ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್ ಅವರ ಎಚ್ಚರಿಕೆಯ ನಂತರವೂ ಬದಲಾದಂತೆ ಕಾಣುತ್ತಿಲ್ಲ. ಅವರು ಪದೇಪದೇ ರಕ್ಷಿತಾ ಶೆಟ್ಟಿ ಅವರನ್ನು ಗುರಿಯಾಗಿಸಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ.
ಹಿಂದೆ, ಜಾನ್ವಿ ಅವರೊಂದಿಗೆ ಸೇರಿಕೊಂಡು ರಕ್ಷಿತಾ ಅವರಿಗೆ "ನಾಗವಲ್ಲಿ" ಎಂಬ ಪಟ್ಟ ಕಟ್ಟಿ, ಮಧ್ಯರಾತ್ರಿ ಗೆಜ್ಜೆ ಶಬ್ದ ಮಾಡಿ ಅದನ್ನು ರಕ್ಷಿತಾ ಅವರ ಮೇಲೆ ಹಾಕಿದ್ದರು. ವಾರಾಂತ್ಯದವರೆಗೂ ಈ ಸತ್ಯವನ್ನು ಬಾಯಿ ಬಿಡದೆ, ಸುದೀಪ್ ಕ್ಲಾಸ್ ತೆಗೆದುಕೊಂಡ ನಂತರವಷ್ಟೇ ಅಶ್ವಿನಿ ಕ್ಷಮೆ ಯಾಚಿಸಿದ್ದರು.Kenneth Cole Quartz Multifunction Blue Dial Blue Leather Strap Watch for Men - KCWGF0035601MN
ಅಷ್ಟೇ ಅಲ್ಲದೆ, ಅಶ್ವಿನಿ ಅವರು ರಕ್ಷಿತಾ ಅವರನ್ನು "ಕಾರ್ಟೂನ್" ಮತ್ತು "ಈಡಿಯೆಟ್" ಎಂದು ಜರೆದಿದ್ದರು. "ಇವಳು ಎಸ್ ಕೆಟಗರಿ" ಎಂದು ಹೇಳಿರುವುದು ದೂರು ದಾಖಲಿಸಲು ಕಾರಣವಾಗಿದೆ. ಈ ಘಟನೆಗಳ ನಡುವೆಯೂ ಅಶ್ವಿನಿ ಮತ್ತೆ ರಕ್ಷಿತಾ ಅವರನ್ನು ನಿಂದಿಸಿದ್ದಾರೆ. ಈ ಬಾರಿಯ ಜಗಳದಲ್ಲಿ ರಾಶಿಕಾ ಕೂಡ ಭಾಗಿಯಾಗಿದ್ದಾರೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಚಿಕ್ಕ ಪ್ರೋಮೋದಲ್ಲಿ, ರಕ್ಷಿತಾ ಅಡುಗೆ ಮನೆಯಲ್ಲಿ ಒಬ್ಬರೇ ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಕಂಡುಬಂದಿದೆ. ಕ್ಯಾಪ್ಟನ್ ರಘು, "ರಕ್ಷಿತಾ ಮೇಲೆ ಒಂದೇ ಒಂದು ಕಂಪ್ಲೆಂಟ್ ಇಲ್ಲ, ಯಾರಿಲ್ಲ ಅಂದ್ರು ಅಡುಗೆ ಮಾಡ್ತಾಳೆ. ಇವಳನ್ನ ಮನೆ ಕೆಲಸದವಳು ಅಂದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.ಅಮ್ಮನನ್ನು ನೆನೆದು ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ರಕ್ಷಿತಾ..ಮಾಡಿದ ತಪ್ಪಿಗೆ ಕ್ಷಮೆಯಾಚನೆ
ನಂತರ, ರಕ್ಷಿತಾ ಗಾರ್ಡನ್ ಏರಿಯಾಗೆ ಬಂದು ರಾಶಿಕಾ ಅಡುಗೆ ಮಾಡಬೇಕು ಎಂದು ಹೇಳಿದ್ದಾರೆ. ಆಗ ಅಲ್ಲಿ ಮಾತನಾಡುತ್ತಿದ್ದ ರಾಶಿಕಾ ಮತ್ತು ಅಶ್ವಿನಿ ಗೌಡ, "ನಾನು ಮಾಡಲ್ಲ ಅಂತ ಹೇಳ್ತೀನಿ, ನನ್ನ ಕೈಗೆ ಪೆಟ್ಟಾಗಿದೆ ಮಾಡೋಕೆ ಆಗಲ್ಲ" ಎಂದು ರಾಶಿಕಾ ಹೇಳಿದ್ದಾಳೆ.
ರಕ್ಷಿತಾ ಈ ವಿಷಯವನ್ನು ಕ್ಯಾಪ್ಟನ್ ರಘು ಬಳಿ ಹೇಳಿದಾಗ, "ಅವರು ಈಗ ಹೇಳ್ತಾರೆ ನನ್ಗೆ ಅಡುಗೆ ಮಾಡೋಕೆ ಆಗಲ್ಲ ಅಂತ. ನಾನು ಕೂಡ ಮಾಡಲ್ಲ" ಎಂದಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ಮಧ್ಯ ಪ್ರವೇಶಿಸಿ, "ನಾನು ನೋಡ್ತಾ ಇದ್ದೇನೆ ಎಲ್ಲದಕ್ಕೂ ಮಾತಾಡ್ತಾ ಇದ್ದಾಳೆ. ತುಂಬಾ ಅತಿ ಆಡಬೇಡ, ನೀನು ಎಷ್ಟರಲ್ಲಿ ಇರಬೇಕು ಅಷ್ಟರಲ್ಲಿ ಇರಬೇಕು ನೀನು. ಎಲ್ಲದಕ್ಕೂ ಮಧ್ಯದಲ್ಲಿ ಬಂದ್ರೆ..." ಎಂದು ಬೆರಳು ತೋರಿಸಿ ಮಾತನಾಡಿದ್ದಾರೆ.
ಇದಕ್ಕೆ ರಘು, "ಯಾಕೆ ಎಲ್ಲರೂ ಸೇರಿ ಅವಳಿಗೆ ಬೈತಾ ಇದ್ದೀರಾ?" ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ, ರಕ್ಷಿತಾ ಮೇಲೆ ಕೆಲವರಿಗೆ ಸಿಟ್ಟು ಇರುವುದು ಸ್ಪಷ್ಟವಾಗಿದ್ದು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಆಕೆಯ ಮೇಲೆ ಮುಗಿಬಿದ್ದಂತೆ ಕಾಣುತ್ತಿದೆ. ಈ ವಿವಾದದ ಸಂಪೂರ್ಣ ವಿವರಗಳಿಗಾಗಿ ಇಂದಿನ ಎಪಿಸೋಡ್ ನೋಡಬೇಕಾಗಿದೆ.