Skip to main content
ವಿಡಿಯೋ
1/3
cinema

ನನ್ನ ಮತ್ತೆ ಬಿಗ್‌ಬಾಸ್‌ ನಡುವೆ ಯಾರೂ ಬರಬೇಡಿ...ಮನೆ ಮಂದಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ರಕ್ಷಿತಾ!

By Ram Chethan
ನನ್ನ ಮತ್ತೆ ಬಿಗ್‌ಬಾಸ್‌ ನಡುವೆ ಯಾರೂ ಬರಬೇಡಿ...ಮನೆ ಮಂದಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ರಕ್ಷಿತಾ!

ಅಶ್ವಿನಿ ಗೌಡ ಅವರ ಮುಂದೆ ನೇರವಾಗಿ ಧೈರ್ಯವಾಗಿ ನಿಂತ ರಕ್ಷಿತಾ ಶೆಟ್ಟಿ, ಟಾಸ್ಕ್ ನಿರ್ಧಾರದಲ್ಲಿ ತಮ್ಮ ಅಭಿಪ್ರಾಯದೊಂದಿಗೆ ಗೇಮ್‌ನ್ನು ಕಂಟ್ರೋಲ್ ಮಾಡಿದ್ದಾರೆ. ಕ್ಯಾಪ್ಟನ್ಸಿ ರೇಸ್‌ನಲ್ಲಿ ರಾಶಿಕಾಗೆ ತೊಂದರೆ ಆಗುವಂತೆ ಮಾಡಿದ ರಕ್ಷಿತಾ, “ಥ್ಯಾಂಕ್ ಯೂ ಬಿಗ್ ಬಾಸ್” ಎಂದಂತೆ ಸ್ಪರ್ಧೆಯ ಪವರ್ ಡೈನಾಮಿಕ್ಸ್ ಬದಲಾಗಿದೆ.

'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ಸ್ಪರ್ಧಿಸುತ್ತಿರುವ ನಟಿ ರಕ್ಷಿತಾ ಶೆಟ್ಟಿ ಅವರು ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರ ಸ್ಪಷ್ಟ ಹಾಗೂ ದಿಟ್ಟ ನಿಲುವುಗಳಿಂದಾಗಿ ಎದುರಾಳಿಗಳಿಗೆ ಸದಾ ಉತ್ತರ ನೀಡಲು ಸಿದ್ಧರಿರುತ್ತಾರೆ. ಸಾಮಾನ್ಯವಾಗಿ, ಅಶ್ವಿನಿ ಗೌಡ ಅವರು ಮಾತನಾಡಲು ನಿಂತರೆ, ಅವರನ್ನು ಎದುರಿಸುವವರು ಕಡಿಮೆ. ಆದರೆ, ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ರಕ್ಷಿತಾ ಶೆಟ್ಟಿ ಇದಕ್ಕೆ ಹೊರತಾಗಿದ್ದಾರೆ. ಅಶ್ವಿನಿ ಗೌಡ ಎದುರಾದಾಗಲೆಲ್ಲಾ ಅವರು ಕಡಾಖಂಡಿತವಾಗಿ ಉತ್ತರ ನೀಡುತ್ತಾರೆ.

ಇತ್ತೀಚಿನ ಒಂದು ಪ್ರಸಂಗದಲ್ಲಿ, ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ಗೌಡ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ಹಿಂದೆ, ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅವರನ್ನು ರಾಶಿಕಾ ಮತ್ತು ಅಶ್ವಿನಿ ಗೌಡ ಗುರಿಯಾಗಿಸಿಕೊಂಡಿದ್ದರು. ಒಂದು ಟಾಸ್ಕ್ ವೇಳೆ ರಾಶಿಕಾ ಅವರು ರಕ್ಷಿತಾ ಅವರನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಎರಡೂ ಘಟನೆಗಳಿಗೆ ರಕ್ಷಿತಾ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದರು, ಮತ್ತು ಆ ಅವಕಾಶ ಈಗ ದೊರೆತಿದೆ.Titan Neo Iv Analog Black Dial Men's Watch NM1805NL01/NN1805NL01/NP1805NL01

