Skip to main content
ವಿಡಿಯೋ
1/3
local

ಸದ್ದಿಲ್ಲದೇ ಹಣ ಮಾಯ - ಏನೂ ಮಾಡದೇ ಖಾತೆಲಿದ್ದ ಹಣಕ್ಕೆ ಬಿತ್ತು ಕತ್ತರಿ!

By Shravanthi R
ಸದ್ದಿಲ್ಲದೇ ಹಣ ಮಾಯ - ಏನೂ ಮಾಡದೇ ಖಾತೆಲಿದ್ದ ಹಣಕ್ಕೆ ಬಿತ್ತು ಕತ್ತರಿ!

ಯಾವುದೇ ಸೂಚನೆಯಿಲ್ಲದೇ, ರಾತ್ರೋರಾತ್ರಿಯ ವೇಳೆ ಫೋನ್‌ ಉಪಯೋಗಿಸದಿದ್ದರೂ ಸಹ ಹಣ ಖಾತೆಯಿಂದ ವಿತ್‌ಡ್ರಾ ಆಗಿದೆ ಎನ್ನಲಾಗಿದೆ. ಇದರಿಂದ, ಬ್ಯಾಂಕ್‌ ಖಾತೆಗಳ ಮೇಲೆ ನಿಗಾವಹಿಸಲು ಇದು ಎಚ್ಚರಿಕೆಯ ಚಿಹ್ನೆಯಾಗಿದೆ.

ವಂಚನೆಗೆ ಯಾವುದೇ ಮುಖವಿಲ್ಲ. ತೆಕ್ಕೆಯಲ್ಲಿದ್ದ ಹಣವು ಕ್ಷಣಮಾತ್ರದಲ್ಲಿ ಮಾಯವಾಗಿದೆ. ಯಾವುದೇ ಒಟಿಪಿ ಬಂದಿಲ್ಲ, ಆಪ್‌ ಇನ್‌ಸ್ಟಾಲ್‌ ಮಾಡಲಿಲ್ಲ, ಲಿಂಕ್‌ ಕೂಡ ಒತ್ತಿಲ್ಲ ಆದರೂ, ಇದು ಬ್ಯಾಂಕ್‌ ಫ್ರಾಡ್‌ ಅಂತೂ ಅಲ್ಲ. ರಾತ್ರೋರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮೊಬೈಲ್‌ ಬಳಸದಿದ್ದರೂ ಕೂಡ ಹಣ ವರ್ಗಾವಣೆಯಾಗಿರುವ ಘಟನೆ ನಡೆದಿದೆ. 

ಕುಂದಾಪುರದ ತೆಕ್ಕಟ್ಟೆ ಸಮೀಪದ ಭಾರತ್‌ ಪೆಟ್ರೋಲ್‌ ಬಂಕ್‌ ನಿವಾಸಿ, ರಮೇಶ್‌ ಮರಕಾಲ ಎಂಬುವವರ ಖಾತೆಯಿಂದ ಮಧ್ಯರಾತ್ರಿ, 12 ಗಂಟೆ ಸುಮಾರಿಗೆ ಐಎಂಪಿಎಸ್‌ ಮೂಲಕ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ  90,000 ಹಣ ಡ್ರಾ ಆಗಿದೆ ಎನ್ನಲಾಗಿದೆ. Stock Investing Mastermind Beginners Handbook to Winning the Stock Market | Learn Fundamental Analysis Investing Strategies | Especially for Beginners, Students, Indian Retail Investor | ZebraLearn Hardcover – 1 January 2022

ಫೋನ್‌ನಿಂದ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಅದರ ಬಳಕೆಯನ್ನೂ ಮಾಡಿಲ್ಲ. ಆದರೂ, ಅನಧಿಕೃತವಾಗಿ ಹಣ ಡ್ರಾ ಆಗಿದೆ ಎನ್ನಲಾಗಿ, ಸೈಬರ್‌ ವಂಚನೆಯ ದೂರು ದಾಖಲಿಸಿದ್ದಾರೆ. ಕದ್ದ ಹಣವು ಕೋಲ್ಕತ್ತಾದ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ ಎನ್ನಲಾಗಿದೆ. ಇದರಿಂದ ತುಟಿಕ್‌ ಪಿಟಿಕ್‌ ಎನ್ನದೇ ಹಣ ದೋಚುವ ನಿರುಪಾಯವಿದಾಗಿದೆ ಎನ್ನಲಾಗಿದೆ.  ಇದನ್ನೂ ಓದಿ: Cloud Seeding: ದೆಹಲಿಯಲ್ಲಿ ನಡೆಸಿದೆ ಕೃತಕ ಮಳೆ ಪ್ರಯೋಗ ವಿಫಲ! ಕಾರಣವೇನು?