Skip to main content
ವಿಡಿಯೋ
1/3
politics

ಡಿ.ಕೆ. ಸುರೇಶ್ ಮಾತು: ಅಣ್ಣ ಸಿಎಂ ಆಗುವ ಆಸೆ; ಅದು ಹಣೆಯಲ್ಲಿ ಬರೆದಿದ್ದರೆ ಮಾತ್ರ..!

By Sushmitha R
ಡಿ.ಕೆ. ಸುರೇಶ್ ಮಾತು: ಅಣ್ಣ ಸಿಎಂ ಆಗುವ ಆಸೆ; ಅದು ಹಣೆಯಲ್ಲಿ ಬರೆದಿದ್ದರೆ ಮಾತ್ರ..!

ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ, ತಮ್ಮ ಸಹೋದರ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಆಸೆಯನ್ನು ವ್ಯಕ್ತಪಡಿಸಿದರು, ಆದರೆ ಅದೃಷ್ಟದ ಕುರಿತು ವಿವೇಕಯುತ ಮಾತುಗಳನ್ನಾಡಿದರು.

ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ, ತಮ್ಮ ಸಹೋದರ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಆಸೆಯನ್ನು ವ್ಯಕ್ತಪಡಿಸಿದರು, ಆದರೆ ಅದೃಷ್ಟದ ಕುರಿತು ವಿವೇಕಯುತ ಮಾತುಗಳನ್ನಾಡಿದರು.

ನನ್ನ ಅಣ್ಣನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ನನಗೂ ಇದೆ. ಆದರೆ, ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀಡಿದ ಮಹತ್ವದ ಹೇಳಿಕೆಯಾಗಿದೆ.Sheetal Associates Crepe Women's Mix Floral Printed Grown with Regular Sleeves Full Lenth and Square Neck | Beach Tipe Dress

ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ವಿಚಾರದ ಬಗ್ಗೆ ತಮಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನವೆಂಬರ್ ಕ್ರಾಂತಿ ಬಗ್ಗೆ ಅಜ್ಞಾನ.

ಕೆ.ಎನ್. ರಾಜಣ್ಣ ಅವರು ನೀಡಿದ ನವೆಂಬರ್ 15 ಕ್ರಾಂತಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ನವೆಂಬರ್ 15 ಕ್ರಾಂತಿ ಬಗ್ಗೆ ನನಗೆ ಮಾಹಿತಿ ಇಲ್ಲ. ನವೆಂಬರ್ ಅಂದರೆ ನನಗೆ ನೆನಪಾಗುವುದು ಕನ್ನಡ ರಾಜ್ಯೋತ್ಸವ ಮಾತ್ರ,ಎಂದು ಹೇಳುವ ಮೂಲಕ ಹೇಳಿಕೆಯಿಂದ ದೂರ ಉಳಿದರು.ಇದನ್ನು ಓದಿ: ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮುಂದುವರಿದು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಿದ್ದರಾಮಯ್ಯ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಒಳ್ಳೆಯದು, ಎಂದರು. ರಾಜಕೀಯದಲ್ಲಿ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸೂಚಿಸಿ, 90-95 ವಯಸ್ಸು ಆಗಿರುವವರೂ ಸಹ ರಾಜಕೀಯದಲ್ಲಿ ಇದ್ದಾರೆ ಎಂದು ತಿಳಿಸಿದರು.

ರಾಜಣ್ಣ ಅವರ ಸಲಹೆ ಮತ್ತು ಅಭಿಪ್ರಾಯಗಳ ಕುರಿತು ಮಾತನಾಡಿದ ಅವರು, ರಾಜಣ್ಣ ತಮ್ಮ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸುತ್ತಾರೆ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಎಲ್ಲಾ ಸಂದರ್ಭದಲ್ಲಿ ಎಲ್ಲರನ್ನು ಸಂತೋಷಪಡಿಸಲು ಆಗುವುದಿಲ್ಲ, ಎಂದು ಹೇಳಿದರು. ಕೊನೆಯಲ್ಲಿ, ತಾವು ಯಾವಾಗಲೂ ಎಣ್ಣೆಯನ್ನು (ಆಯಿಲ್) ಮೈಗೆ ಹಚ್ಚಿಕೊಳ್ಳುವುದಿಲ್ಲ ಎಂದು ಹಾಸ್ಯಮಯವಾಗಿ ಮಾತು ಮುಗಿಸಿದರು.ಇದನ್ನು ಓದಿ: ಒಪ್ಪಂದಗಳ ಸಲುವಾಗಿ ಭಾರತ-ಪಾಕ್‌ ಕದಮ ವಿರಾಮ ನನ್ನಿಂದ ಘೋಷಣೆಯಾಯಿತು; ಅಧ್ಯಕ್ಷ ಟ್ರಂಪ್ ಹೇಳಿಕೆ