Skip to main content
ವಿಡಿಯೋ
1/3
metro

ತೆರಿಗೆ ವಂಚನೆ, ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ!

By Shravanthi R
ತೆರಿಗೆ ವಂಚನೆ, ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ!

ನಗರದಲ್ಲಿ, ಹಲವು ದಿನಗಳಿಂದ RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಈ ಪೈಕಿ ತೆರಿಗೆ ಕಟ್ಟದೇ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆ ಸಲುವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು: ರಾಜಧಾನಿಯಾಲ್ಲಿ, ಮೋಟಾರು ವಾಹನ ಕಾಯ್ದೆ ಮತ್ತು ತೆರಿಗೆ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿರುವ ಖಾಸಗಿ ಬಸ್‌ಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (RTO) ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಬುಧವಾರ(ಅ. 29) ರಾತ್ರಿಯ ವೇಳೆ,  ಮಲ್ಲೇಶ್ವರಂ ಮಂತ್ರಿ ಮಾಲ್ ಬಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ಕಳೆದ ಹಲವು ದಿನಗಳಿಂದ ಕಾರ್ಯಾಚರಣೆಗಿಳಿದಿರುವ ಅಧಿಕಾರಿಗಳಿಂದ, ಬೆಂಗಳೂರಿನಲ್ಲಿ RTO ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ. ಇದಕ್ಕೆ ಬಹುಮುಖ್ಯ ಕಾರಣವಾಗಿ, ತೆರಿಗೆ ಪಾವತಿಸದೆ ಸಂಚಾರ ಮಾಡಲಾಗುತ್ತಿರುವುದು ಹಾಗೂ ಸುರಕ್ಷತೆ ನಿಯಮ‌ ಉಲ್ಲಂಘನೆ ಹಿನ್ನಲೆಯೆನ್ನಲಾಗಿದೆ. ಇದೇ ವೇಳೆ, ಹಲವು ಬಸ್‌ಗಳ ದಾಖಲಾತಿಗಳನ್ನು ಸತತವಾಗಿ ಪರಿಶೀಲಿಸುತ್ತಿರುವುದಾಗಿ ತಿಳಿದುಬಂದಿದೆ. SHIENZY Women's Kurta & Pant with Dupatta || Straight Kurta Outfits || Ethnic Set (SHZ/1499-1606)

ಕಾರ್ಯಾಚರಣೆಗಳ ಫಲಿತಾಂಶವಾಗಿ, ತೆರಿಗೆ ವಂಚನೆ ಮತ್ತು ಅಂತರರಾಜ್ಯ ಪರವಾನಗಿ ನಿಯಮಗಳ ಉಲ್ಲಂಘನೆಗಾಗಿ ಅಧಿಕಾರಿಗಳು ಹಲವು ಖಾಸಗಿ ಬಸ್‌ಗಳನ್ನು ಜಪ್ತಿ ಮಾಡುವ ಸೂಚನೆಯು ಇದೆ ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ರಾಜ್ಯಕ್ಕೆ ನಿಗದಿತ ತೆರಿಗೆ ಕಟ್ಟದೆ ಓಡಾಡುತ್ತಿದ್ದ ಅನ್ಯ ರಾಜ್ಯಗಳ ಪ್ರವಾಸಿ ಬಸ್‌ಗಳ (Tourist Buses) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಹೆಚ್ಚುವರಿಯಾಗಿ ಪರಿಶೀಲನೆ ಮುಂದುವರೆಯಲಿದೆ ಎನ್ನಲಾಗಿದೆ. ಇದನ್ನೂ ಓದಿ: 10 ವರ್ಷಗಳಿಂದ ಕೆಲಸ ಮಾಡ್ತಿದ್ದ ಮನೆಗೇ ಕನ್ನ‌ ಹಾಕಿದ ಮಹಿಳೆ - 50+ ಲಕ್ಷದ ಮೌಲ್ಯಾಭರಣ ವಶಕ್ಕೆ!