ಗಿಲ್ಲಿ ನಟ ರಾಶಿಕಾ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ರಾಶಿಕಾ, ಗಿಲ್ಲಿ ಮತ್ತು ಅಶ್ವಿನಿ ಒಂದೇ ತಂಡದಲ್ಲಿದ್ದರು. ಟಾಸ್ಕ್‌ನಲ್ಲಿ ಗಿಲ್ಲಿ ತಂಡ ಗೆದ್ದ ನಂತರ, ಕ್ಯಾಪ್ಟನ್ ಟಾಸ್ಕ್‌ಗಾಗಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ತಂಡದ ಆರು ಸದಸ್ಯರಲ್ಲಿ ಐದು ಮಂದಿ ರಾಶಿಕಾ ಹೆಸರನ್ನು ಸೂಚಿಸಿದರೆ, ರಕ್ಷಿತಾ ಮಾತ್ರ ಇದಕ್ಕೆ ಸಹಮತ ಸೂಚಿಸಲಿಲ್ಲ. "ಎಲ್ಲರ ಸಹಮತ ಬೇಕು" ಎಂದು ಬಿಗ್ ಬಾಸ್ ಎರಡು ಬಾರಿ ತಿಳಿಸಿದರೂ, ರಾಶಿಕಾ ಹೆಸರಿಗೆ ಗಿಲ್ಲಿಯ ಒಪ್ಪಿಗೆ ಸಿಗಲಿಲ್ಲ.ಇದನ್ನು ಓದಿ:ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಮೇಲೆ ಮತ್ತೆ ದರ್ಪ ತೋರಿದ ಅಶ್ವಿನಿ ಗೌಡ...!

ಇದರಿಂದಾಗಿ, ಬಿಗ್ ಬಾಸ್ ಈ ಅವಕಾಶವನ್ನು ಹಿಂದಕ್ಕೆ ಪಡೆದುಕೊಂಡರು ಮತ್ತು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು. ರಾಶಿಕಾಗೆ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲುವ ಅವಕಾಶ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದರೂ, ಅದು ಸಾಧ್ಯವಾಗಲಿಲ್ಲ. ಬಿಗ್ ಬಾಸ್ ಆದೇಶ ಕೇಳಿದ ರಾಶಿಕಾ ಮತ್ತು ಅಶ್ವಿನಿ ಗೌಡಗೆ ಶಾಕ್ ಆಗಿತ್ತು. ಆಗ ರಕ್ಷಿತಾ ಶೆಟ್ಟಿ ಎದ್ದು ನಿಂತು, "ಹೇ! ಥ್ಯಾಂಕ್ ಯೂ ಬಿಗ್ ಬಾಸ್" ಎಂದು ಕೂಗಿದರು.

ಅವಕಾಶ ಕಳೆದುಕೊಂಡಿದ್ದನ್ನು ನೋಡಿ ಈಗಾಗಲೇ ಕೋಪಗೊಂಡಿದ್ದ ಅಶ್ವಿನಿ, ರಕ್ಷಿತಾ ಅವರ ಮಾತಿನಿಂದ ಮತ್ತಷ್ಟು ಸಿಟ್ಟಾದರು. ಅವರು ರಕ್ಷಿತಾ ಅವರನ್ನು ಹೆದರಿಸಲು ಮುಂದಾದಾಗ, ರಕ್ಷಿತಾ ಇತರರನ್ನು ನೋಡುತ್ತಾ, "ನಾನು ಬಿಗ್ ಬಾಸ್ ಜೊತೆ ಮಾತನಾಡುತ್ತಿದ್ದೇನೆ. ನನ್ನ ಮತ್ತು ಬಿಗ್ ಬಾಸ್ ಮಧ್ಯೆ ಯಾರೂ ಬರಬೇಡಿ" ಎಂದು ನೇರವಾಗಿ ಹೇಳಿದರು. ಇದು ಸ್ಪರ್ಧೆಯಲ್ಲಿನ ವೈಯಕ್ತಿಕ ಘರ್ಷಣೆಗಳನ್ನು ಮತ್ತಷ್ಟು ಹೆಚ್ಚಿಸಿದೆ.