ನೂರಾರು ಕೋಟಿ ಮೌಲ್ಯದ ನಾಯಿಗಳನ್ನು ಸಾಕಿ 'ಡಾಗ್ ಸತೀಶ್' ಎಂದೇ ಖ್ಯಾತಿ ಪಡೆದಿರುವ ಸತೀಶ್, ಈಗ ಬಿಗ್ ಬಾಸ್ ಮೂಲಕ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುವ ಮೂಲಕ ಅವರು ಸುದ್ದಿಯಲ್ಲಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮವನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಗೊಳಿಸುವ ಶಕ್ತಿ ತಮಗಿದೆ ಎಂದು ಹೇಳಿಕೊಳ್ಳುವ ಸತೀಶ್, ತಮ್ಮ ₹100 ಕೋಟಿ ಮೌಲ್ಯದ ನಾಯಿಯೊಂದಿಗಿನ ಪ್ರೋಮೋವನ್ನು ಬಿಡುಗಡೆ ಮಾಡದೆ ಬಿಗ್ ಬಾಸ್ ತಮಗೆ ವಂಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಅವರು ನವೆಂಬರ್ 5ರ ದಿನಾಂಕವನ್ನು ನಿಗದಿಪಡಿಸಿದ್ದಾರೆ.ಅಪ್ಪು ಪರೋಪಕಾರದ ಪರಿಮಳ ಬಿಟ್ಟ ಮಹಾಮನವ.. ನಮ್ಮ ಹೃದಯಗಳಲ್ಲಿ ಸದಾ ಜೀವಂತ
ಈ ನಡುವೆ, ತಮ್ಮ ವಿರುದ್ಧ ಮಾತನಾಡುವವರು ಅದನ್ನು ಸಾಬೀತುಪಡಿಸಿದರೆ ₹5 ಲಕ್ಷ ನೀಡುವುದಾಗಿ 'ಡಾಗ್ ಸತೀಶ್' ಸಾರ್ವಜನಿಕ ಸವಾಲು ಹಾಕಿದ್ದಾರೆ.Kenneth Cole Automatic Silver Round Dial Men's Watch | Genuine Leather Strap Material | Watches for Men Analog - KCWGX0099402MNW
ತಾವು ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ರಾಜಕಾರಣಿಗಳಿಗೆ ವಿವಿಧ ತಳಿಗಳ ನಾಯಿಗಳನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಕೆಲವರು ಇದನ್ನು ಸುಳ್ಳು ಎಂದು ಹೇಳುತ್ತಿರುವುದರಿಂದ, ಯಾರಾದರೂ ಅದನ್ನು ಸುಳ್ಳು ಎಂದು ಸಾಬೀತುಪಡಿಸಿದರೆ ತಕ್ಷಣವೇ ಅವರಿಗೆ ₹5 ಲಕ್ಷ ನೀಡುವುದಾಗಿ ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ 'ಡಾಗ್ ಸತೀಶ್' ತಿಳಿಸಿದ್ದಾರೆ.