Skip to main content
ವಿಡಿಯೋ
1/3
general

ಅರೆ ವೈದ್ಯಕೀಯ ಮಂಡಳಿ: ಅಂಕ, ನೋಂದಣಿ ವಿಳಂಬಕ್ಕೆ ವಿದ್ಯಾರ್ಥಿಗಳ ಅಕ್ರೋಶ!

By Pavitra Ganapathi Baradavalli
 ಅರೆ ವೈದ್ಯಕೀಯ ಮಂಡಳಿ: ಅಂಕ, ನೋಂದಣಿ ವಿಳಂಬಕ್ಕೆ ವಿದ್ಯಾರ್ಥಿಗಳ ಅಕ್ರೋಶ!

ಪ್ರವೇಶದಿಂದ ಪರೀಕ್ಷೆ, ಅಂಕಪಟ್ಟಿ ವಿತರಣೆಯವರೆಗೆ ಅರೆ ವೈದ್ಯಕೀಯ ಮಂಡಳಿಯ ಕಾರ್ಯಚಟುವಟಿಕೆ ವಿಳಂಬದಿಂದ ವಿದ್ಯಾರ್ಥಿಗಳು ಕಣ್ಣೀರಾಡುತ್ತಿದ್ದಾರೆ. ನೋಂದಣಿ ಸಂಖ್ಯೆ ಹಾಗೂ ವಾರ್ಷಿಕ ಫಲಿತಾಂಶದಲ್ಲಿ ತಡವು ವಿದ್ಯಾರ್ಥಿವೇತನ, ಹಾಸ್ಟೆಲ್ ಪ್ರವೇಶಕ್ಕೆ ಸಮಸ್ಯೆ ಸೃಷ್ಟಿಸುತ್ತಿದೆ.

ರಾಜ್ಯದ ಅರೆ ವೈದ್ಯಕೀಯ ಮಂಡಳಿಯ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಪ್ರವೇಶ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷೆ ಹಾಗೂ ಅಂಕಪಟ್ಟಿ ವಿತರಣೆಯವರೆಗಿನ ಎಲ್ಲಾ ಚಟುವಟಿಕೆಗಳು ಶೈಕ್ಷಣಿಕ ವೇಳಾಪಟ್ಟಿಯಂತೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಹಣ ಕಾರವಾರದಲ್ಲಿ ಜಪ್ತಿ..!

ಅರೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಅನುಮೋದನೆಗೆ ಮಂಡಳಿ ಆರು ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿದೆ. 2024-25ನೇ ಸಾಲಿನ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜುಗಳು ಫೆಬ್ರವರಿಯಲ್ಲೇ ಸಲ್ಲಿಸಿದ್ದರೂ, ಹಲವು ವಿದ್ಯಾರ್ಥಿಗಳಿಗೆ ಇನ್ನೂ ನೋಂದಣಿ ಸಂಖ್ಯೆ ನೀಡಿಲ್ಲ.

ಪರೀಕ್ಷೆಗಳು ಸಮೀಪಿಸುತ್ತಿದ್ದರೂ ನೋಂದಣಿ ಖಾತರಿಪಡಿಸದ ಮಂಡಳಿಯ ಕ್ರಮದ ವಿರುದ್ಧ ಕಾಲೇಜು ಆಡಳಿತ ಮಂಡಳಿಗಳು ಆಕ್ರೋಶ ವ್ಯಕ್ತಪಡಿಸಿವೆ. ನೋಂದಣಿ ಸಂಖ್ಯೆ ನೀಡಿಕೆಯಲ್ಲಿನ ವಿಳಂಬದಿಂದ ಪರಿಶಿಷ್ಟ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.ಇದನ್ನೂ ಓದಿ: ಬಿರುಗಾಳಿಗೆ ಕುಸಿದ ಗೋಡೆ ಆಟೋ ಮೇಲೆ. ಮನೆಯವರಿಗೆ ಏನೂ ಆಗಲಿಲ್ಲ..!

ಮಂಡಳಿ ಪ್ರಕಟಿಸಿದ 2025-26ನೇ ಸಾಲಿನ ವೇಳಾಪಟ್ಟಿ ಪ್ರಕಾರ, ಯಾವುದೇ ಅರೆ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಅಕ್ಟೋಬರ್ 1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ; ಕೌನ್ಸೆಲಿಂಗ್ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯ 125 ಕೋಟಿ ಟೆಂಡರ್ ಗೋಲ್ಮಾಲ್: ಸಚಿವ ಮಹದೇವಪ್ಪ ವಿರುದ್ಧ ಲೋಕಾಯುಕ್ತ ದೂರು..!!

ಪ್ರತಿ ವರ್ಷ ನವೆಂಬರ್‌ನಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಬೇಕಾಗಿದ್ದರೂ, ಡಿಸೆಂಬರ್-ಜನವರಿವರೆಗೆ ಮುಂದೂಡಲಾಗುತ್ತಿದೆ. ಇದು ಹಾಸ್ಟೆಲ್ ಪ್ರವೇಶಕ್ಕೂ ಅಡ್ಡಿಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 2024ರ ನವೆಂಬರ್‌ನಲ್ಲಿ ನಡೆದ ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಹತ್ತು ತಿಂಗಳಾದರೂ ನೀಡಿಲ್ಲ ಎಂದು ಆರೋಪಿಸಲಾಗಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece