಗೊತ್ತಾ? ವೃತ್ತಿ ನಿರ್ಧಾರಗಳ ಬಗ್ಗೆ ನಟಿ ಸ್ಪಷ್ಟನೆ..!

ಕನ್ನಡ ಮೂಲದ ಶ್ರೀಲೀಲಾ ತೆಲುಗು–ಬಾಲಿವುಡ್‌ನಲ್ಲಿ ಶಿಖರ ತಲುಪುತ್ತಿದ್ದಂತೆ, ಅವರ ತಾಯಿ ಸ್ವರ್ಣಲತಾ ಎಲ್ಲ ವೃತ್ತಿ ನಿರ್ಧಾರಗಳನ್ನು ನೋಡಿಕೊಳ್ಳುತ್ತಾರೆ ಎಂಬ ವರದಿಗಳ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ತಾಯಿ ಬೆಂಬಲವೇ ನನ್ನ ಬಲ ಎಂದು ಹೇಳಿದ ಶ್ರೀಲೀಲಾ, ಇಬ್ಬರೂ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆಎಂದು ಹೇಳಿದ್ದಾರೆ.

ಕನ್ನಡ ಮೂಲದ ನಟಿ ಶ್ರೀಲೀಲಾ, ತೆಲುಗು ಚಿತ್ರರಂಗದಲ್ಲಿ ಗಮನಾರ್ಹ ಯಶಸ್ಸು ಗಳಿಸಿದ್ದಾರೆ. ಅವರ ಸೌಂದರ್ಯ, ಅಭಿನಯ ಸಾಮರ್ಥ್ಯ ಹಾಗೂ ನೃತ್ಯ ಕೌಶಲ್ಯಗಳಿಗೆ ತೆಲುಗು ಪ್ರೇಕ್ಷಕರು ಮಾರುಹೋಗಿದ್ದಾರೆ. ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜಾ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಇದೀಗ ಬಾಲಿವುಡ್‌ನಲ್ಲೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ಆದರೆ, ಶ್ರೀಲೀಲಾ ವೃತ್ತಿಜೀವನದ ನಿರ್ಧಾರಗಳನ್ನು ಅವರ ತಾಯಿ ಸ್ವರ್ಣಲತಾ ತೆಗೆದುಕೊಳ್ಳುತ್ತಾರೆ ಎಂಬ ವರದಿಗಳು ಇತ್ತೀಚೆಗೆ ತೆಲುಗು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಚಿತ್ರೀಕರಣದ ಸೆಟ್‌ಗಳಲ್ಲಿ ಅವರ ತಾಯಿ ಮಗಳ ಬಗ್ಗೆ ಕಠಿಣ ನಿಯಮಗಳನ್ನು ಹೇರುತ್ತಿದ್ದು, ಇದು ನಿರ್ಮಾಪಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಆ ವರದಿಗಳು ಹೇಳಿದ್ದವು.

ಈ ಕುರಿತು ಶ್ರೀಲೀಲಾ ಸ್ವತಃ ಮಾತನಾಡಿದ್ದು, ತಮ್ಮ ತಾಯಿ ವೈದ್ಯೆ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಲೀಲಾ ಚಿತ್ರರಂಗದಲ್ಲಿ ಸಕ್ರಿಯರಾದ ನಂತರ, ಅವರ ತಾಯಿ ಸ್ವರ್ಣಲತಾ ಮಗಳೊಂದಿಗೆ ಕೇರ್‌ಟೇಕರ್ ಆಗಿರುತ್ತಾರೆ. ಸಿನಿಮಾಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳು ಹಾಗೂ ಸಂಭಾವನೆಯ ವಿಷಯವನ್ನು ಅವರೇ ನಿಭಾಯಿಸುತ್ತಾರೆ.ಬಿಗ್‌ಬಾಸ್‌ ಹನುಮಂತುಗೆ ಕಿತ್ತೂರು ಉತ್ಸವದಲ್ಲಿ ನಿಜವಾಗ್ಲೂ ಅವಮಾನ ಆಯ್ತಾ? ಹನುಮಂತು ಹಾಡು ನಿಲ್ಲಿಸಿದ್ದೇಕೆ?

