ಎಐ ಚಾಲಿತ ಗ್ರೋಕಿಪಿಡಿಯಾವನ್ನು ಇಂದು ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರಿಂದ ಜಗತ್ತಿಗೆ ಅನಾವರಣಗೊಂಡಿದೆ. ಸಾಮಾನ್ಯವಾಗಿ ಮಾಹಿತಿ ಹುಡುಕಲು ಹೊರಟ ಪ್ರತಿಯೊಬ್ಬರಿಗೆ ಕೀವರ್ಡ್ ಹಾಕಿದ ತಕ್ಷಣ ಮುಂಬರುವುದು ವಿಕಿಪೀಡಿಯಾ ವೆಬ್‌ಸೈಟ್ ಆಗಿದೆ.
ಎನ್‌ಸೈಕ್ಲೋಪಿಡಿಯಾ, ಬ್ರಿಟಾನಿಕಾದಂತಹ ತಂತ್ರಜ್ಞಾನ ಮಾಹಿತಿ ಜಾಲಗಳ ನಡುವೆ ಇದೀಗ ಸ್ಪರ್ಧೆಗೆ ಅಣಿಯಾಗಲು ಬರುತ್ತಿದೆ ಈ ಗ್ರೋಕಿಪೀಡಿಯಾ. ನೆಟ್ಟಿಗರನ್ನು ತನ್ನತ್ತಾ ಸೆಳೆದಿರುವ ಈ ಜಾಲತಾಣವು ಇದೀಗ, ಎಐ ಆಧಾರಿತ ಆನ್‌ಲೈನ್ ವಿಶ್ವಕೋಶವಾಗಿದೆ. Grokipedia.com ಮುಖಾಂತರ ಇದರ ನೇರವಾಗಿ ಮಾಹಿತಿಯನ್ನು ಹುಡುಕಬಹುದಾಗಿದೆ.
ಗ್ರೋಕೀಪಿಡಿಯಾದ ವಿಷೇಶತೆ -
ವಿಕೀಪಿಡೀಯಾಗೆ ಪರ್ಯಾಯವಾಗಿರುವ ಈ ಸಾಧನವು, ವೇಗವಾಗಿ ಬಳಕೆದಾರರಿಗೆ ಮಾಹಿತಿ ಒದಗಿಸಬಲ್ಲ ಸಾಮರ್ಥ್ಯವುಳ್ಳ ವಿನೂತನ ಕಾರ್ಯನಿರ್ವಹಣೆ ತೊರಲಿದೆ. ಚಾಟ್‌ಜಿಪಿಟಿ, ಜೆಮಿನಿಯಂತಹ ಚಾಟ್‌ಬಾಟ್‌ಗಳಿಗಿಂತ ವಿಭಿನ್ನವೆನಸಿರುವ ಗ್ರೋಕ್, ಇದೀಗ ಸಂಪೂರ್ಣ ಮಾಹಿತಿ ಲಭ್ಯತೆಗೆ ಸಹಕರಿಸಲಿದ್ದು, ಸಂವೇದಾತ್ಮಕ ಚಾಟ್ ಇಂಟರ್‌ಫೇಸ್ ಬದಲಿಗೆ ಸರ್ಚ್ ಇಂಜಿನ್‌ನಂತೆ ಕಾರ್ಯನಿರ್ವಹಿಸುವುದು ಎನ್ನಲಾಗಿದೆ. RED DWARF Unbreakable Flexible Screen Guard for Noise ColorFit NAV Smartwatch (Pack of 2)
ಸ್ಪರ್ಧಿಸಲು ಸಾಧ್ಯವೇ?
ಎಐ ಪರಿಶೀಲಿತ ಹಾಗೂ ಪ್ರಶ್ನಾತೀತ ಎಲ್ಲಾ ಮಾದರಿಯ ಸರ್ಚ್‌ಗೆ ಇದು ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಆದರೆ, ಇದು ನಿಖರ ಮಾಹಿತಿ ಒದಗಿಸಲಿದೆಯೇ ಎಂದು ನಂಬಲು ಸಾಧ್ಯವೇ ಎನ್ನುವ ಸಂದೇಹವನ್ನುಂಟು ಮಾಡಿದೆ ಎನ್ನಲಾಗಿದೆ. ಇನ್ನೊಂದೆಡೆ, ಇದು ವಿಕೀಪೀಡಿಯಾಗೆ ಸ್ಪರ್ಧೆಯನ್ನೊಡ್ಡಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ.
ವಿಕೀಪೀಡಿಯಾವು ಈವರೆಗೆ, ಜಾಹೀರಾತುಮುಕ್ತ ಹಾಗೂ ಲಾಭರಹಿತ ನೀತಿಯನ್ನು ಹೊಂದಿದೆ. ಇದೀಗ ಗ್ರೋಕಿಪೀಡಿಯಾದ ನಮೂನೆಗಳು ಹಾಗೂ ಗುಣಲಕ್ಷಣಗಳು ಇದಕ್ಕೆ ಯಾವ ರೀತಿಯಲ್ಲಿ ಸ್ಪರ್ಧಿಸುವುದು ಎನ್ನುವುದು ಆಸಕ್ತಿಕರ ವಿಷಯವಾಗಿದೆ. ಇದನ್ನೂ ಓದಿ: ಅರೆ ವೈದ್ಯಕೀಯ ಮಂಡಳಿ: ಅಂಕ, ನೋಂದಣಿ ವಿಳಂಬಕ್ಕೆ ವಿದ್ಯಾರ್ಥಿಗಳ ಅಕ್ರೋಶ!