ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಅವರು ಫಿನಾಲೆವರೆಗೂ ತಲುಪಬಹುದು ಎಂದು ಹಲವರು ನಿರೀಕ್ಷಿಸಿದ್ದಾರೆ. ಬಿಗ್ ಬಾಸ್ ಪ್ರವೇಶಿಸಿದ ನಂತರ, ತಮ್ಮ ಹಿಂದಿನ ಒಂದು ತಪ್ಪನ್ನು ಅವರು ಅರಿತುಕೊಂಡಿದ್ದಾರೆ. ಆ ತಪ್ಪನ್ನು ಜೀವನದಲ್ಲಿ ಮತ್ತೆ ಮಾಡದಿರಲು ರಕ್ಷಿತಾ ನಿರ್ಧರಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದ ರಕ್ಷಿತಾ ಶೆಟ್ಟಿ, ಬಂದ ದಿನವೇ ಹೊರ ನಡೆದಿದ್ದರು. ಒಂದು ವಾರದ ನಂತರ ಅವರು ಪುನಃ ದೊಡ್ಮನೆಗೆ ಮರಳಿದಾಗ, ಅವರ ಆಟದ ಶೈಲಿ ಎಲ್ಲರ ಗಮನ ಸೆಳೆಯಿತು. ಅವರು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ, ಅದನ್ನು ವ್ಯಕ್ತಪಡಿಸುವಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಸದ್ಯಕ್ಕೆ ಅವರ ಸಮಸ್ಯೆಯಾಗಿದೆ.Kenneth Cole Quartz Multifunction Blue Dial Blue Leather Strap Watch for Men - KCWGF0035601MN
ಇತ್ತೀಚೆಗೆ, ಕ್ಯಾಪ್ಟನ್ ರಘು, ಪ್ರೀತಿ ಎಂಬ ವಿಷಯದ ಬಗ್ಗೆ ಮಾತನಾಡಲು ಸ್ಪರ್ಧಿಗಳನ್ನು ಕೋರಿದರು. ಈ ಸಂದರ್ಭದಲ್ಲಿ ರಕ್ಷಿತಾ ಅವರು ಪ್ರೀತಿಯ ಬಗ್ಗೆ ಹಂಚಿಕೊಂಡ ಅನುಭವಗಳು ಎಲ್ಲರ ಗಮನ ಸೆಳೆದವು. ತಾವು ಮಾಡಿದ ಒಂದು ತಪ್ಪಿನ ಅರಿವು ಈಗಾಗಿದೆ ಎಂದು ಅವರು ತಿಳಿಸಿದರು.ಡಾಗ್ ಸತೀಶ್ ಹೊಸ ಚಾಲೆಂಜ್: ತಾನು ಹೇಳಿದ್ದು ಸುಳ್ಳು ಎಂದವರು ಸಾಬೀತು ಮಾಡಿದರೆ 5 ಲಕ್ಷ ನೀಡೋದಾಗಿ ಘೋಷಣೆ!
"ನಾನು ಮನೆಯಲ್ಲಿದ್ದಾಗ ಅಮ್ಮ ತಿಂಡಿ ಮಾಡಿಕೊಡುತ್ತಿದ್ದರು. ಆಗ ಇದು ಬೇಡ, ಉಪ್ಪಾಗಿದೆ, ಖಾರವಾಗಿದೆ ಎಂದೆಲ್ಲಾ ಹೇಳುತ್ತಿದ್ದೆ. ಅವರು ತಿನ್ನು ಎಂದು ಹೇಳಿದರೂ ನಾನು ಕೇಳುತ್ತಿರಲಿಲ್ಲ. ಆ ಸಮಯದಲ್ಲಿ ಅದರ ಮೌಲ್ಯ ಅಥವಾ ಅವರು ತೋರಿಸುತ್ತಿದ್ದ ಪ್ರೀತಿ ನನಗೆ ಅರ್ಥವಾಗಲಿಲ್ಲ. ಆದರೆ ಈಗ ಆ ತಪ್ಪನ್ನು ನಾನು ಮತ್ತೆ ಮಾಡುವುದಿಲ್ಲ. ಮನೆಗೆ ಹೋದ ಮೇಲೆ ಅಮ್ಮ ಏನು ಮಾಡಿದರೂ ತಿನ್ನುತ್ತೇನೆ, ದೂರು ಹೇಳುವುದಿಲ್ಲ" ಎಂದು ರಕ್ಷಿತಾ ಭಾವುಕರಾಗಿ ನುಡಿದರು.