ಚಿತ್ರೀಕರಣ, ಖಾಸಗಿ ಕಾರ್ಯಕ್ರಮಗಳು ಅಥವಾ ಸಿನಿಮಾ ಪ್ರಚಾರ ಕಾರ್ಯಕ್ರಮಗಳು ಯಾವುದೇ ಇರಲಿ, ತಾಯಿ ಸ್ವರ್ಣಲತಾ ಯಾವಾಗಲೂ ಶ್ರೀಲೀಲಾ ಜೊತೆಗಿರುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಲೀಲಾ, "ನನ್ನ ಜೀವನದಲ್ಲಿ ತಾಯಿಗೆ ವಿಶೇಷ ಸ್ಥಾನವಿದೆ. ನಾನು ಇವತ್ತು ಈ ಸ್ಥಾನದಲ್ಲಿ ಇರುವುದಕ್ಕೆ ಅವರೇ ಕಾರಣ" ಎಂದಿದ್ದಾರೆ.

"ನನ್ನ ಸಿನಿಮಾ ಮತ್ತು ಇತರೆ ವಿಷಯಗಳಲ್ಲಿ ತಾಯಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಆದರೆ ಕಥೆಯ ಆಯ್ಕೆ ಮುಂತಾದ ವಿಷಯಗಳಲ್ಲಿ ನನಗೆ ಸ್ವಾತಂತ್ರ್ಯ ನೀಡುತ್ತಾರೆ. ನಾವು ಇಬ್ಬರೂ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ನನ್ನ ತಾಯಿ ನನಗೆ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಅವರು ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನನಗೆ ಅನಿಸುತ್ತದೆ" ಎಂದು ನಟಿ ಹೇಳಿದರು.Titan Classique Analog Silver Dial Men's Watch 90102SL01/NN90102SL01/NP90102SL01

ಶ್ರೀಲೀಲಾ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ 'ಆಷಿಕಿ 3', ಸೈಫ್ ಅಲಿ ಖಾನ್ ಪುತ್ರನ ಸಿನಿಮಾ ಹಾಗೂ ಮತ್ತೊಂದು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರವಿತೇಜಾ ಜೊತೆ 'ಮಾಸ್ ಜಾತ್ರಾ' ಮತ್ತು ಪವನ್ ಕಲ್ಯಾಣ್ ಜೊತೆ 'ಗಬ್ಬರ್ ಸಿಂಗ್ 2' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಅವರೊಂದಿಗೆ 'ಪರಾಶಕ್ತಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಶ್ರೀಲೀಲಾ ವೈದ್ಯಕೀಯ ಶಿಕ್ಷಣವನ್ನೂ ಪೂರ್ಣಗೊಳಿಸಿದ್ದಾರೆ. ಸಿನಿಮಾ ಚಟುವಟಿಕೆಗಳ ನಡುವೆಯೇ ಎಂಬಿಬಿಎಸ್ ಪದವಿ ಗಳಿಸಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ಮಗಳು ವೈದ್ಯೆಯಾಗಬೇಕೆಂಬುದು ಅವರ ತಾಯಿ ಪುಷ್ಪಲತಾ ಅವರ ಕನಸಾಗಿತ್ತಂತೆ. ಪುಷ್ಪಲತಾ ಅವರು ಸಿಂಗಲ್ ಮದರ್ ಆಗಿದ್ದು, ಪತಿಯ ಸಹಾಯವಿಲ್ಲದೆ ಶ್ರೀಲೀಲಾ ಅವರನ್ನು ಬೆಳೆಸಿ, ವೈದ್ಯೆಯನ್ನಾಗಿ ಮಾಡಿ, ಈಗ ಭಾರತದ ಟಾಪ್ ನಟಿಯರಲ್ಲಿ ಒಬ್ಬರನ್ನಾಗಿ ರೂಪಿಸಿದ್ದಾರೆ.

ಶ್ರೀಲೀಲಾಗೆ ಒಬ್ಬ ಸಹೋದರನಿದ್ದು, ಆತನೂ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದಾನೆ.