Skip to main content
ವಿಡಿಯೋ
1/3
cinema

ಅಪ್ಪು ಪರೋಪಕಾರದ ಪರಿಮಳ ಬಿಟ್ಟ ಮಹಾಮನವ.. ನಮ್ಮ ಹೃದಯಗಳಲ್ಲಿ ಸದಾ ಜೀವಂತ

By Ram Chethan
ಅಪ್ಪು ಪರೋಪಕಾರದ ಪರಿಮಳ ಬಿಟ್ಟ ಮಹಾಮನವ.. ನಮ್ಮ ಹೃದಯಗಳಲ್ಲಿ ಸದಾ ಜೀವಂತ

ಅವರ ದಾನ, ಅವರ ಮಮತೆ — ಎಲ್ಲವನ್ನೂ ನಿಶ್ಶಬ್ದವಾಗಿ ಮಾಡುತ್ತಿದ್ದ ಮನುಜ ದೇವರ ನೆನಪಿಗೆ ಭಾವಪೂರ್ಣ ನಮನ.

ಮಾನವೀಯತೆಯೇ ನಿಜವಾದ ಸಂಪತ್ತು ಎಂದು ನಂಬಿದ್ದ ನಟ ಪುನೀತ್ ರಾಜ್‌ಕುಮಾರ್, ತಮ್ಮ ಜೀವನದುದ್ದಕ್ಕೂ ಸಮಾಜ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆಯ ನಂತರವಷ್ಟೇ ಈ ಸಮಾಜಮುಖಿ ಕಾರ್ಯಗಳು ಬೆಳಕಿಗೆ ಬಂದವು. ಅಕ್ಟೋಬರ್ 29, 2021 ರಂದು ಅವರು ನಮ್ಮನ್ನಗಲಿದ್ದು, ಅಂದಿನಿಂದ ಕನ್ನಡ ನಾಡಿಗೆ ಆ ದಿನ ಅರಗಿಸಿಕೊಳ್ಳಲಾಗದ ನೋವಿನ ದಿನವಾಗಿದೆ.

ಕನ್ನಡಿಗರ ಪಾಲಿಗೆ ಅಪ್ಪು ಕೇವಲ ನಟನಾಗಿರದೆ, ಒಬ್ಬ ದೇವರಂತೆ. ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿರುವ ಮಾಣಿಕ್ಯ ಅವರು. ಪುನೀತ್ ತಮ್ಮ ನಟನೆ, ನೃತ್ಯದಿಂದ ಮಾತ್ರವಲ್ಲದೆ, ಅವರ ಉದಾರ ಸಮಾಜ ಸೇವೆಯಿಂದಲೂ ಮನೆಮಾತಾಗಿದ್ದರು.

ಪುನೀತ್ ರಾಜ್‌ಕುಮಾರ್, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಜನರಿಗೆ ಆರ್ಥಿಕ ನೆರವು ನೀಡಿದ್ದರು. ಎಡಗೈಯಲ್ಲಿ ನೀಡಿದ ಸಹಾಯ ಬಲಗೈಗೆ ತಿಳಿಯದಂತೆ ನಿರಂತರವಾಗಿ ನೆರವಾಗಿದ್ದರು. ಅವರ ಗುಣದಲ್ಲಿಯೇ 'ರಾಜಕುಮಾರ' ಎನ್ನುವ ಹೆಸರು ಅನ್ವರ್ಥವಾಗಿತ್ತು.Kenneth Cole Automatic Silver Round Dial Men's Watch | Genuine Leather Strap Material | Watches for Men Analog - KCWGX0099402MNW

ಅವರು ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಅನೇಕರಿಗೆ ಸಹಾಯ ಮಾಡಿದರು. ಈ ಎಲ್ಲಾ ಕಾರ್ಯಗಳು ಅವರ ನಿಧನದವರೆಗೂ ಬಹಿರಂಗವಾಗಿರಲಿಲ್ಲ. ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಗೋಶಾಲೆಗಳಿಗೂ ಅವರು ತೆರೆಮರೆಯಲ್ಲಿ ಸೇವೆ ಸಲ್ಲಿಸಿದ್ದರು.ಇದನ್ನು ಓದಿ:ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಗೆ 4 ವರ್ಷ...ಕುಟುಂಬಸ್ಥರು, ಅಭಿಮಾನಿಗಳಿಂದ ಪುಣ್ಯ ಸ್ಮರಣೆ!

ವರದಿಗಳ ಪ್ರಕಾರ, ಪುನೀತ್ ರಾಜ್‌ಕುಮಾರ್ 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು ಮತ್ತು 19 ಗೋಶಾಲೆಗಳಿಗೆ ಆರ್ಥಿಕವಾಗಿ ಬೆಂಬಲ ನೀಡಿದ್ದರು. ಇದರ ಜೊತೆಗೆ, 45ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಿದ್ದರು.

ಹೀಗೆ ಪುನೀತ್ ರಾಜ್‌ಕುಮಾರ್ ತಮ್ಮ ಸಮಾಜ ಸೇವೆಗಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿದ್ದರು. ಸಮಾಜ ಸೇವೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡು, ನಿಸ್ವಾರ್ಥ ಸೇವೆ ಸಲ್ಲಿಸಿದ್ದರು.