Skip to main content
ವಿಡಿಯೋ
1/3
politics

ಸಮಾಜ ಕಲ್ಯಾಣ ಇಲಾಖೆಯ 125 ಕೋಟಿ ಟೆಂಡರ್ ಗೋಲ್ಮಾಲ್: ಸಚಿವ ಮಹದೇವಪ್ಪ ವಿರುದ್ಧ ಲೋಕಾಯುಕ್ತ ದೂರು..!!

By Pavitra Ganapathi Baradavalli
ಸಮಾಜ ಕಲ್ಯಾಣ ಇಲಾಖೆಯ 125 ಕೋಟಿ ಟೆಂಡರ್ ಗೋಲ್ಮಾಲ್: ಸಚಿವ ಮಹದೇವಪ್ಪ ವಿರುದ್ಧ ಲೋಕಾಯುಕ್ತ ದೂರು..!!

ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಇಲಾಖಾ ಸಚಿವರ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ. ಇದೇ ವಿಷಯವನ್ನು ಸಿಎಂ ಕಚೇರಿಗೂ ರಹಸ್ಯವಾಗಿ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು: ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಇಲಾಖಾ ಸಚಿವರ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ. ಇದೇ ವಿಷಯವನ್ನು ಸಿಎಂ ಕಚೇರಿಗೂ ರಹಸ್ಯವಾಗಿ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಶೋಗೆ ಸ್ಪರ್ಧಿಗಳ ಆಯ್ಕೆ ಹೇಗಿರುತ್ತೆ? ಯಾರು ಕರೆ ಮಾಡ್ತಾರೆ? ಆಮೇಲೆ ಏನೆಲ್ಲಾ ಆಗುತ್ತೆ?

ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಟೆಂಡರ್ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ (ಐಎಎಸ್, ಕೆಎಎಸ್, ಎಫ್ಡಿಎ) ತರಬೇತಿ ನೀಡುವ ಕೇಂದ್ರಗಳ ಟೆಂಡರ್ನಲ್ಲಿ ಅನರ್ಹ ಬಿಡ್ದಾರರಿಗೆ ಒಪ್ಪಂದ ನೀಡಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ಮತ್ತು ಸಿಎಂ ಕಚೇರಿಗೆ ದೂರು ಸಲ್ಲಿಸಲಾಗಿದೆ. ಸಚಿವ ಮಹದೇವಪ್ಪ ವಿರುದ್ಧವೂ ತನಿಖೆಗೆ ಒತ್ತಾಯಿಸಲಾಗಿದೆ.ಇದನ್ನೂ ಓದಿ: ಸಿಂಪ್ಲಿ ಸಿಟಿಯಲ್ಲಿ ಹಾರ್ಟ್‌ ಕದ್ದ ಶಿವಣ್ಣ...ಚೆನ್ನೈ ರೈಲ್ವೇ ಸ್ಟೇಷನ್‌ನಲ್ಲಿ ಏನ್‌ ಮಾಡಿದ್ರು ಗೊತ್ತಾ?

ಏನಿದು ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಗೋಲ್ಮಾಲ್ ಆರೋಪ?

125 ಕೋಟಿ ರೂ. ಮೌಲ್ಯದ ಟೆಂಡರ್ನಲ್ಲಿ ಅಕ್ರಮ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಡಿ ನಡೆಸುವ ತರಬೇತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್.

ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳ ತರಬೇತಿ: ಐಎಎಸ್, ಕೆಎಎಸ್, ಎಫ್ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಉದ್ದೇಶ.

30 ಕೋಟಿ ರೂ. ಅಧಿಕ ಮೊತ್ತದ ಟೆಂಡರ್ ಅನರ್ಹರಿಗೆ: ಅನುಭವವಿಲ್ಲದ, ಟೆಂಡರ್ ನಿಯಮಗಳನ್ನು ಪೂರೈಸದ ಸಂಸ್ಥೆಗಳಿಗೆ ಒಪ್ಪಂದ ನೀಡಿದ ಆರೋಪ.

5 ವರ್ಷ ಅನುಭವ ಕಡ್ಡಾಯ ಆದರೂ 3-4 ವರ್ಷದ ಸಂಸ್ಥೆಗಳಿಗೆ: ಟೆಂಡರ್ ನಿಬಂಧನೆಯಂತೆ ಕನಿಷ್ಠ 5 ವರ್ಷಗಳ ತರಬೇತಿ ಅನುಭವ ಬೇಕಿತ್ತು. ಆದರೂ ಕಡಿಮೆ ಅನುಭವದ ಸಂಸ್ಥೆಗಳಿಗೆ ಮಣೆ ಹಾಕಲಾಗಿದೆ.

ಸುಳ್ಳು ದಾಖಲೆಗಳ ಸಲ್ಲಿಕೆ: ಅನರ್ಹ ಸಂಸ್ಥೆಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಟೆಂಡರ್ ಪಡೆದಿವೆ ಎಂಬ ಆರೋಪ.

ಚೆಕ್ ಮೂಲಕ ಹಣ ಪಾವತಿ: ಅನರ್ಹ ಬಿಡ್ದಾರರಿಗೆ ಚೆಕ್ ಮೂಲಕ ಧನ ವರ್ಗಾವಣೆ ನಡೆಸಲಾಗಿದೆ.

ಅಧಿಕಾರಿಗಳ ಭಾಗಿಯಾಗಿರುವಿಕೆ: ಅಕ್ರಮದಲ್ಲಿ ಇಲಾಖಾ ಅಧಿಕಾರಿಗಳೂ ತೊಡಗಿಕೊಂಡಿದ್ದಾರೆ ಎಂದು ದೂರು.

ಸಚಿವರ ವಿರುದ್ಧ ಲೋಕಾಯುಕ್ತ ದೂರು: ಸಚಿವರ ಮೇಲೂ ನೇರ ಆರೋಪ ಹೊರಿಸಿ ತನಿಖೆಗೆ ಒತ್ತಾಯ.

ಸಿಎಂ ಕಚೇರಿಗೆ ದಾಖಲೆ ರವಾನೆ: ಎಲ್ಲ ದಾಖಲೆಗಳೊಂದಿಗೆ ಸಿಎಂ ಕಚೇರಿಗೆ ದೂರು ಕಳುಹಿಸಿ ನಿಷ್ಪಕ್ಷಪಾತ ತನಿಖೆಗೆ ಮನವಿ.ಇದನ್ನೂ ಓದಿ: ವಿಜಯ್-ರಶ್ಮಿಕಾ ಎಂಗೇಜ್‌ಮೆಂಟ್ ವಿಚಾರಕ್ಕೆ ತೆರೆ ಎಳೆದ ನ್ಯಾಷನಲ್‌ ಕ್ರಶ್! ಏನೇಳಿದ್ರು ಗೊತ್ತಾ?

ಆರೋಪಗಳು ಸಾಬೀತಾದರೆ ಇಲಾಖೆಯ ವಿಶ್ವಾಸಾರ್ಹತೆಗೆ ಧಕ್ಕೆ ಬರಲಿದೆ. ಲೋಕಾಯುಕ್ತ ಮತ್ತು ಸರ್ಕಾರದಿಂದ ತ್ವರಿತ ತನಿಖೆ ನಡೆಯಬೇಕಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece